ETV Bharat / entertainment

ಮತ್ತೆ ತಾಯಿಯಾಗುತ್ತಿದ್ದಾರಾ ಆಲಿಯಾ ಭಟ್​? ಮುಂಬೈ ಪ್ರೆಸ್​ಕ್ಲಬ್​ ಕಾರ್ಯಕ್ರಮದಲ್ಲಿ ಭಾಗಿಯಾದ ತಾರಾ ಜೋಡಿ - ನೀತು ಕಪೂರ್​

ಕಳೆದ ವರ್ಷ ನವಂಬರ್​ನಲ್ಲಿ ಬಾಲಿವುಡ್​ ತಾರಾ ಜೋಡಿ ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್​ ಮೊದಲ ಮಗುವಿಗೆ ಪೋಷಕರಾಗಿದ್ದರು.

Alia Bhatt and Ranbir Kapoor
ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್
author img

By

Published : Jan 19, 2023, 6:27 PM IST

ಮುಂಬೈ: ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬುಧವಾರ ಸಂಜೆ ಮುಂಬೈ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದ ಅನೇಕ ಪೋಟೋಗಳು ಹಾಗೂ ವಿಡಿಯೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದಿವೆ. ಹೆಣ್ಣು ಮಗುವಿಗೆ ಪೋಷಕರಾದ ನಂತರ ಮೊದಲ ಬಾರಿಗೆ ಆಲಿಯಾ ಮತ್ತು ರಣಬೀರ್ ಕಪೂರ್​ ಜೋಡಿಯಾಗಿ ಇಂತಹ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಹೊರಬಿದ್ದಿರುವ ಕಾರ್ಯಕ್ರಮದ ಫೋಟೋಗಳನ್ನು ನೋಡಿ ಆಲಿಯಾ ಭಟ್ ಮತ್ತೆ ತಾಯಿಯಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಮೆಂಟ್​ಗಳ ಸುರಿಮಳೆ ಹರಿಸಿದ್ದಾರೆ​.

ಏನಿದೆ ಪೋಟೋಗಳಲ್ಲಿ?: ಮುಂಬೈ ಪ್ರೆಸ್​ಕ್ಲಬ್​ನಲ್ಲಿ ಆಯೋಜನೆಗೊಂಡಿದ್ದ ಕ್ಯಾಲೆಂಡರ್ ಬಿಡುಗಡೆ ಮತ್ತು ಮುಂಬೈ ಮೊಮೆಂಟ್ಸ್​ 2023 ಎಕ್ಸಲೆನ್ಸ್​ ಇನ್​ ಫೋಟೋಗ್ರಫಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್​ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಆಲಿಯಾ ತುಂಬಾ ಲೂಸ್​ ಫಿಟ್​ ಡ್ರೆಸ್​ ಹಾಕಿಕೊಂಡು ಬಂದಿದ್ದರು. ಹೆಚ್ಚಾಗಿ ತಾರೆಯರು ತಮ್ಮ ಪ್ರೆಗ್ನೆನ್ಸಿ ಸಮಯದಲ್ಲಿ ಲೂಸ್​ ಫಿಟ್​​ನಲ್ಲೇ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ನಾನಾ ರೀತಿಯ ಕಮೆಂಟ್​ಗಳನ್ನು ನೀಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಆಲಿಯಾ ಲೈಟ್​ ಮೇಕಪ್‌ನಲ್ಲಿ, ಸಡಿಲವಾದ ಬಿಳಿ ಬಣ್ಣದ ಪ್ಯಾಂಟ್ ಮತ್ತು ಬ್ಲೇಜರ್‌ನಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಉಡುಪಿನ ಮೇಲೆ ಕೂದಲನ್ನು ತೆರೆದು ಬಿಟ್ಟಿದ್ದರು. ರಣಬೀರ್ ಬಿಳಿ ಟೀ ಶರ್ಟ್ ಮತ್ತು ನೀಲಿ ಜೀನ್ಸ್‌ನಲ್ಲಿ ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋಗಳಲ್ಲಿ ಆಲಿಯಾ ಹೆಚ್ಚಿನ ಹೊತ್ತು ಬ್ಲೇಜರ್​ನಿಂದ ತಮ್ಮ ಹೊಟ್ಟೆಯನ್ನು ಕವರ್​ ಮಾಡಿಕೊಳ್ಳುತ್ತಲೇ ಇದ್ದರು.

