'ಸಂಗೀತಕ್ಕೆ ಯಾವುದೇ ಗಡಿಯಿಲ್ಲ'.. ಎಲ್ಲೆಲ್ಲೂ ಸಂಗೀತದ ನಾದಕ್ಕೆ ತಲೆ ದೂಗುವವರು ಇದ್ದೇ ಇರ್ತಾರೆ. ಪ್ಯಾರಿಸ್‌ನಲ್ಲಿ ನಡೆದ ಲೂಯಿ ವಿಟಾನ್ ಶೋನಲ್ಲಿ ರ‍್ಯಾಪರ್ ಜೇ-ಝಡ್ ಅವರ ಇತ್ತೀಚಿನ ಪ್ರದರ್ಶನವು ಇದನ್ನು ಮತ್ತೆ ಮತ್ತೆ ಸಾಬೀತುಪಡಿಸಿದೆ. ಜೂನ್ 20 ರಂದು ಪ್ಯಾರೀಸ್ನಲ್ಲಿ ನಡೆದ ಪುರುಷರ ಫ್ಯಾಷನ್ ಶೋನಲ್ಲಿ ಅಂತಾರಾಷ್ಟ್ರೀಯ ಸಂಗೀತಗಾರ, ರ‍್ಯಾಪರ್ ಪಂಜಾಬಿ ಎಂಸಿ ಅವರ ಮುಂಡಿಯನ್ ತೋ ಬಾಚ್ ಕೆ ಹಾಡಿನ ರಿಮೀಕ್ಸ್ ಅನ್ನು ಪ್ರದರ್ಶಿಸಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
-
WOW! Listen to what Jay Z is performing @ the Louis Vuitton show in Paris. 👀 pic.twitter.com/sd5940pFzd
— Peter Kash (@PeterKash) June 20, 2023 " class="align-text-top noRightClick twitterSection" data="
">WOW! Listen to what Jay Z is performing @ the Louis Vuitton show in Paris. 👀 pic.twitter.com/sd5940pFzd
— Peter Kash (@PeterKash) June 20, 2023WOW! Listen to what Jay Z is performing @ the Louis Vuitton show in Paris. 👀 pic.twitter.com/sd5940pFzd
— Peter Kash (@PeterKash) June 20, 2023
ಟ್ವೀಟ್ ಕ್ಯಾಪ್ಶನ್ ಹೀಗಿದೆ..: "#LVMenSS24 ಗಾಗಿ @Pharrell ರ ಚೊಚ್ಚಲ ಸಂಗ್ರಹಣೆಯಲ್ಲಿ ಅವರ ಅಭಿನಯಕ್ಕಾಗಿ ಪಂಜಾಬಿ MC ನೈಟ್ರೈಡರ್ ರೀಮಿಕ್ಸ್‌ನೊಂದಿಗೆ #JayZ ಅವರನ್ನು ಪ್ರಶಂಸಿಸಲು ನಾವು ಸ್ವಲ್ಪ ಸಮಯ ತೆಗೆದುಕೊಳ್ಳಬಹುದೇ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವೀಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು, "ಪ್ಯಾರೀಸ್ನಲ್ಲಿ @LouisVuitton ಪ್ರದರ್ಶನದಲ್ಲಿ ಜೇ-ಝಡ್ ಮುಂಡಿಯನ್ ತೋ ಬಾಚ್ ಕೆ ಹಾಡನ್ನು ಪ್ರದರ್ಶಿಸಿದ್ದಾರೆ. ಇದು ಪಂಜಾಬಿ ಸಂಸ್ಕೃತಿ" ಎಂದು ಅವರು ಬಣ್ಣಿಸಿದ್ದಾರೆ.
