ETV Bharat / entertainment

ಲಾಂಗ್​​​ ಡ್ರೈವ್​ ಹೊರಟ ಚೊಚ್ಚಲ ಬಸುರಿ ಇಲಿಯಾನಾ ಡಿಕ್ರೂಜ್​ - ಅಭಿಮಾನಿಗಳೊಂದಿಗೆ ತಾಯ್ತನದ ಸಂಭ್ರಮ

ತಾಯ್ತನ ಘೋಷಣೆಯಿಂದ ಈ ಕುರಿತು ಅಪ್​ಡೇಟ್​ಗಳನ್ನು ಮಾಡುತ್ತಾ, ಅಭಿಮಾನಿಗಳೊಂದಿಗೆ ತಾಯ್ತನದ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ.

Ileana D'Cruz long drive  sun's out, bump's out

author img

By

Published : May 20, 2023, 5:22 PM IST

Updated : May 20, 2023, 10:31 PM IST

ಬೆಂಗಳೂರು​: ಮೊದಲ ಬಾರಿ ತಾಯಿಯಾಗುತ್ತಿರುವ ಇಲಿಯಾನ ಡಿ ಕ್ರೂಜ್​ ತಮ್ಮ ತಾಯ್ತನದ ಪ್ರಯಾಣದ ಖುಷಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೇಬಿ ಬಂಪ್​ ನೊಂದಿಗೆ ಕಾರಿನಲ್ಲಿ ಲಾಂಗ್​​ ಡ್ರೈವ್​ ಹೋಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವನ್ನು ಇನ್​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ, ಸನ್​ ಔಟ್​, ಬಂಪ್​ ಔಟ್​ ಎಂಬುದಾಗಿ ಬರೆದಿದ್ದು, ಇದಕ್ಕೆ ಸೂರ್ಯ ಮತ್ತು ಸನ್​ ಗ್ಲಾಸ್​ ಎಮೋಜಿಯನ್ನು ಹಾಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ: ವಿಡಿಯೋದಲ್ಲಿ ನಟಿ ಇಲಿಯಾನ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿರುವುದು ಕಾಣಬಹುದಾಗಿದೆ. ಬಿಳಿ ಶರ್ಟ್​​ ಮತ್ತು ಕಪ್ಪು ಬಣ್ಣದ ಪ್ಯಾಂಟ್​ ತೊಟ್ಟಿದ್ದು, ಸನ್​ಗ್ಲಾಸ್​ ಹಾಕಿ ಮಿಂಚಿದ್ದಾರೆ. ವಿಡಿಯೋದಲ್ಲಿ ನಟಿಯ ಬೇಬಿ ಬಂಪ್ ಅನ್ನು ಕಾಣಬಹುದಾಗಿದೆ. ಕಳೆದ ತಿಂಗಳು ನಟಿ ಇಲಿಯಾನ ತಾವು ತಾಯಿಯಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಮಾಮಾ ಎಂಬ ಪೆಂಡೆಂಟ್​ ಕೊತೆಗೆ ಮಗುವಿನ ಬಟ್ಟೆ ಹಾಕಿರುವ ಫೋಟೊ ಹಂಚಿಕೊಂಡ ನಟಿ, ಹೊಸ ಸಾಹಸ ಆರಂಭ ಎಂದು ಬರೆಯುವ ಮೂಲಕ ಈ ವಿಷಯವನ್ನು ಸಾರ್ವಜನಿಕವಾಗಿ ತಿಳಿಸಿದ್ದಾರೆ. ಈ ವೇಳೆ, ಮಗುವಿನ ಆಗಮನ ಶೀಘ್ರದಲ್ಲೇ ಆಗಲಿದ್ದು, ಮುದ್ದು ಕಂದನ ಭೇಟಿಯಾಗುವ ಕ್ಷಣ ಕಾಯಲು ಅಸಾಧ್ಯ ಎಂದು ಬರೆದಿದ್ದರು.

