ETV Bharat / entertainment

Exclusive Interview: ರಾಜಾ ಪೃಥು ರಾಯ್ ಪಾತ್ರಕ್ಕೆ ಜೀವ ತುಂಬಲಿದ್ದಾರಾ ಶಾಹಿದ್​ ಕಪೂರ್​? ನಿರ್ದೇಶಕ ವ್ಯಾಸ್​ ಹೇಳಿದ್ದೇನು? - ಈಟಿವಿ ಭಾರತ ಕನ್ನಡ

ನಿರ್ದೇಶಕ ಶೈಲೇಂದರ್ ವ್ಯಾಸ್ ಅವರು ರಾಜಾ ಪೃಥು ರಾಯ್ ಜೀವನಾಧಾರಿತ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ವ್ಯಾಸ್​ ಈಟಿವಿ ಭಾರತ್​ ಜೊತೆ ಮಾತನಾಡಿದ್ದಾರೆ.

Shahid Kapoor
ರಾಜಾ ಪೃಥು ರಾಯ್ ಪಾತ್ರಕ್ಕೆ ಜೀವ ತುಂಬಲಿದ್ದಾರಾ ಶಾಹಿದ್​ ಕಪೂರ್
author img

By

Published : Jun 10, 2023, 6:51 PM IST

ಚಲನಚಿತ್ರ ನಿರ್ದೇಶಕ ಶೈಲೇಂದರ್ ವ್ಯಾಸ್ ಅವರು ರಾಜಾ ಪೃಥು ರಾಯ್​ ಅವರ ಜೀವನ ಕಥೆಯನ್ನು ಆಧರಿಸಿದ ಸಿನಿಮಾವನ್ನು ನಿರ್ದೇಶಿಸಲು ಸಿದ್ಧರಾಗಿದ್ದಾರೆ. ಈ ಮೂಲಕ ಪೃಥು ರಾಯ್​ ಮತ್ತು ಟರ್ಕಿಶ್-ಆಫ್ಘಾನ್ ಆಕ್ರಮಣಕಾರ ಭಕ್ತಿಯಾರ್ ಖಿಲ್ಜಿ ನಡುವಿನ ಐತಿಹಾಸಿಕ ಯುದ್ಧಕ್ಕೆ ಜೀವ ತುಂಬಲಿದ್ದಾರೆ. ಪೃಥು ರಾಯ್​ ಪಾತ್ರದಲ್ಲಿ ಬಾಲಿವುಡ್​ ನಟ ಶಾಹಿದ್​ ಕಪೂರ್​ ನಟಿಸಬೇಕೆಂದು ಬಯಸುತ್ತಿರುವುದಾಗಿ ನಿರ್ಮಾಪಕರು ಹೇಳಿದ್ದಾರೆ.

ಈಟಿವಿ ಭಾರತ್​ನ ಮಿನಲ್​ ದೋಡಿಯಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ನಿರ್ಮಾಪಕ ಶೈಲೇಂದರ್ ವ್ಯಾಸ್​ ಈ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಸಿನಿ ಪಯಣವನ್ನು ಈ ವೇಳೆ ನೆನಪಿಸಿಕೊಂಡರು. ಶೈಲೇಂದರ್ ಅವರು ತಮ್ಮ ಸಿನಿಮಾದ ಗುರಿಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದರು.

ಪ್ರಶ್ನೆ: ನಿಮ್ಮ ಮುಂಬರುವ ನಿರ್ದೇಶನದ ಚಿತ್ರವು ರಾಜಾ ಪೃಥು ರಾಯ್ ಮತ್ತು ಭಕ್ತಿಯಾರ್ ಖಿಲ್ಜಿ ನಡುವಿನ ಐತಿಹಾಸಿಕ ಯುದ್ಧವನ್ನು ಮರುಪರಿಶೀಲಿಸುತ್ತದೆ. ಮಹಾನ್ ನಳಂದ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು ಎಂಬುದು ತಿಳಿದಿದೆ. ಈಟಿವಿ ಭಾರತ್ ಓದುಗರಿಗಾಗಿ ಚಿತ್ರದ ಕಥಾವಸ್ತುವನ್ನು ಹಂಚಿಕೊಳ್ಳಬಹುದೇ?

ರಾಜಾ ಪೃಥು ರಾಯ್​ ಅವರ ಕಥೆಯನ್ನು ದೇಶಕ್ಕೆ ಪರಿಚಯಿಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಹಲವಾರು ಬೌದ್ಧ ಸನ್ಯಾಸಿಗಳ ಹತ್ಯಾಕಾಂಡ, ದೇವಾಲಯಗಳು ಮತ್ತು ನಳಂದದ ದ್ವಂಸಕ್ಕೆ ಕಾರಣವಾದ ಕ್ರೂರ ವಿದೇಶಿ ಆಕ್ರಮಣಕಾರ ಭಕ್ತಿಯಾರ್ ಖಿಲ್ಜಿ ವಿರುದ್ಧ ಸಾಧಾರಣ ಸೈನ್ಯ ಹೊಂದಿದ್ದ ಪೃಥು ರಾಯ್ ಹೇಗೆ ಜಯಗಳಿಸಿದ ಎಂಬುದನ್ನು ಈ ಚಿತ್ರದ ಮೂಲಕ ಜನರಿಗೆ ತೋರಿಸಲಿದ್ದೇವೆ.

