ETV Bharat / entertainment

ಶಾರುಖ್​ ಖಾನ್​ ಜೊತೆ ನಟಿಸಲು ರಾಜಸ್ಥಾನಕ್ಕೆ ಹಾರಲಿದ್ದಾರೆ ಸೌತ್​ ಬ್ಯೂಟಿ ನಯನತಾರಾ - ಜವಾನ್

ಮುಂಬೈನಲ್ಲಿ ಒಂಬತ್ತು ದಿನಗಳ 'ಜವಾನ್​'​ ಶೂಟಿಂಗ್​​​ ನಡೆದಿದೆ. ಮುಂದಿನ ಹಂತದ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆಯಲಿದೆ.

jawan shooting schedule
ಶಾರುಖ್​ ಖಾನ್​ ಜೊತೆ ನಯನತಾರಾ ನಟನೆ
author img

By

Published : Mar 8, 2023, 4:49 PM IST

ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಜವಾನ್ ಶೂಟಿಂಗ್ ಕೊನೆಯ ಹಂತದಲ್ಲಿದೆ. ನಿರ್ದೇಶಕ ಅಟ್ಲೀ ಕುಮಾರ್ ನೇತೃತ್ವದ ಚಿತ್ರ ತಂಡವು ಇತ್ತೀಚೆಗೆ ಮುಂಬೈನಲ್ಲಿ ಒಂಬತ್ತು ದಿನಗಳ ಶೂಟಿಂಗ್​​​ ಪೂರ್ಣಗೊಳಿಸಿದೆ. ತಮಿಳಿನ ಬಹು ಬೇಡಿಕೆ ನಟಿ ನಯನತಾರಾ ಮುಂಬೈನಲ್ಲಿ ನಡೆದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು.

ರಾಜಸ್ಥಾನದಲ್ಲಿ ಮುಂದಿನ ಶೂಟಿಂಗ್? ಮುಂಬೈನಲ್ಲಿ ನಡೆದ ಶೂಟಿಂಗ್​ನಲ್ಲಿ ಚಿತ್ರ ತಂಡವು ಶಾರುಖ್​​ ಖಾನ್ ಮತ್ತು ನಯನತಾರಾ ಅವರನ್ನೊಳಗೊಂಡ ಕೆಲ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿದಿದೆ. ವರದಿಗಳ ಪ್ರಕಾರ, ಲೇಡಿ ಸೂಪರ್‌ಸ್ಟಾರ್ ಅವರು ಎಸ್‌ಆರ್‌ಕೆ ಅವರೊಂದಿಗಿನ ಕೆಲ ಸೀನ್​ಗಳಲ್ಲಿ ಬಹಳ ಖುಷಿ ಪಟ್ಟು ಅಭಿನಯಿಸಿದ್ದಾರೆ. ಈ ದೃಶ್ಯಗಳು ಪ್ರೇಕ್ಷಕರ ಮನ ಮುಟ್ಟಲಿದೆ ಎಂಬುದು ಚಿತ್ರತಂಡದ ವಿಶ್ವಾಸ. ನಟಿ ನಯನತಾರಾ ತಮಿಳುನಾಡಿಗೆ ವಾಪಸ್​ ಆಗಿದ್ದು, ಶೀಘ್ರದಲ್ಲೇ ರಾಜಸ್ಥಾನದ ಸೆಟ್‌ಗೆ ಮರಳಲಿದ್ದಾರೆ. ಮುಂದಿನ ಹಂತದ ಶೂಟಿಂಗ್​ ಡೇಟ್ಸ್ ಅನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಶೀಘ್ರದಲ್ಲೇ ಜವಾನ್ ಚಿತ್ರೀಕರಣಕ್ಕಾಗಿ ಚಿತ್ರತಂಡ ರಾಜಸ್ಥಾನಕ್ಕೆ ಹೋಗಲಿದೆ ಎನ್ನುವ ಮಾಹಿತಿ ಇದೆ.