ಇದಾದ ಬಳಿಕ ಗರ್ಭಿಣಿಯ ತಿನ್ನುವ ಬಯಕೆಗಳ ಫೋಟೋವನ್ನು ಕೂಡ ಹಂಚಿಕೊಂಡ ಅವರು ತಾವು ಮನೆಯಲ್ಲಿ ನಳಪಾಕ ಶುರುಮಾಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಬಳಿಕ ತಮ್ಮ ಬೇಬಿ ಬಂಪ್​ ಬಂದಾಗಲೂ ಬಂಪ್​ ಅಲರ್ಟ್​ ಎಂದು ಹಾಕಿ ಹೊಟ್ಟೆ ಮುಂದೆ ಬರುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.

ತಾಯ್ತನದ ಕುರಿತು ಪ್ರತಿ ಅಪ್​ಡೇಟ್​ ನೀಡುವ ಇಲಿಯಾನ ಮಗುವಿನ ತಂದೆ ಯಾರು ಎಂಬ ಬಗ್ಗೆ ಎಲ್ಲಿಯೂ ತಿಳಿಸಿಲ್ಲ. ಈ ಹಿಂದೆ ನಟಿ ಇಲಿಯಾನ ಬಾಲಿವುಡ್​ ನಟಿ ಕತ್ರಿನಾ ಕೈಫ್​ ಅವರ ಸಹೋದರ ಸೆಬಸ್ಟಿಯನ್​ ಲ್ಯೂರೆಂಟ್​ ಮಿಷೆಲ್​ ಜೊತೆಗೆ ಡೇಟಿಂಗ್​ ನಡೆಸಿದ್ದರು. ಕತ್ರಿನಾ ಮತ್ತು ವಿಕ್ಕಿ ಕೌಶಲ್​ ಹಲವು ಸ್ನೇಹಿತರೊಂದಿಗೆ ಮಾಲ್ಡೀವ್ಸ್​​ಗೆ ಹಾರಿದಾಗ ಇವರ ಜೊತೆ ಇಲಿಯಾನ ಕೂಡ ಪ್ರಯಾಣ ನಡೆಸಿದ್ದರು.

ಈ ನಂತರ ಈ ಇಬ್ಬರೂ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡಿದ್ದವು. ಆದರೆ, ತಮ್ಮ ಸಂಬಂಧದ ಬಗ್ಗೆ ಅವರಿಬ್ಬರು ಈವೆರೆಗೂ ಅಧಿಕೃತಗೊಳಿಸಿಲ್ಲ. ಅದಕ್ಕೂ ಮೊದಲು ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್​ ಅವರೊಂದಿಗೆ ಕೆಲ ವರ್ಷಗಳ ಕಾಲ ನಟಿ ಡೇಟಿಂಗ್​ ನಡೆಸಿದ್ದರು.

ಈ ಮಧ್ಯೆ ಇಲಿಯಾ ಕಳೆದ ತಿಂಗಳು ಬಿಡುಗಡೆಯಾದ ಮ್ಯೂಸಿಕ್​ ವಿಡಿಯೋ ಸಬ್​ ಗಸಬ್​ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಕಡೆಯದಾಗಿ ಇವರು ನಟ ಅಭಿಷೇಕ್​ ಬಚ್ಚನ್​ ಜೊತೆ ಕೂಕಿ ಗುಲಟಿ ನಿರ್ದೇಶನದ ಬಿಗ್​ ಬುಲ್​ನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಅಜಯ್​ ದೇವಗನ್​ ಬಂಡವಾಳ ಹೂಡಿದ್ದರು. ಇಲಿಯಾನ ತಮ್ಮ ಮುಂದಿನ ಚಿತ್ರದಲ್ಲಿ ರಣದೀಪ್​ ಹೂಡ ಜೊತೆ ಅನ್​ಫೈರ್​ ಅಂಡ್​ ಲವ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 'ಈಗ ಕತ್ರಿನಾ ನಿಮ್ಮವಳಾಗಿದ್ದರೂ, ಮುಂದಿನ ಏಳು ಜನ್ಮದಲ್ಲಿ ನೀವು ನನ್ನವರು': ವಿಕ್ಕಿ ಕೌಶಲ್​ ಮೇಲೆ ಅಭಿಮಾನಿ ಪ್ರೀತಿ

Last Updated : May 20, 2023, 10:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.