ಇದಕ್ಕೆ ಇಂಬು ನೀಡುವಂತೆ ಆಲಿಯಾ ಭಟ್ ಬುಧವಾರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನೂ ಹಂಚಿಕೊಂಡಿದ್ದಾರೆ. ಪೋಸ್ಟ್​ನಲ್ಲಿ ಯಾವುದೋ ಭಾಗ 2ರ ಸುಳಿವು ನೀಡಿದ್ದಾರೆ. ಬುಧವಾರ, ಅವರು ಎರಡು ಹೂವುಗಳ ಮೂಲಕ ಕ್ಯಾಮೆರಾವನ್ನು ನೋಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. "2.0 (ಸೂರ್ಯ ಎಮೋಜಿ) ಟ್ಯೂನ್ ಆಗಿರಿ" ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ನಿಗೂಢ ಪೋಸ್ಟ್ ಹಂಚಿಕೊಂಡಿದ್ದು, ಹೆಚ್ಚಿನ ವಿವರಗಳನ್ನು ನೀಡಿಲ್ಲ. ಅದು ಏನಾಗಿರಬಹುದು ಎಂಬುದರ ಕುರಿತು ತಾರೆಯ ಅಭಿಮಾನಿಗಳು ಊಹಾಪೋಹಗಳ ಕಮೆಂಟ್​ ಮಾಡುತ್ತಿದ್ದಾರೆ. ಆಲಿಯಾ ಮತ್ತು ಪತಿ ರಣಬೀರ್ ಕಪೂರ್ ಮತ್ತೆ ಮಗು ನಿರೀಕ್ಷಿಸುತ್ತಿದ್ದಾರೆ ಎಂದು ಅನೇಕರು ನಂಬುವಂತೆ ಮಾಡಿದೆ.

ತರಹೇವಾರಿ ಕಮೆಂಟ್​ಗಳು: ನಟಿ ಆಲಿಯಾ ತಮ್ಮ ಪ್ರೊಡಕ್ಷನ್​ ಹೌಸ್​ನಿಂದ ಮತ್ತೊಂದು ಚಿತ್ರ ಬರುತ್ತಿದೆ ಎಂಬ ಸುಳಿವು ನೀಡುತ್ತಿದ್ದಾರೆಯೇ? ಎನ್ನುವ ಕಮೆಂಟ್​ಗಳೂ ಬಂದಿವೆ. ಆಲಿಯಾ ಪೋಸ್ಟ್​ಗೆ ಮಾಡಿರುವ ಕಮೆಂಟ್​ನಲ್ಲಿ ಸೂರ್ಯನ ಇಮೋಜಿ ಇರುವ ಕಾರಣ 'ಎಟರ್ನಲ್ ಸನ್​ಶೈನ್ ಪ್ರೊಡಕ್ಷನ್​' ಬಗ್ಗೆ ಹೇಳಿರುವ ಸಾಧ್ಯತೆಯೂ ಇದೆ ಎಂದು ಅಭಿಮಾನಿಗಳು ಚರ್ಚಿಸಿದ್ದಾರೆ. ಅಥವಾ ನಟಿಯ ವೈಯಕ್ತಿಕ ಜೀವನಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯಾ? ಅವಳು ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಇತ್ತೀಚೆಗೆ ರಣಬೀರ್​ ಹಾಗೂ ಆಲಿಯಾ ಕಾಣಿಸಿಕೊಂಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಅವಳು ಗರ್ಭಿಣಿಯಂತೆ ಕಾಣಿಸುತ್ತಿದ್ದರು. ಬ್ರೈಟ್​ ಆಗಿ ಕಾಣಿಸುತ್ತಿದ್ದಳು ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ.