ಸೌತ್​ ನಿರ್ದೇಶಕರೊಂದಿಗೆ ಎಸ್​​ಆರ್​ಕೆ ಮೊದಲ ಸಿನಿಮಾ: 'ಜವಾನ್' ದಕ್ಷಿಣ ಮತ್ತು ಹಿಂದಿ ಚಿತ್ರರಂಗದ ದೊಡ್ಡ ಪ್ರತಿಭೆಗಳ ಸಿನಿಮಾ. ಎಸ್‌ಆರ್‌ಕೆ ಮತ್ತು ನಯನತಾರಾ ಜೊತೆಗೆ, ತಮಿಳಿನ ಸೂಪರ್​ ಸ್ಟಾರ್ ವಿಜಯ್ ಸೇತುಪತಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಮೂರು ದಶಕಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ದಕ್ಷಿಣ ಚಿತ್ರರಂಗದ ನಿರ್ದೇಶಕರ ಜೊತೆ ಕೈಜೋಡಿಸಿರುವುದರಿಂದ ಈ ಸಿನಿಮಾ ಶಾರುಖ್​ ಖಾನ್​ ಅವರಿಗೆ ಬಹಳ ವಿಶೇಷವಾಗಿದೆ. ನಿರ್ದೇಶಕ ಅಟ್ಲೀ ಕೂಡ ಎಸ್‌ಆರ್‌ಕೆ ಜೊತೆಗೆ ಸಿನಿಮಾ ಮಾಡುತ್ತಿರುವ ಬಗ್ಗೆ ಬಹಳ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಹಿಂದೆಂದೂ ನೋಡಿರದ ಅವತಾರದಲ್ಲಿ ಸೂಪರ್‌ಸ್ಟಾರ್ ಶಾರುಖ್​ ಖಾನ್​​ ಅವರನ್ನು ತೆರೆ ಮೇಲೆ ತರುವುದಾಗಿ ಹೇಳಿ ಕೊಂಡಿದ್ದಾರೆ.

ಜೂನ್​ನಲ್ಲಿ ಜವಾನ್​ ಬಿಡುಗಡೆ: ನಿರ್ದೇಶಕ ಅಟ್ಲೀ ಕುಮಾರ್ ಅವರೇ ಬರೆದು ನಿರ್ದೇಶಿಸುತ್ತಿರುವ 'ಜವಾನ್' ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಆಗಿದ್ದು, ಎಸ್‌ಆರ್‌ಕೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿಂಗ್ ಖಾನ್ ಅವರ ಫಸ್ಟ್ ಲುಕ್​ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ಜವಾನ್ ಚಿತ್ರ 2021ರ ಸೆಪ್ಟೆಂಬರ್​ನಲ್ಲೇ ಕೆಲಸ ಆರಂಭಿಸಿದೆ. ಇದೇ ಜೂನ್ 2ರಂದು ತೆರೆಕಾಣಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಈ ಬಹುನಿರೀಕ್ಷಿತ ಚಿತ್ರ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಶಾರುಖ್​ 'ಜವಾನ್​' ಸಿನಿಮಾಗೆ ಸ್ಯಾಂಡಲ್​ವುಡ್​ ಹ್ಯಾಟ್ರಿಕ್​ ಹೀರೋ ಎಂಟ್ರಿ?

ಜವಾನ್​ ಸಿನಿಮಾದಲ್ಲಿ ಶಿವಣ್ಣ? ಸದ್ಯ ತಮ್ಮ 125ನೇ ಚಿತ್ರ ವೇದ ಸಕ್ಸಸ್​ನಲ್ಲಿರುವ ಕರುನಾಡ ಚಕ್ರವರ್ತಿ ಶಿವ ರಾಜ್​​ಕುಮಾರ್ ಜವಾನ್​ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ರಾಮ್ ಚರಣ್, ವಿಜಯ್ ಮತ್ತು ಶಿವ ರಾಜ್​​ಕುಮಾರ್ ಅವರನ್ನು ಜವಾನ್​​ ಚಿತ್ರತಂಡ ಸಂಪರ್ಕಿಸಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಹ್ಯಾಟ್ರಿಕ್ ಹೀರೋ ಆಪ್ತ ಮೂಲಗಳು ಸಹ ಶಿವಣ್ಣ ಬಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರೆ ಎಂದಿವೆ. ಆದರೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ಕಾಡಿನಂಚಿನ ಜನರ ಸಮಸ್ಯೆ ಪರಿಹರಿಸುವಂತೆ ಸಿಎಂಗೆ ಮನವಿ ಪತ್ರ ಸಲ್ಲಿಸಿದ ರಿಷಬ್​ ಶೆಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.