ETV Bharat / entertainment

ಗೆಳೆಯನೊಂದಿಗೆ ಅರ್ಜುನ್​ ಕಪೂರ್​ ಮನೆಗೆ ನಟಿ ಜಾಹ್ನವಿ ಕಪೂರ್ ಭೇಟಿ​ - ನಟಿ ಮಲೈಕಾ ಅರೋರಾ

ನಟಿ ಜಾಹ್ನವಿ ಕಪೂರ್ ಗೆಳೆಯ ಎನ್ನಲಾಗುತ್ತಿರುವ ಶಿಖರ್ ಪಹಾರಿಯಾ ಜೊತೆ ​ಅರ್ಜುನ್​ ಕಪೂರ್ ಮನೆಗೆ ಭೇಟಿ ನೀಡಿದ್ದಾರೆ.​

Janhvi Kapoor
ಜಾಹ್ನವಿ ಕಪೂರ್​
author img

By

Published : Jul 17, 2023, 5:48 PM IST

ನಟಿ ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್​ ಸಂಬಂಧ ಈಗಾಗಲೇ ಬಹಿರಂಗವಾಗಿದ್ದು, ಇಬ್ಬರೂ ಈ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಈ ಜೋಡಿ ಬಾಕುವಿಗೆ ವಿಹಾರಕ್ಕಾಗಿ ತೆರಳಿದ್ದಾರೆ. ಅವರು ಅಲ್ಲಿ ತಂಗಿರುವ ಮನೆಗೆ ಕೆಲವು ಆಪ್ತರು ಮತ್ತು ಕುಟುಂಬದ ಸದಸ್ಯರನ್ನು ಆಹ್ವಾನಿಸಿದ್ದರು. ಅರ್ಜುನ್​ ಸಹೋದರಿ, ನಟಿ ಜಾಹ್ನವಿ ಕಪೂರ್​ ತಮ್ಮ ವದಂತಿ ಗೆಳೆಯ ಶಿಖರ್ ಪಹಾರಿಯಾ ಜೊತೆ ಅಲ್ಲಿಗೆ ತೆರಳಿದ್ದರು. ನಟ ವರುಣ್ ಧವನ್ ಮತ್ತು ಅವರ ಪತ್ನಿ ನತಾಶಾ ದಲಾಲ್ ಕೂಡ ಭೇಟಿ ನೀಡಿದ್ದರು.

ಪಾಪರಾಜಿ ಖಾತೆಯಿಂದ ಹಂಚಿಕೊಂಡ ವಿಡಿಯೋದಲ್ಲಿ, ಜಾಹ್ನವಿ ಮತ್ತು ಶಿಖರ್ ಒಟ್ಟಿಗೆ ಕಾರಿನಲ್ಲಿ ತೆರಳುತ್ತಿರುವುದನ್ನು ಕಾಣಬಹುದು. ವದಂತಿಯಲ್ಲಿರುವ ಪ್ರೇಮ ಪಕ್ಷಿಗಳು ಅರ್ಜುನ್‌ನನ್ನು ಭೇಟಿ ಮಾಡುವಾಗ ಬಿಳಿ ಬಣ್ಣ ದಿರಿಸಿನಲ್ಲಿ ಅವಳಿಯಾಗಿ ಕಾಣಿಸಿಕೊಂಡರು. ಮತ್ತೊಂದೆಡೆ, ವರುಣ್ ಧವನ್ ನೀಲಿ ಮುದ್ರಿತ ಶರ್ಟ್​ನಲ್ಲಿ ಗಮನ ಸೆಳೆದರು. ಅವರ ಪತ್ನಿ ಮತ್ತು ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಜೊತೆಯಲ್ಲಿದ್ದರು. ಅವರು ಕಪ್ಪು ಪ್ಯಾಂಟ್ ಮತ್ತು ಬಿಳಿ ಕ್ರಾಪ್ ಟಾಪ್ ಧರಿಸಿದ್ದರು.

