ETV Bharat / entertainment

'ಭೋಲಾಶಂಕರ್​​' ಉತ್ತಮ ಪ್ರದರ್ಶನ: ಸೌತ್​ನಲ್ಲೀಗ 'ಜೈಲರ್​'ನದ್ದೇ ಹವಾ - bhola shankar collection

ಸೌತ್ ಸಿನಿಮಾ ರಂಗದಲ್ಲಿ 'ಜೈಲರ್​' ಸದ್ದು ಮಾಡುತ್ತಿದ್ದು, ಭೋಲಾ ಶಂಕರ್​ಗೆ ಹಿನ್ನೆಡೆಯಾದಂತೆ ತೋರುತ್ತಿದೆ.

jailer and bhola shankar
ಭೋಲಾಶಂಕರ್ VS ಜೈಲರ್
author img

By

Published : Aug 12, 2023, 6:28 PM IST

ಟಾಲಿವುಡ್​ ಮೆಗಾಸ್ಟಾರ್​​ ಚಿರಂಜೀವಿ ಅಭಿನಯದ ಭೋಲಾಶಂಕರ್​ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವಿಕರಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 'ಭೋಲಾಶಂಕರ್​​' ಸೇರಿದಂತೆ ಬಹುನಿರೀಕ್ಷಿತ ಚಿತ್ರಗಳಾದ ಜೈಲರ್​, ಗದರ್​ 2, ಓಎಂಜಿ 2 ಕೂಡ ಇದೇ ವಾರ ತೆರೆಕಂಡ ಹಿನ್ನೆಲೆ ಬಾಕ್ಸ್​ ಆಫೀಸ್​ನಲ್ಲಿ ಪೈಪೋಟಿ ಏರ್ಪಟ್ಟಿದೆ. 'ಭೋಲಾಶಂಕರ್​​' ಉತ್ತಮ ಪ್ರದರ್ಶನ ಕಾಣುತ್ತಿದೆಯಾದರೂ, ಸೌತ್​ ಸಿನಿಮಾ ರಂಗದಲ್ಲಿ ಜೈಲರ್​ ಹೆಚ್ಚು ಸದ್ದು ಮಾಡುತ್ತಿದೆ.

ಮೆಹರ್​ ರಮೇಶ್​ ನಿರ್ದೇಶನದ ಭೋಲಾ ಶಂಕರ್ ಸಿನಿಮಾದಲ್ಲಿ ಟಾಲಿವುಡ್​ ಸೂಪರ್​ ಸ್ಟಾರ್​ ಚಿರಂಜೀವಿ ಮುಖ್ಯಪಾತ್ರದಲ್ಲಿ ಅಭಿನಯಿದ್ದಾರೆ. ಭಾರಿ ನಿರೀಕ್ಷೆಗಳೊಂದಿಗೆ ಬಿಡುಗಡೆ ಆದ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಮೆಗಾಸ್ಟಾರ್ ಅಭಿಮಾನಿಗಳು, ಪ್ರೇಕ್ಷಕರು ಚಿತ್ರದ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. ಆದ್ರೆ ಈ ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್​ನಲ್ಲಿ 28 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. ತೆಲುಗು ರಾಜ್ಯಗಳಲ್ಲೇ 15.51 ಕೋಟಿ ರೂ. ಸಂಪಾದನೆ ಮಾಡಿದೆ. ​ಆದ್ರೀಗ ಸಿನಿಮಾ ಸಂಬಂಧ ನೆಗೆಟಿವ್​ ಟಾಕ್​ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಕಲೆಕ್ಷನ್​ ಕುಸಿತ ಕಾಣುವ ಸಾಧ್ಯತೆಗಳಿವೆ.

