ETV Bharat / entertainment

ಕಮಲ್ ಹಾಸನ್ ಜನ್ಮದಿನ: ಇಂಡಿಯನ್ 2 ಪೋಸ್ಟರ್ ರಿಲೀಸ್ - Kamal Haasan latest news

Kamal Haasan Indian 2 Poster: ಎಸ್ ಶಂಕರ್​ ನಿರ್ದೇಶನದ ಬಹುನಿರೀಕ್ಷಿತ ಇಂಡಿಯನ್ 2 ಸಿನಿಮಾದಿಂದ ಕಮಲ್​ ಹಾಸನ್ ಅವರ ಪೋಸ್ಟರ್ ರಿಲೀಸ್ ರಿಲೀಸ್​ ಆಗಿದೆ.

Kamal Haasan poster from Indian 2
ಇಂಡಿಯನ್ 2 ಸಿನಿಮಾದಿಂದ ಕಮಲ್​ ಹಾಸನ್ ಪೋಸ್ಟರ್ ರಿಲೀಸ್
author img

By ETV Bharat Karnataka Team

Published : Nov 7, 2023, 1:54 PM IST

Updated : Nov 7, 2023, 2:48 PM IST

ಸೌತ್​ ಸಿನಿಮಾ ಇಂಡಸ್ಟ್ರಿಯ ದಿಗ್ಗಜ ನಟ ಕಮಲ್ ಹಾಸನ್ ಅವರಿಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 69ನೇ ಜನ್ಮದಿನ ಆಚರಿಸಿಕೊಂಡ ನಟನಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಈ ವಿಶೇಷ ದಿನದಂದು ನಟನ ಮುಂದಿನ ಬಹುನಿರೀಕ್ಷಿತ ಚಿತ್ರ 'ಇಂಡಿಯನ್ 2'ರ ಪೋಸ್ಟರ್ ಅನಾವರಣಗೊಂಡಿದೆ.

ಇಂಡಿಯನ್ 2 ಸಿನಿಮಾ ಹಿಂದಿರುವ ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಲೈಕಾ ಪ್ರೊಡಕ್ಷನ್ಸ್' ನಟನ ಹೊಸ ಪೋಸ್ಟರ್ ಹಂಚಿಕೊಂಡಿದೆ. ಅಭಿಮಾನಿಗಳ ಕುತೂಹಲ ಹೆಚ್ಚಿಸುವ ಸಲುವಾಗಿ ಪೋಸ್ಟರ್ ಶೇರ್ ಮಾಡಿರುವ ಲೈಕಾ ಪ್ರೊಡಕ್ಷನ್ಸ್, "ಲೆಜೆಂಡ್​ನ ಜನ್ಮದಿನ ಆಚರಿಸಲಾಗುತ್ತಿದೆ! ಇಂಡಿಯನ್ 2 ತಂಡದಿಂದ ನಮ್ಮ ವೀರಶೇಖರನ್ ಸೇನಾಪತಿ (Veerasegaran Senapathy) ಅವರಿಗೆ ಜನ್ಮದಿನದ ಶುಭಾಶಯಗಳು" ಎಂದು ಬರೆದುಕೊಂಡಿದೆ.

ಇಂಡಿಯನ್ 2 ಸಿನಿಮಾ 1996ರಲ್ಲಿ ಬಂದ ಇಂಡಿಯನ್​​ ಚಿತ್ರದ ಸೀಕ್ವೆಲ್​​​. ಚಿತ್ರದಲ್ಲಿ, ಕಮಲ್ ಹಾಸನ್ ಅವರು ಸೇನಾಪತಿ ಪಾತ್ರ ಪುನರಾವರ್ತಿಸಿದ್ದಾರೆ. ಇಂಡಿಯನ್​ 2 ಬಿಗ್ ಸ್ಟಾರ್ ಕಾಸ್ಟ್ ಹೊಂದಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈ ಬಹುನಿರೀಕ್ಷಿತ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಸೀಕ್ವೆಲ್​​ ಭಾಗವೇ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಂಬಲಾಗಿದೆ. ಮೊದಲ ಭಾಗ ಮುಂದಿನ ವರ್ಷ ಏಪ್ರಿಲ್ 12 ರಂದು ತೆರೆಕಾಣಲಿದೆ ಎಂದು ಹೇಳಲಾಗಿದೆ. ಅದಾಗ್ಯೂ, ಚಿತ್ರತಂಡದಿಂದ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ.