ಜಾಹ್ನವಿ ಕಪೂರ್ ಸಿನಿಮಾ.. ಇನ್ನೂ ಜಾಹ್ನವಿ ಕಪೂರ್​ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬವಾಲ್​, ದೇವರ, ಮಿಸ್ಟರ್​ ಅಂಡ್​​ ಮಿಸೆಸ್​ ಮಾಹಿ, ಉಲ್ಜಾ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ಚಿತ್ರಗಳಿಗೆ ಈಗಾಗಲೇ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಮುಂದಿನ ಪ್ರಾಜೆಕ್ಟ್​ಗಳು ಇನ್ನಷ್ಟೇ ಘೋಷಣೆಯಾಗಬೇಕಿದೆ. ಹೀಗೆ ಒಂದರ ಹಿಂದೆ ಒಂದರಂತೆ ಬಹುಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಅದರಲ್ಲಿ 'ಬವಾಲ್'​ ತೆರೆಕಾಣಲು ಸಜ್ಜಾಗಿದೆ. ಈ ಸಿನಿಮಾ ವಿಚಾರವಾಗಿಯೇ ಜಾಹ್ನವಿ ಕಪೂರ್​ ಸದ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ವದಂತಿಯ ಪ್ರೇಮಿಯೊಂದಿಗೆ ಬಾಲಿವುಡ್​ ಬ್ಯೂಟಿ ಜಾನ್ವಿ ಕಪೂರ್​: ಫ್ಯಾನ್ಸ್​ ಗೊಂದಲಕ್ಕೆ ಕಾರಣವಾಯ್ತು ಈ ಫೋಟೋ

ಜಾಹ್ನವಿ ಕಪೂರ್ ಮತ್ತು ವರುಣ್ ಧವನ್ ಅಭಿನಯದ ಬಹುನಿರೀಕ್ಷಿತ ರೊಮ್ಯಾಂಟಿಕ್ ಸಿನಿಮಾ 'ಬವಾಲ್‌'. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ನಿತೇಶ್ ತಿವಾರಿ ಆಕ್ಷನ್​ ಕಟ್​ ಹೇಳಿರುವ ಬವಾಲ್ ಜುಲೈ 21 ರಿಂದ ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ. ವಿಶ್ವ ಸಮರ 2 ರ ಹಿನ್ನೆಲೆಯನ್ನಿಟ್ಟುಕೊಂಡು ಕಥೆ ರಚಿಸಲಾಗಿದೆ.

ಚಿತ್ರತಂಡ ಕೆಲವು ದಿನಗಳ ಹಿಂದೆ ದಿಲ್ ಸೆ ದಿಲ್ ತಕ್ ಹಾಡನ್ನು ಅನಾವರಣಗೊಳಿಸಿದ್ದರು. ಪ್ಯಾರಿಸ್‌ನಲ್ಲಿ ಜೋಡಿ ನಡುವೆ ಪ್ರೇಮ ಚಿಗುರೊಡೆಯುತ್ತಿರುವ ದೃಶ್ಯಗಳು ಈ ದಿಲ್ ಸೆ ದಿಲ್ ತಕ್ ಹಾಡಿನಲ್ಲಿದೆ. ಅದಕ್ಕೂ ಮೊದಲು 'ತುಮ್ಹೆ ಕಿತ್ನಾ ಪ್ಯಾರ್ ಕರ್ತೆ' ಸಾಂಗ್​ ಅನ್ನು ರಿಲೀಸ್​ ಮಾಡಿದ್ದರು. ಈ ಹಾಡನ್ನು ಸಂಗೀತ ಮಾಂತ್ರಿಕ ಅರಿಜಿತ್ ಸಿಂಗ್ ಹಾಡಿದ್ದರೆ, ಮಿಥುನ್ ಅವರ ಸಂಯೋಜನೆ ಈ ಹಾಡಿಗಿತ್ತು.

ಇದನ್ನೂ ಓದಿ: ರೋಸ್​ ಡಿಸೈನ್​ ಡ್ರೆಸ್​ನಲ್ಲಿ ಬಾಲಿವುಡ್​ ಗುಲಾಬಿ: ಜಾನ್ವಿ ಕಪೂರ್ ಬವಾಲ್​ ಸಿನಿಮಾ ರಿಲೀಸ್​ಗೆ ರೆಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.