ಬೆಂಗಳೂರು: ಈಗಾಗಲೇ ಹಲವು ವಿಚಾರಗಳಿಂದ ಸದ್ದು ಮಾಡಿರುವ 'ಆದಿ ಪುರುಷ್' ಸಿನಿಮಾದ ಜೀವಾಳವಾಗಿರುವ 'ಜೈ ಶ್ರೀ ರಾಮ್' ಹಾಡು ಅದ್ದೂರಿ ಲೈವ್ ಫಾರ್ಮಮೆನ್ಸ್ ಮೂಲಕ ಬಿಡುಗಡೆಗೆ ಸಜ್ಜಾಗಿದೆ. ಮುಂಬೈನಲ್ಲಿ ನಡೆದ ಸಂಗೀತಗಾರ ಮತ್ತು ಸಂಯೋಜಕರಾದ ಅಜಯ್- ಅತುಲ್ ಕಾಂಬಿನೇಷನ್ನಲ್ಲಿ ಮೂಡಿ ಬಂದ ಲೈವ್ ಆರ್ಕೆಸ್ಟ್ರಾದಲ್ಲಿ ಈ ಹಾಡನ್ನು ಹಾಡುವ ಮೂಲಕ ಶನಿವಾರ ಬಿಡುಗಡೆ ಮಾಡಲಾಗುವುದು. ಅದ್ದೂರಿ ಸಮಾರಂಭದಲ್ಲಿ 30 ಜನ ಸಹ ಗಾಯಕರೊಂದಿಗೆ ಈ ಹಾಡನ್ನು ಹಾಡಲಾಗುವುದು
- " class="align-text-top noRightClick twitterSection" data="">
ಪುರಾಣದ ರಾಮಯಣ ಕಥೆ ಹೊಂದಿರುವ ಈ 'ಜೈ ಶ್ರೀ ರಾಮ್' ಹಾಡು ಚಿತ್ರದ ಪ್ರಮುಖ ಹಾಡಾಗಿದೆ. ಈಗಾಗಲೇ ಈ ಹಾಡಿನ ಬಗ್ಗೆ ಕುತೂಹಲ ಹೆಚ್ಚಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಮೂರು ನಿಮಿಷದ ಈ ಹಾಡಿಗೆ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ನೆಟಿಜನ್ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನೋಜ್ ಮುಂತ್ರಶಿರ್ ಶುಕ್ಲಾ ಸಾಹಿತ್ಯದ ಈ ಹಾಡಿಗೆ 20 ಗಾಯಕರು ಧ್ವನಿಯಾಗಿದ್ದಾರೆ,
ಈ ಹಿಂದೆ ಚಿತ್ರತಂಡ ಈ 'ಜೈ ಶ್ರೀ ರಾಮ್' ಹಾಡಿನ ಸಾಹಿತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಜನರು ಈ ಹಾಡಿಗೆ ಮನಸು ಸೋತಿದ್ದರು. ಇದೀಗ ಪೂರ್ಣ ಪ್ರಮಾಣದ ಹಾಡು ಬಿಡುಗಡೆ ಆಗುತ್ತಿರುವ ಹಿನ್ನೆಲೆ ಅಭಿಮಾನಿಗಳ ಹುಮ್ಮಸ್ಸು ಇಮ್ಮಡಿಯಾಗಿದ್ದು, ಅಭಿಮಾನಿಗಳಲ್ಲಿ ಈ ಹಾಡು ಸಾಕಷ್ಟು ಭಕ್ತಿ ಪರವಶತೆ ಮೂಡಿಸಲಿದೆ ಎನ್ನಲಾಗಿದೆ.
ಚಿತ್ರದ ಕುರಿತು: ನಟ ಪ್ರಭಾಸ್ ಮತ್ತು ನಟಿ ಕೃತಿ ಸನೋನ್ ಅಭಿನಯದ 'ಆದಿ ಪುರಷ್' ಸಿನಿಮಾವೂ ಭಾರತದ ಐತಿಹಾಸಿ ಪೌರಾಣಿಕ ಕಥೆಯಾಗಿರುವ ರಾಮಾಯಣ ಚಿತ್ರಕಥೆ ಹೊಂದಿದೆ. 700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಹಿಂದಿ ಮತ್ತು ತೆಲುವು ಸೇರಿದಂತೆ ಪಂಚಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಇದೆ ಜೂನ್ 16ರಂದು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಅತ್ಯುತ್ತಮ ಗ್ರಾಫಿಕ್ಸ್ ಅನ್ನು ಬಳಕೆ ಮಾಡಲಾಗಿದ್ದು, ಈ ಚಿತ್ರ ಮೊದಲ ಬಾರಿಗೆ ಜೂನ್ 13ರಂದು ನ್ಯೂಯಾರ್ಕ್ನ ಟ್ರೆಬೆಕಾ ಫೆಸ್ಟಿವಲ್ನಲ್ಲಿ ಪ್ರದರ್ಶನ ಕಂಡಿತು.
3ಡಿ ವರ್ಷನ್ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಓಂ ರಾವತ್ ನಿರ್ಮಾಣ ಮಾಡುತ್ತಿದ್ದಾರೆ. ಟಿ ಸೀರಿಸ್ನ ಭೂಷಣ್ ಕುಮಾರ್, ಕೃಷ್ಣ ಕುಮಾರ್, ರಾವತ್, ಪ್ರಸಾದ್ ಸುತಾರ್ ಮತ್ತು ರಾಜೇಶ್ ನಾಯರ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ಕಳೆದ ತಿಂಗಳು ಬಿಡುಗಡೆ ಮಾಡಲಾಗಿತ್ತು.
ಗ್ರಾಫಿಕ್ಸ್ ವಿಚಾರದಿಂದಾಗಿ ಈ ಚಿತ್ರ ಸಾಕಷ್ಟು ಟೀಕೆಗಳಿಗೆ ಗುರಿಯಾಗಿ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು. ಟೀಸರ್ನಲ್ಲಿ ಬರುವ ಕೆಲ ಗ್ರಾಫಿಕ್ಸ್ ಅನ್ನು ಅನೇಕರು ಕಾರ್ಟೂನ್ಗಳಿಗೆ ಹೋಲಿಕೆ ಮಾಡಿದ್ದರು. ಟೀಸರ್ ಟೀಕೆಗೊಳಗಾಗಿತ್ತು. ಈ ಹಿನ್ನಲೆ ಚಿತ್ರತಂಡ ಸುಧಾರಿತ ವಿಎಫ್ಎಕ್ಸ್ ದೃಶ್ಯಗಳನ್ನು ಕಳೆದ ತಿಂಗಳು ಹಂಚಿಕೊಂಡಿತು. ಇನ್ನು ಚಿತ್ರದಲ್ಲಿ ನಟ ಸೈಫ್ ಆಲಿ ಖಾನ್ ರಾವಣ ಪಾತ್ರ ನಿರ್ವಹಣೆ ಮಾಡುತ್ತಿರುವ ಕುರಿತು ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿತ್ತು.
ಇದನ್ನೂ ಓದಿ: ಕಾನ್ ಚಲನಚಿತ್ರೋತ್ಸವದಲ್ಲಿ ಭಾಗಿಯಾದ ಐಶ್ವರ್ಯಾ ರೈ: ವಸ್ತ್ರ ವಿನ್ಯಾಸಕ್ಕೆ ನೆಟ್ಟಿಗರಿಂದ ವಿಭಿನ್ನ ಟ್ರೋಲ್