ETV Bharat / entertainment

ರೊಮ್ಯಾಂಟಿಕ್​ ಕಾಮಿಡಿ ಸಿನಿಮಾಗೆ ಜೋಡಿಯಾಗಲಿದ್ದಾರಾ ಇಬ್ರಾಹಿಂ ಅಲಿ ಖಾನ್ ​- ಖುಷಿ ಕಪೂರ್​? - ಈಟಿವಿ ಭಾರತ ಕನ್ನಡ

Rom-Com movie update: ಕರಣ್​ ಜೋಹರ್​ ನಿರ್ಮಾಣದ ಮುಂಬರುವ ರೊಮ್ಯಾಂಟಿಕ್​ ಕಾಮಿಡಿ ಸಿನಿಮಾದಲ್ಲಿ ಇಬ್ರಾಹಿಂ ಅಲಿ ಖಾನ್​ ಮತ್ತು ಖುಷಿ ಕಪೂರ್​ ನಟಿಸಲಿದ್ದಾರೆ.

Ibrahim Ali Khan and Khushi Kapoor to star in a rom-com?
ರೊಮ್ಯಾಂಟಿಕ್​ ಕಾಮಿಡಿ ಸಿನಿಮಾಗೆ ಜೋಡಿಯಾಗಲಿದ್ದಾರಾ ಇಬ್ರಾಹಿಂ ಅಲಿ ಖಾನ್​- ಖುಷಿ ಕಪೂರ್​?
author img

By ETV Bharat Karnataka Team

Published : Dec 12, 2023, 8:21 PM IST

ಜೋಯಾ ಅಖ್ತರ್​ ಅವರ 'ದಿ ಆರ್ಚೀಸ್'​ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಖುಷಿ ಕಪೂರ್​, ತಮ್ಮ ಮೊದಲ ಚಿತ್ರದಲ್ಲೇ ಉತ್ತಮ ಯಶಸ್ಸು ಕಂಡುಕೊಂಡಿದ್ದಾರೆ. ಇದೀಗ ಖ್ಯಾತ ಬಾಲಿವುಡ್​ ನಿರ್ದೇಶಕ ಕರಣ್​ ಜೋಹರ್​ ಅವರ ನಿರ್ಮಾಣದ ಮುಂಬರುವ ಚಿತ್ರದಲ್ಲಿ ಇಬ್ರಾಹಿಂ ಅಲಿ ಖಾನ್​ ಅವರೊಂದಿಗೆ ನಟಿಸಲು ಸಜ್ಜಾಗಿದ್ದಾರೆ. ಈ ಸ್ಟಾರ್​ ಮಕ್ಕಳಿಂದ ರೊಮ್ಯಾಂಟಿಕ್​ ಹಾಸ್ಯ ಸಿನಿಮಾವೊಂದು ತೆರೆ ಮೇಲೆ ಮೂಡಿಬರಲು ಸಿದ್ಧವಾಗಿದೆ. ಇದನ್ನು ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.

'ದಿ ಅರ್ಚೀಸ್​'ನಲ್ಲಿ ತಮ್ಮ ನೆಟ್​ಫ್ಲಿಕ್ಸ್​ ಚೊಚ್ಚಲ ಪ್ರವೇಶದ ನಂತರ ಖುಷಿ ಕಪೂರ್​ ಮತ್ತೊಂದು ಡಿಜಿಟಲ್​ ಯೋಜನೆಗೆ ತಯಾರಿ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಕರಣ್​ ಜೋಹರ್​ ಅವರ ಬ್ಯಾನರ್​ ಧರ್ಮ ಪ್ರೊಡಕ್ಷನ್ಸ್​ನ ಡಿಜಿಟಲ್​ ಅಂಗವಾದ ಧರ್ಮಟಿಕ್ಸ್​ ನಿರ್ಮಾಣದ ಮುಂಬರುವ ರೊಮ್ಯಾಂಟಿಕ್​ ಕಾಮಿಡಿ ಸಿನಿಮಾದಲ್ಲಿ ಅವರು ಇಬ್ರಾಹಿಂ ಅಲಿ ಖಾನ್​ ಜೊತೆ ಪರದೆ ಹಂಚಿಕೊಳ್ಳಲಿದ್ದಾರೆ. ಖುಷಿ ಕಪೂರ್​ ಮತ್ತು ಇಬ್ರಾಹಿಂ ಅಲಿ ಖಾನ್​ ಅವರ ಮುಂದಿನ ಯೋಜನೆಯು ಡೈರೆಕ್ಟ್​ ಟು ಡಿಜಿಟಲ್​ ಬಿಡುಗಡೆಯ ಉದ್ದೇಶವಾಗಿದೆ.