ರ‍್ಯಾಪರ್ ಮತ್ತು ಫ್ಯಾಶನ್ ಡಿಸೈನರ್ ಫಾರೆಲ್ ವಿಲಿಯಮ್ಸ್ ಐಷಾರಾಮಿ ಫ್ಯಾಷನ್ ಹೌಸ್ ಎಲ್ವಿಯ ಸೃಜನಶೀಲ ನಿರ್ದೇಶಕರಾಗಿ ತಮ್ಮ ಚೊಚ್ಚಲ ಸಂಗ್ರಹವನ್ನು ಪ್ರದರ್ಶಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಾಲಿವುಡ್ ಸೆಲೆಬ್ರಿಟಿಗಳಾದ ರಿಹಾನ್ನಾ, A$AP ರಾಕಿ, ಬೆಯೋನ್ಸ್, ಝೆಂಡಾಯಾ, ಲಾ ರೋಚ್, ಕಿಮ್ ಕಾರ್ಡಶಿಯಾನ್ ಮತ್ತು ಹೆಚ್ಚಿನ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿ ಪ್ರದರ್ಶನಕ್ಕೆ ಮೆರುಗು ತಂದದ್ದು ವಿಶೇಷವಾಗಿತ್ತು.
ಇದನ್ನೂ ಓದಿ : ರಶ್ಮಿಕಾ, ರಣಬೀರ್ ಅಭಿನಯದ 'ಅನಿಮಲ್' ಶೂಟಿಂಗ್ ಕಂಪ್ಲೀಟ್; ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ
ಎರಡನೇ ಮಗುವಿನ ನಿರೀಕ್ಷೆಯಲ್ಲಿ ರಿಹಾನ್ನಾ, ರಾಕಿ: ರಿಹಾನ್ನಾ ತನ್ನ ಬೇಬಿ ಬಂಪ್ ಅನ್ನು ಚೆಕರ್ಡ್ ಡೆನಿಮ್ ಟಾಪ್ ಮತ್ತು ಜಂಪ್‌ಸೂಟ್‌ನಲ್ಲಿ ತೋರಿಸಿದರೆ, ಅವರ ದೀರ್ಘಕಾಲದ ಗೆಳೆಯ A$AP ರಾಕಿ ಡೆನಿಮ್ ಜಾಕೆಟ್ ಮತ್ತು ಬ್ರ್ಯಾಂಡ್‌ನ ಲೋಗೋದೊಂದಿಗೆ ಮುಚ್ಚಿದ ಜೋಲಾಡುವ ಜೀನ್ ಶಾರ್ಟ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಮೇ 2022 ರಲ್ಲಿ RZA ಹೆಸರಿನ ಗಂಡು ಮಗುವನ್ನು ಸ್ವಾಗತಿಸಿದ ನಂತರ ದಂಪತಿ ತಮ್ಮ ಎರಡನೇ ಮಗುವನ್ನು ಜೊತೆಯಾಗಿ ನಿರೀಕ್ಷಿಸುತ್ತಿದ್ದಾರೆ.
ಕಳೆದ ತಿಂಗಳು, ದಂಪತಿ ಮಗ RZA ಮೊದಲ ಹುಟ್ಟುಹಬ್ಬವನ್ನು ಆಚರಿಸಿದ್ದರು. ರಾಕಿ ಇನ್ಸ್ಟಾಗ್ರಾಮ್ನಲ್ಲಿ ಬರ್ತ್ಡೇ ಸೆಲೆಬ್ರೇಷನ್ ಫೋಟೋಗಳನ್ನು ಹಂಚಿಕೊಂಡಿದ್ದರು. ಅದಕ್ಕೆ, "ನನ್ನ ಮಗನಿಗೆ 1ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು" ಎಂದು ಬರೆದಿದ್ದಾರೆ. (RZA ಯನ್ನು ರಿಜ್ಜಾ ಎಂದು ಉಚ್ಚರಿಸಲಾಗುತ್ತದೆ)
ಇದನ್ನೂ ಓದಿ : ಯೋಗರಾಜ್ ಭಟ್ರ 'ಹೊಡಿರೆಲೆ ಹಲಗಿ' ಹಿಟ್: ನಿಶ್ವಿಕಾ ನಾಯ್ಡು ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