ಈ ಬಗ್ಗೆ ಹೊರ ಬಿದ್ದಿಲ್ಲ ಅಧಿಕೃತ ಮಾಹಿತಿ: ಆದರೆ, ಆಲಿಯಾ ಮತ್ತೆ ಗರ್ಭಿಣಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಮುಂಬೈ ಮೊಮೆಂಟ್ಸ್ 2023 ಬಿಡುಗಡೆ ಸಮಾರಂಭದಲ್ಲಿ ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ಅವರ ಕುಟುಂಬಗಳ ಚಿತ್ರಗಳನ್ನು ಗೋಡೆಯ ಮೇಲೆ ಪ್ರದರ್ಶಿಸಲಾಗಿತ್ತು. ಈವೆಂಟ್‌ನಲ್ಲಿ ರಿಷಿ ಕಪೂರ್ ಮತ್ತು ನೀತು ಅವರ ಚಿತ್ರಗಳನ್ನು ಸಹ ಫ್ರೇಮ್​ ಮಾಡಲಾಗಿತ್ತು. ತಮ್ಮ ಹಳೆಯ ಕ್ಷಣಗಳನ್ನು ನೋಡಿದ ಆಲಿಯಾ ಭಟ್​ ಹಾಗೂ ರಣಬೀರ್ ಕಪೂರ್​ ತುಂಬಾ ಖುಷಿಯಾಗಿ ಕಾಣುತ್ತಿದ್ದರು.

ದಂಪತಿಗಳು ತಮ್ಮ ಮೊದಲ ಮಗುವಿಗೆ 2022 ನವೆಂಬರ್​ನಲ್ಲಿ ಪೋಷಕರಾದರು. ಮಗಳಿಗೆ ದಂಪತಿ ರಾಹಾ ಎಂದು ಹೆಸರಿಟ್ಟಿದ್ದಾರೆ. ಮಾತೃತ್ವ ವಿರಾಮದ ನಂತರ ಆಲಿಯಾ ಮತ್ತೆ ತಮ್ಮ ಕೆಲಸಗಳಿಗೆ ಹಿಂತಿರುಗಿದ್ದು, ಅದೇ ಬದ್ಧತೆಯಿಂದ ಕೆಲಸ ಪುನರಾರಂಭಿಸಿದ್ದಾರೆ.

'ಬ್ರಹ್ಮಾಸ್ತ್ರ' ಚಿತ್ರದ ಹಾಡಿನ ಸಾಹಿತ್ಯ ಮರೆತ ಆಲಿಯಾ: ಮುಂಬೈ ಮೊಮೆಂಟ್ಸ್​ 2023 ಎಕ್ಸಲೆನ್ಸ್​ ಇನ್​ ಫೋಟೋಗ್ರಫಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಆಲಿಯಾ ಅವರು ಹಾಡು ಹಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಅವರು ತಮ್ಮದೇ ಬ್ರಹ್ಮಾಸ್ತ್ರ ಚಿತ್ರದ ಹಾಡನ್ನು ಹಾಡುವಾಗ ಸಾಹಿತ್ಯ ಮರೆತಿದ್ದಾರೆ. ಕ್ಯಾಲೆಂಡರ್​ ಬಿಡುಗಡೆ ಸಮಾರಂಭದಲ್ಲಿ, ಅಭಿಮಾನಿಗಳ ಕೋರಿಕೆ ಮೇರೆಗೆ ಆಲಿಯಾ ತಮ್ಮ 'ಬ್ರಹ್ಮಾಸ್ತ್ರ' ಚಿತ್ರದ 'ಕೇಸರಿಯಾ' ಹಾಡನ್ನು ಹಾಡಲು ಪ್ರಾರಂಭಿಸಿದ್ದಾರೆ.

ಆದರೆ, ಮಧ್ಯದಲ್ಲಿ ಹಾಡಿನ ಸಾಹಿತ್ಯವನ್ನು ಮರೆತು ರಣಬೀರ್‌ ಅವರ ಜೊತೆ ಹಾಡು ಮುಂದುವರಿಸುವಂತೆ ಕೇಳಿದ್ದಾರೆ. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇದನ್ನೂ ಓದಿ: ಮಗಳ ಜೊತೆ ರಣಬೀರ್​ - ಆಲಿಯಾ ಔಟಿಂಗ್​; ಮೊಮ್ಮಗಳಿಗೆ ಲಹೋರಿ ಶುಭ ಕೋರಿದ ನೀತು ಕಪೂರ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.