ಈ ಚಿತ್ರವನ್ನು ಶೌನಾ ಗೌತಮ್​ ನಿರ್ದೇಶಿಸಲಿದ್ದು, ಇದು ಅವರ ಚೊಚ್ಚಲ ಪ್ರಾಜೆಕ್ಟ್​. ಈ ಹಿಂದೆ ಶೌನಾ ಗೌತಮ್​ ಅವರು, ಸಂಜು, ಒನ್​ ಬೈ ಟು ಮತ್ತು ಕರಣ್​ ಜೋಹರ್​ ಅವರ ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಇದೀಗ ಸ್ವತಂತ್ರ ನಿರ್ದೇಶಕರಾಗಿ ಮಿಂಚಲು ಸಿದ್ಧರಾಗಿದ್ದಾರೆ. ಸದ್ಯ ಚಿತ್ರ ನಿರ್ಮಾಣ ತಂಡವು ಪ್ರಮುಖ ಒಟಿಟಿ ಪ್ಲಾಟ್​ಫಾರ್ಮ್​ನೊಂದಿಗೆ ಸ್ಟ್ರೀಮಿಂಗ್​ ಹಕ್ಕುಗಳ ಕುರಿತು ಮಾತುಕತೆ ನಡೆಸುತ್ತಿದೆ. ಚಿತ್ರಕ್ಕೆ ಇನ್ನೂ ಹೆಸರಿಡದಿದ್ದರೂ, ಚಿತ್ರತಂಡ ಡಿಫರೆಂಟ್​ ಹೆಸರಿನ ಹುಡುಕಾಟದಲ್ಲಿದೆ.

ಈ ಚಿತ್ರವು ಧರ್ಮ ಪ್ರೊಡಕ್ಷನ್ಸ್​ನೊಂದಿಗಿನ ಇಬ್ರಾಹಿಂ ಅವರ ಎರಡನೇ ಸಿನಿಮಾ. ಕರಣ್​ ಜೋಹರ್​ ಅವರ ಕಾಜೋಲ್​ ಮತ್ತು ಪೃಥ್ವಿರಾಜ್​ ನಟಿಸಿರುವ ಥ್ರಿಲ್ಲರ್​ ಸರ್ಜಮೀನ್​ನೊಂದಿಗೆ ಇಬ್ರಾಹಿಂ ದೊಡ್ಡ ಪರದೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಈ ಮಧ್ಯೆ ಇಬ್ರಾಹಿಂ ಮತ್ತು ಖುಷಿಯನ್ನು ಒಳಗೊಂಡಿರುವ ರೊಮ್ಯಾಂಟಿಕ್​ ಕಾಮಿಡಿ ಸಿನಿಮಾ ಸದ್ಯ ಪೂರ್ವ ನಿರ್ಮಾಣ ಹಂತದಲ್ಲಿದೆ. ತಂಡವು ಪಾತ್ರಗಳ ಆಯ್ಕೆಯಲ್ಲಿ ನಿರತವಾಗಿದೆ.

ಇನ್ನೂ ಖುಷಿ ಕಪೂರ್​ ಅವರು ಅಥರ್ವ ಮುರಳಿ ಅವರೊಂದಿಗೆ ಮುಂಬರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವದಂತಿಗಳಿವೆ. ಲವ್​ ಟುಡೇ ಹಿಂದಿ ರಿಮೇಕ್​ನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಹಿಮಾಂಶು ಬಿನೇಕರ್​ ಅವರ ದಿ ಗರ್ವಾಲ್​ ರೈಫಲ್ಸ್​ನಲ್ಲಿ ಮೋಹ್ನಾ ತನೇಜಾ ಪಾತ್ರವನ್ನು ನಿರ್ವಹಿಸಲಿದ್ದು, ಪ್ರಸ್ತುತ ಈ ಚಿತ್ರ ಪೂರ್ವ ನಿರ್ಮಾಣ ಹಂತದಲ್ಲಿದೆ.

ಇದನ್ನೂ ಓದಿ: ಡಂಕಿ vs ಸಲಾರ್​: ಅಡ್ವಾನ್ಸ್​ ಬುಕ್ಕಿಂಗ್​ನಲ್ಲಿ ಯಾವ ಸಿನಿಮಾ ಮುಂಚೂಣಿಯಲ್ಲಿದೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.