ಪ್ರಶ್ನೆ: ಐತಿಹಾಸಿಕ ಯುದ್ಧವನ್ನು ಹೊರತುಪಡಿಸಿ ಚಿತ್ರದಲ್ಲಿ ರಾಜಾ ಪೃಥು ರಾಯ್​ ಅವರ ಜೀವನದ ಯಾವ ಅಂಶವನ್ನು ಪ್ರಮುಖವಾಗಿ ಪ್ರಸ್ತುತಪಡಿಸಲಿದ್ದೀರಿ?

ಯುದ್ಧದ ಹೊರತಾಗಿ, ನನ್ನ ಚಿತ್ರವು ರಾಜಾ ಪೃಥು ರಾಯ್​ ಅವರಿಗೆ ಜನರ ಮೇಲಿದ್ದ ಪ್ರೀತಿ ಮತ್ತು ಸಮೂಹದೊಂದಿಗಿನ ನಂಬಿಕೆಯನ್ನು ಬಿಂಬಿಸುತ್ತದೆ. ಖಿಲ್ಜಿಯ ಆಕ್ರಮಣವನ್ನು ತಡೆಯಲು ವಿವಿಧ ಬುಡಕಟ್ಟು ಜನಾಂಗದ ಜನರಲ್ಲಿದ್ದ ಒಳ ವಿವಾದಗಳನ್ನು ಸರಿಪಡಿಸಿ, ಜಾಣತನದಿಂದ ಅವರನ್ನು ಒಗ್ಗೂಡಿಸಿ ಮನವೊಲಿಸಿದ ಬಗೆಯನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ.

ಇದನ್ನೂ ಓದಿ: Tejasswi Prakash: ಗೆಳೆಯ ಕರಣ್​ ಕುಂದ್ರಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ತೇಜಸ್ವಿ ಪ್ರಕಾಶ್​

ಪ್ರಶ್ನೆ: ಇಂತಹ ಐತಿಹಾಸಿಕ ಚಿತ್ರವನ್ನು ಮಾಡಲು ನಿಮಗೆ ಸ್ಫೂರ್ತಿ ದೊರಕಿದ್ದು ಹೇಗೆ?

ನನಗೆ ಇತಿಹಾಸದ ಬಗ್ಗೆ ಅಪಾರವಾದ ಆಕರ್ಷಣೆ ಇದೆ. ಅದರಲ್ಲಿ ಅನ್ವೇಷಿಸಲು ಮತ್ತು ಕಲಿಯಲು ಬಹಳಷ್ಟಿದೆ. ಕಥೆಗಳಲ್ಲಿ, ರಾಜಾ ಪೃಥುನ ಕಥೆಯು ನನಗೆ ಭಾರತದ ಬಗ್ಗೆ ಅಪಾರ ಹೆಮ್ಮೆಯನ್ನು ನೀಡಿದೆ. ಇಂತಹ ಅದ್ಭುತ ವ್ಯಕ್ತಿಯ ಕುರಿತು ಯಾರೂ ಚಿತ್ರ ಮಾಡಿಲ್ಲ ಎಂಬುದು ನನಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಭಾರತದ ಜನರು ಈ ಚಿತ್ರವನ್ನು ವೀಕ್ಷಿಸಲು ಮತ್ತು ನಮ್ಮ ಪೂರ್ವಜರು ಇದನ್ನು ಕಂಡು ಹೆಮ್ಮೆ ಅನುಭವಿಸಬೇಕೆಂದು ನಾನು ಬಯಸುತ್ತೇನೆ.

ಪ್ರಶ್ನೆ: ನೀವು ಪಾತ್ರಗಳಿಗೆ ಸರಿಹೊಂದುವಂತಹ ನಟರನ್ನು ಮನಸಲ್ಲಿ ಇಟ್ಟುಕೊಂಡು ಕಥೆಯನ್ನು ಬರೆದಿದ್ದೀರಾ?

ಹೌದು. ನಾನು ಕಥೆ ಬರೆಯುವಾಗ ಕೆಲವರು ನನ್ನ ಮನಸ್ಸಿನಲ್ಲಿದ್ದರು. ಅವರೊಂದಿಗೆ ನಾನು ಈಗಾಗಲೇ ಮಾತನಾಡಿದ್ದೇನೆ. ರಾಜಾ ಪೃಥು ರಾಯ್​ ಪಾತ್ರಕ್ಕೆ ಶಾಹಿದ್​ ಕಪೂರ್​ ಅವರನ್ನು ನಿಶ್ಚಯಿಸಿದ್ದೇನೆ. ಕೆಲವು ಪ್ರಮುಖ ಪಾತ್ರಗಳಿಗಾಗಿ, ನಾವು ಇನ್ನೂ ಮಾತುಕತೆಯಲ್ಲಿದ್ದೇವೆ. ಮುಂದಿನ ವರ್ಷದಲ್ಲಿ ಸಿನಿಮಾ ಬಿಡುಗಡೆಗೆ ಪ್ಲಾನ್​ ಮಾಡಿದ್ದೇವೆ.

ಇದನ್ನೂ ಓದಿ: On Father's Day.. ಪತ್ನಿ ಪ್ರಿಯಾಂಕಾ ಚೋಪ್ರಾ ಜೊತೆಗೆ ಫಾದರ್ಸ್​ ಡೇ ಆಚರಣೆ; ನಿಕ್​ ನೀಡಿದ ಕಾರಣ ಇದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.