ಇದನ್ನೂ ಓದಿ: ಹ್ಯಾಪಿ ಬರ್ತ್‌ಡೇ ಅನುಷ್ಕಾ ಶೆಟ್ಟಿ! ಯೋಗ ಶಿಕ್ಷಕಿ ವೃತ್ತಿಯಿಂದ ಸೂಪರ್‌ ನಟಿಯಾಗಿ ಬೆಳೆದ ತುಳುನಾಡ ಬೆಡಗಿ

ಲೈಕಾ ಪ್ರೊಡಕ್ಷನ್ಸ್ ಜೊತೆ ರೆಡ್ ಗೈಂಟ್ ಮೂವೀಸ್​​ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸುಬಾಸ್ಕರನ್ ಅಲ್ಲಿರಾಜ ಮತ್ತು ಉದಯನಿಧಿ ಸ್ಟಾಲಿನ್ ಸೇರಿ ಇಂಡಿಯನ್​ 2 ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನೆಡುಮುಡಿ ವೇಣು, ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಗುಲ್ಶನ್ ಗ್ರೋವರ್, ವಿವೇಕ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಸಮುದ್ರಕನಿ, ಬಾಬಿ ಸಿಂಹ, ಗುರು ಸೋಮಸುಂದರಂ, ಜಯಪ್ರಕಾಶ್, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ದೆಹಲಿ ಗಣೇಶ್ ಸೇರಿದಂತೆ ಹಲವರು ಅಭಿನಯಯಿಸುತ್ತಿದ್ದಾರೆ. ರವಿವರ್ಮನ್ ಮತ್ತು ರತ್ನವೇಲು ಛಾಯಾಗ್ರಹಣ, ಅನಿರುದ್ಧ್ ರವಿಚಂದರ್ ಸಂಗೀತ, ಎ. ಶ್ರೀಕರ್ ಪ್ರಸಾದ್ ಸಂಕಲನ ಈ ಚಿತ್ರಕ್ಕಿದೆ.

ಇದನ್ನೂ ಓದಿ: ಹ್ಯಾಪಿ ಬರ್ತ್​ಡೇ ಕಮಲ್​ ಹಾಸನ್!​ ಮೂರು ದಶಕಗಳ ನಂತರ ಮಣಿರತ್ನಂ 'Thug Life'ನಲ್ಲಿ ಅಭಿನಯ

ಹಿರಿಯ ನಟ ತಮ್ಮ 69ರ ಹರೆಯದಲ್ಲೂ ಅದ್ಭುತ ಕಥೆ, ವಿಭಿನ್ನ ಪಾತ್ರಗಳು, ಅಮೋಘ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸೋದನ್ನು ಮುಂದುವರಿಸಿದ್ದಾರೆ. ಕಮಲ್ ಹಾಸನ್ ನಿಸ್ಸಂದೇಹವಾಗಿ ತಮಿಳು ಚಿತ್ರರಂಗದ ಶಿಖರ ಅಂತಾನೇ ಹೇಳಬಹುದು ನೋಡಿ. ಬಾಲ್ಯ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಮಲ್​ ಹಾಸನ್​​​, ಬಣ್ಣದ ಜಗತ್ತಿನಲ್ಲಿ ಸುಮಾರು 64 ವರ್ಷಗಳ ಅನುಭವ ಹೊಂದಿದ್ದಾರೆ. ನಿರ್ದೇಶನ, ನಿರ್ಮಾಣ, ನೃತ್ಯ ಸಂಯೋಜನೆ, ಚಿತ್ರಕಥೆ, ಹಿನ್ನೆಲೆ ಗಾಯನ, ಮೇಕಪ್ ಮತ್ತು ಗೀತೆರಚನೆಯಂತಹ ವಿಭಿನ್ನ ವಿಭಾಗಗಳಲ್ಲಿಯೂ ಕೆಲಸ ಮಾಡಿದ್ದಾರೆ. 230ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

Last Updated : Nov 7, 2023, 2:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.