ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಿನ್ನೆ (ಏಪ್ರಿಲ್ 8) ರಂದು 41ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ಈ ನಡುವೆ ಅಲ್ಲು ಅವರ ಬರ್ತ್ಡೇ ವಿಶ್ವೊಂದು ಟ್ವಿಟರ್ನಲ್ಲಿ ವೈರಲ್ ಆಗುತ್ತಿದೆ. ಆರ್ಆರ್ಆರ್ ಖ್ಯಾತಿಯ ಜೂನಿಯರ್ ಎನ್ಟಿಆರ್ ಅಲ್ಲು ಅರ್ಜುನ್‌ಗೆ ಶುಭ ಹಾರೈಸಿರುವ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಜೂ.ಎನ್ಟಿಆರ್ ವಿಶ್ ಹೀಗಿದೆ..: "ನಿಮಗೆ ಜನ್ಮದಿನದ ಶುಭಾಶಯಗಳು ಬಾವಾ. ಹ್ಯಾವ್ ಎ ಗ್ರೇಟ್ ಒನ್" ಎಂದು ಟ್ವಿಟರ್ ಮೂಲಕ ಜೂ. ಎನ್ಟಿಆರ್ ವಿಶ್ ಮಾಡಿದ್ದಾರೆ. ಇದಕ್ಕೆ ಅಲ್ಲು ಅರ್ಜುನ್, "ನಿಮ್ಮ ಪ್ರೀತಿಯ ಶುಭಾಶಯಗಳಿಗೆ ಧನ್ಯವಾದಗಳು ಬಾವಾ.. ಬೆಚ್ಚಗಿನ ಅಪ್ಪುಗೆಗಳು" ಎಂದಿದ್ದಾರೆ. ಜೂ.ಎನ್ಟಿಆರ್ ಅಲ್ಲಿಗೆ ಬಿಡದೇ ತಮಾಷೆಯಾಗಿ, 'ಒಂದೇ ಅಪ್ಪುಗೆ? ಪಾರ್ಟಿ ಇಲ್ವಾ ಪುಷ್ಪ?' ಎಂದು ಹಾಸ್ಯದ ಎಮೋಜಿ ಜೊತೆಗೆ ಪ್ರಶ್ನಿಸಿದ್ದಾರೆ. ಇದಕ್ಕುತ್ತರವಾಗಿ ಅಲ್ಲು ಅರ್ಜುನ್, 'ವಸ್ತುನ್ನಾ (ಬರಲಿದೆ)' ಎಂದು ಕಣ್ಣೊಡೆಯುವ ಎಮೋಜಿನೊಂದಿಗೆ ಹೇಳಿದ್ದಾರೆ.
ಟ್ವಿಟರ್ನಲ್ಲಿ ಅಲ್ಲು ಅರ್ಜುನ್ ಮತ್ತು ಜೂ.ಎನ್ಟಿಆರ್ ಅವರ ಮೋಜಿನ ತಮಾಷೆ ಅಭಿಮಾನಿಗಳನ್ನು ರಂಜಿಸಿದೆ. ಫ್ಯಾನ್ಸ್ ಕೂಡ ಇದಕ್ಕೆ ಕಾಮೆಂಟ್ ಮಾಡುತ್ತಾ, ಲೈಕ್ಸ್ ನೀಡುತ್ತಾ ಎಂಜಾಯ್ ಮಾಡಿದ್ದಾರೆ. ನಟರ ಅಭಿಮಾನಿಗಳ ನಡುವೆ ಶಾಂತಿ ಕಾಪಾಡಿಕೊಳ್ಳಲು ಇದು ಸ್ವಾಗತಾರ್ಹ ಬದಲಾವಣೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: 41ನೇ ವಸಂತಕ್ಕೆ ಕಾಲಿಟ್ಟ 'ಸ್ಟೈಲಿಶ್ ಪುಷ್ಪರಾಜ್'; ನಟ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ
-
Wishing you a Very Happy Birthday Bava @alluarjun. Have a great one !!
— Jr NTR (@tarak9999) April 8, 2023 " class="align-text-top noRightClick twitterSection" data="
">Wishing you a Very Happy Birthday Bava @alluarjun. Have a great one !!
— Jr NTR (@tarak9999) April 8, 2023Wishing you a Very Happy Birthday Bava @alluarjun. Have a great one !!
— Jr NTR (@tarak9999) April 8, 2023
ಅಲ್ಲು ಸಿನಿಮಾ ಬಗ್ಗೆ..: ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಮಲಯಾಳಂ ಸ್ಟಾರ್ ಫಹಾದ್ ಫಾಜಿಲ್ ಜೊತೆಗೆ ಅನಸೂಯಾ ಮತ್ತು ಸುನೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಲುವಾಗಿ ಚಿತ್ರತಂಡ ಟೀಸರ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡಿದೆ.
ಇದಲ್ಲದೇ ತೆಲುಗಿನ ಖ್ಯಾತ ನಿರ್ದೇಶಕ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಾಂಗ ಜೊತೆ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಮಾಡಲಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾವನ್ನು ಭೂಷಣ್ ಕುಮಾರ್ ಅವರ ಫಿಲ್ಮ್ ಸ್ಟುಡಿಯೋ ಮತ್ತು ಟೀ ಸೀರಿಸ್ ಹಾಗೂ ಸಂದೀಪ್ ರೆಡ್ಡಿ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ಅಲ್ಲು ಅರ್ಜುನ್ ಹೊಸ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲೇ ರಿಲೀಸ್ ಆಗಲಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ಲ್ಯಾನ್ ಮಾಡಿರುವ ಚಿತ್ರತಂಡ ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: 'ಪುಷ್ಪಾ2' ಪೋಸ್ಟರ್ ಬಿಡುಗಡೆ: ಅಲ್ಲು ಅರ್ಜುನ್ ಸೀರೆ ಲುಕ್ಗೆ ಸಮಂತಾ ಕಾಮೆಂಟ್ ಹೀಗಿತ್ತು..