ETV Bharat / entertainment

ಸಂಗೀತ ದಿಗ್ಗಜರ ಸಮಾಗಮ ; ಎ ಆರ್ ರೆಹಮಾನ್ ಪಾದಮುಟ್ಟಿ ಆಶೀರ್ವಾದ ಪಡೆದ ರ್‍ಯಾಪರ್​​ ಹನಿ ಸಿಂಗ್ - ಸಂಗೀತ ಮಾಂತ್ರಿಕ ಎಆರ್ ರೆಹಮಾನ್

ಅಬುಧಾಬಿಯಲ್ಲಿ ನಡೆಯುತ್ತಿರುವ ಇಂಟರ್​ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA)ನಲ್ಲಿ ಪಂಜಾಬಿ ರ್‍ಯಾಪರ್​​ ಹನಿ ಸಿಂಗ್ ಅವರು ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಅವರ ಪಾದಗಳನ್ನು ಸ್ಪರ್ಶಿಸುವ ಮೂಲಕ ಆಶೀರ್ವಾದ ಪಡೆದರು. ಅವರನ್ನು ಕಂಡ ಖುಷಿ ಹಾಗೂ ಆತ್ಮೀಯತೆಯ ಗಳಿಗೆಯ ಈ ಸಂದರ್ಭದ ವಿಡಿಯೋವನ್ನು ಹನಿ ಸಿಂಗ್​ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ..

IIFA 2022: Yo Yo Honey Singh bows down at Rahman's feet, says 'moment of my life'
ಎಆರ್ ರೆಹಮಾನ್ ಪಾದಮುಟ್ಟಿ ಆಶೀರ್ವಾದ ಪಡೆದ ರ್‍ಯಾಪರ್​​ ಹನಿ ಸಿಂಗ್
author img

By

Published : Jun 4, 2022, 8:09 PM IST

ಅಬುಧಾಬಿ : ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರನ್ನು ಯಾರು ತಾನೆ ಇಷ್ಟಪಡುವುದಿಲ್ಲ? ಸಂಗೀತ ಆರಾಧಕರೆಲ್ಲರೂ ಅವರನ್ನು ಇಷ್ಟಪಡುವವರೆ. ಗಾಯಕ ಯೋ ಯೋ ಹನಿ ಸಿಂಗ್ ಕೂಡ ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಅವರ ಕಟ್ಟಾ ಅಭಿಮಾನಿ ಅನ್ನೋದಕ್ಕೆ ಇದೊಂದು ನಿದರ್ಶನ.

IIFA 2022: Yo Yo Honey Singh bows down at Rahman's feet, says 'moment of my life'
ಎ ಆರ್ ರೆಹಮಾನ್ ಪಾದಮುಟ್ಟಿ ಆಶೀರ್ವಾದ ಪಡೆದ ರ್‍ಯಾಪರ್​​ ಹನಿ ಸಿಂಗ್

IIFA ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಗೀತ ದಿಗ್ಗಜ ಎ ಆರ್ ರೆಹಮಾನ್ ಸೇರಿದಂತೆ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಹಾಜರಾಗಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಎ ಆರ್ ರೆಹಮಾನ್ ಅವರನ್ನು ಕಂಡ ಪಂಜಾಬಿ ರ್‍ಯಾಪರ್​​ ಹನಿ ಸಿಂಗ್ ಅವರ ಆಶೀರ್ವಾದ ಪಡೆದಿದ್ದು ಹೀಗೆ..

ಶಿಷ್ಯ ತನ್ನ ನೆಚ್ಚಿನ ಗುರುಗಳಿಗೆ ನಮಸ್ಕಾರ ಮಾಡುವಂತೆ ಹನಿ ಸಿಂಗ್ ಅವರು​ ಎ ಆರ್ ರೆಹಮಾನ್ ಬಳಿ ತೆರಳಿ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದರು. ಈ ವಿಶೇಷ ಕ್ಷಣದ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, "ಎ ಆರ್ ರೆಹಮಾನ್ ಸರ್ ಅವರೊಂದಿಗೆ ನನ್ನ ಜೀವನದ ಕ್ಷಣ" ಎಂದು ಶೀರ್ಷಿಕೆ ಸಹ ಬರೆದುಕೊಂಡಿದ್ದಾರೆ.

IIFA 2022: Yo Yo Honey Singh bows down at Rahman's feet, says 'moment of my life'
ಎಆರ್ ರೆಹಮಾನ್ ಪಾದಮುಟ್ಟಿ ಆಶೀರ್ವಾದ ಪಡೆದ ರ್‍ಯಾಪರ್​​ ಹನಿ ಸಿಂಗ್

ಬಾಲಿವುಡ್​ ತಾರೆಯರಾದ ಅನನ್ಯಾ ಪಾಂಡೆ, ಸಾರಾ ಅಲಿ ಖಾನ್, ಟೈಗರ್ ಶ್ರಾಫ್, ನೋರಾ ಫತೇಹಿ, ಸಲ್ಮಾನ್ ಖಾನ್ ಮತ್ತು ಶೋ ಹೋಸ್ಟ್ ಮನೀಶ್ ಪಾಲ್, ಸಾರಾ ಅಲಿ ಖಾನ್, ಶಾಹಿದ್ ಕಪೂರ್ ಸೇರಿದಂತೆ ಅನೇಕ ಸೆಲಬ್ರೆಟಿಗಳು ಇಂಟರ್​ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA)ಗೆ ಹಾಜರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.