ಈ ಸಿನಿಮಾ 1990 ರ ಸಂದರ್ಭ ಬಂದಿದ್ದರೆ ಸೂಪರ್​ ಹಿಟ್​ ಆಗುತ್ತಿತ್ತು. 20 ವರ್ಷಗಳ ಹಿಂದೆ ಬರಬೇಕಾದ ಸಿನಿಮಾ ಈಗ ಬಂದಿದೆ ಎಂದು ಕೆಲ ವಿಕ್ಷಕರು ಟೀಕಿಸಿದ್ದಾರೆ. ಸೌತ್​ ಸೂಪರ್​ ಸ್ಟಾರ್​​ಳಾದ ರಜನಿಕಾಂತ್​, ಕಮಲ್​ ಹಾಸನ್​ ಅವರಂತಹ ದೊಡ್ಡ ಸ್ಟಾರ್​ಗಳು ತಮ್ಮ ವಯಸ್ಸಿಗೆ ತಕ್ಕ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರೂ, ಮೆಗಾಸ್ಟಾರ್ ಇನ್ನೂ ಹಿಂದೆ ಇದ್ದಾರೆ. ಹಳೇ ಡ್ಯಾನ್ಸ್​, ರೊಮ್ಯಾನ್ಸ್ ಶೈಲಿಯನ್ನು ನಿಲ್ಲಿಸಬೇಕು. ಡ್ಯಾನ್ಸ್​ ಮಾಡಬೇಕೆಂದರೆ ಹೊಸ ಕೊರಿಯಾಗ್ರಾಫರ್​ಗಳನ್ನು ನೇಮಿಸಿಕೊಳ್ಳಲಲಿ ಎಂಬುದು ಹಲವರ ಅಭಿಪ್ರಾಯ.

ಚಿರಂಜೀವಿ ಕ್ಯಾಬ್​ ಡ್ರೈವರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಕೀರ್ತಿ ಸುರೇಶ್​​ ಅವರು ಚಿರಂಜೀವಿ ಅವರ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿರು ಅವರಿಗೆ ನಾಯಕಿಯಾಗಿ ತಮನ್ನಾ ಭಾಟಿಯಾ ನಟಿಸಿದ್ದಾರೆ.

ಇದನ್ನೂ ಓದಿ: 'ಹೋಮ್​ಸಿಕ್​​' ಟ್ರೇಲರ್ ಹಂಚಿಕೊಂಡ ಫರ್ಹಾನ್​ ಅಖ್ತರ್.. ಶಾರ್ಟ್ ಫಿಲ್ಮ್​​ನಲ್ಲಿ ಪುತ್ರಿ ಅಕಿರಾ ಅಭಿನಯ

ಬೋಲಾ ಶಂಕರ್ ಪ್ಲೇಸ್​ನಲ್ಲಿ ಜೈಲರ್: ಸದ್ಯ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ರಜನಿಕಾಂತ್​ ಮುಖ್ಯಭೂಮಿಕೆಯ ಜೈಲರ್​ ಸದ್ದು ಮಾಡುತ್ತಿದೆ. ಈ ಹಿನ್ನೆಲೆ ಭೋಲಾಶಂಕರ್​ ಪ್ರದರ್ಶನ ಕಾಣುತ್ತಿರುವ ಥಿಯೇಟರ್​ಗಳಲ್ಲಿ ಜೈಲರ್​ ಸ್ಕ್ರೀನಿಂಗ್​ಗೆ ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಜೈಲರ್​ ತೆರೆಕಂಡ ಎರಡೇ ದಿನಗಳಲ್ಲಿ ಸುಮಾರು 70 ಕೋಟಿ ರೂ. ಸಂಪಾದಿಸಿದ್ದು, 100 ಕೋಟಿ ರೂ. ಕ್ಲಬ್ ಸೇರುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: 'ಜಿರಳೆ ಕೊಂದರೆ ಹೀರೋ, ಚಿಟ್ಟೆ ಕೊಂದರೆ ವಿಲನ್​': ನಟಿ ಸಮಂತಾ ಹೀಗಂದಿದ್ದೇಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.