ETV Bharat / entertainment

ಪ್ರಜಾರಾಜ್ಯದಲ್ಲಿ ''ಜೈ ಎಲೆಕ್ಷನ್ ಧನ್ ಧನಾ ಧನ್'' ಎಂದು ಹಾಡಿದ ರಿಯಲ್​ ಸ್ಟಾರ್​ ಉಪೇಂದ್ರ - prajarajya movie songs

ಪ್ರಜಾರಾಜ್ಯ ಸಿನಿಮಾದ "ಜೈ ಎಲೆಕ್ಷನ್ ಧನ್ ಧನಾ ಧನ್" ಹಾಡನ್ನು ಇತ್ತೀಚೆಗೆ ಉಪೇಂದ್ರ ಅವರು ಬಿಡುಗಡೆ ಮಾಡಿದರು.

Jai election dhan dhana dhan song
ಪ್ರಜಾರಾಜ್ಯ ಸಿನಿಮಾದ ಹಾಡು ಬಿಡುಗಡೆ
author img

By

Published : Dec 20, 2022, 12:56 PM IST

Updated : Dec 20, 2022, 3:05 PM IST

ಪ್ರಜಾರಾಜ್ಯ ಸಿನಿಮಾದ ಹಾಡು ಬಿಡುಗಡೆ

'ಪ್ರಜಾರಾಜ್ಯ' ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರೋ ಸ್ಯಾಂಡಲ್​ವುಡ್​​ ಚಿತ್ರ. ಯೋಗರಾಜ್ ಭಟ್ ಅವರ "ಜೈ ಎಲೆಕ್ಷನ್ ಧನ್ ಧನಾ ಧನ್" ಹಾಡಿಗೆ ರಿಯಲ್ ಸ್ಟಾರ್ ಉಪೇಂದ್ರ ದನಿ ನೀಡಿದ್ದಾರೆ. ವಿಜೇತ್ ಮಂಜಯ್ಯ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ.

ಇತ್ತೀಚೆಗೆ ಈ ಹಾಡನ್ನು ಉಪೇಂದ್ರ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು. ಯೋಗರಾಜ್ ಭಟ್ ಹಾಡನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ಸಂಗೀತ ನಿರ್ದೇಶಕರು ಟ್ಯೂನ್ ಹಾಕಿದ್ದಾರೆ. ಎಲೆಕ್ಷನ್ ಕುರಿತಾದ ಈ ಹಾಡು ಸೊಗಸಾಗಿದೆ. ನೀವು ನಿಮ್ಮ ಮತವನ್ನು ದೇಶ, ರಾಜ್ಯಕ್ಕಾಗಿ ಎನ್ನುವುದಕ್ಕಿಂತ, ನನ್ನ ಮನೆ, ನನ್ನ ಮಕ್ಕಳು ಹಾಗೂ ನನ್ನ ಜೀವನಕ್ಕೆ ಬಹಳ ಮುಖ್ಯ ಎಂದು ಭಾವಿಸಿ ಎಲ್ಲರೂ ಮತದಾನ ಮಾಡಿ ಎಂದು ಉಪೇಂದ್ರ ಹೇಳಿದ್ದಾರೆ.

Jai election dhan dhana dhan song
ಪ್ರಜಾರಾಜ್ಯ ಸಿನಿಮಾದ ಹಾಡು ಬಿಡುಗಡೆ

ಈ ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್, ನಾಗಾಭರಣ, ಅಚ್ಯುತ್ ಕುಮಾರ್, ಸುಧಾರಾಣಿ, ಶೋಭ್ ರಾಜ್, ವಿಜಯ್ ಭಾರ್ಗವ, ದಿವ್ಯ ಗೌಡ, ತಬಲನಾಣಿ, ಸುಧಾ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ವರದರಾಜು ಡಿ.ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು "ಪ್ರಜಾರಾಜ್ಯ" ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ವಿಜಯ್ ಭಾರ್ಗವ್ ಹಾಗೂ ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹಾಡು ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಇದನ್ನೂ ಓದಿ: ಭಾಷೆ ಮತ್ತು ಇಂಡಸ್ಟ್ರಿಗೆ ದರ್ಶನ್ ಕೊಡುಗೆ ಅಪಾರ, ಹೊಸಪೇಟೆ ಘಟನೆ ನನ್ನನ್ನು ಘಾಸಿಗೊಳಿಸಿದೆ: ಕಿಚ್ಚ ಸುದೀಪ್​

Last Updated : Dec 20, 2022, 3:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.