ನವದೆಹಲಿ: ತಮ್ಮ ಮೊಮ್ಮಗಳು ನವ್ಯಾ ನಂದಾ ಮದುವೆಯಾಗದೆ ಮಗುವನ್ನು ಹೊಂದಿದ್ದರೆ ತನಗೆ ಯಾವುದೇ ತೊಂದರೆ ಇಲ್ಲವೆಂದು ಬಾಲಿವುಡ್ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪತ್ನಿ ರಾಜಕಾರಣಿ ಮತ್ತು ನಟಿಯೂ ಆಗಿರುವ ಜಯಾ ಬಚ್ಚನ್ ಹೇಳಿಕೊಂಡಿದ್ದಾರೆ.
'ವಾಟ್ ದಿ ಹೆಲ್ ನವ್ಯಾ' ಪಾಡ್‌ಕ್ಯಾಸ್ಟ್‌ನಲ್ಲಿ ತನ್ನ ಮೊಮ್ಮಗಳ ಜೊತೆ ಮಾತನಾಡಿದ ಅವರು, ನಮ್ಮ ಕಾಲದಲ್ಲಿ ನಮಗೆ ಯಾವುದೇ ಪ್ರಯೋಗಗಳನ್ನು ಮಾಡಲು ಸಾಧ್ಯವಾಗಲಿಲ್ಲ. ದೈಹಿಕ ಆಕರ್ಷಣೆ ಎಂಬ ಅಂಶವು ಈಗ ಬಹಳ ಮುಖ್ಯ. ಆದರೆ, ಒಂದು ಸಂಬಂಧವು ಕೇವಲ ಪ್ರೀತಿ ಮತ್ತು ಹೊಂದಾಣಿಕೆಯ ಮೇಲೆ ಬದುಕುಳಿಯುತ್ತದೆ ಅನ್ನೋದನ್ನು ನಾನು ನಂಬುವುದಿಲ್ಲ. ನವ್ಯಾ ನವೇಲಿ ನಂದಾಗೆ ಮುಂದೆ ಮದುವೆಯಿಲ್ಲದ ಮಗು ಆದರೆ ತನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ನನ್ನ ಹೇಳಿಕೆ ಕೆಲವರಿಗೆ ಆಕ್ಷೇಪಾರ್ಹವೆಂದು ಅನ್ನಿಸಬಹುದು. ಆದರೆ, ದೈಹಿಕ ಆಕರ್ಷಣೆ ಮತ್ತು ಹೊಂದಾಣಿಕೆ ಕೂಡ ಬಹಳ ಮುಖ್ಯ ಅನ್ನೋದನ್ನು ನಾವು ಅರ್ಥೈಸಿಕೊಳ್ಳಬೇಕು. ನಮ್ಮ ಕಾಲದಲ್ಲಿ ನಾಮಗೆ ಈ ರೀತಿಯ ಯಾವುದೇ ಪ್ರಯೋಗ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಇಂದಿನ ಪೀಳಿಗೆಯವರು ಮಾಡುತ್ತಾರೆ. ಅವರು ಈ ರೀತಿಯ ಹೊಸ ಪ್ರಯೋಗ ಏಕೆ ಮಾಡಬಾರದು ಅಂತ ಕೇಳುವುದು ತಪ್ಪು. ಏಕೆಂದರೆ ಅದು ದೀರ್ಘಕಾಲೀನ ಸಂಬಂಧಕ್ಕೆ ಕಾರಣವಾಗಿದೆ. ದೈಹಿಕ ಆಕರ್ಷಣೆ ಇಲ್ಲದಿದ್ದರೆ ನಮ್ಮ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ನೀವು ಪ್ರೀತಿ ಮತ್ತು ಹೊಂದಾಣಿಕೆಯ ಮೇಲೆ ಶಾಶ್ವತವಾಗಿ ಜೊತೆಗಿರಲು ಸಾಧ್ಯವಿಲ್ಲ ಎಂದು ಜಯಾ ಬಚ್ಚನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-
"I have no problem if you have a child without marriage," Jaya Bachchan tells granddaughter Navya Nanda
— ANI Digital (@ani_digital) October 29, 2022 " class="align-text-top noRightClick twitterSection" data="
Read @ANI Story | https://t.co/6xhp8siQk0#JayaBachchan #NavyaNanda #Bollywood #AmitabhBachchan #ShwetaBachchan pic.twitter.com/vrCjP7geFQ
">"I have no problem if you have a child without marriage," Jaya Bachchan tells granddaughter Navya Nanda
— ANI Digital (@ani_digital) October 29, 2022
Read @ANI Story | https://t.co/6xhp8siQk0#JayaBachchan #NavyaNanda #Bollywood #AmitabhBachchan #ShwetaBachchan pic.twitter.com/vrCjP7geFQ"I have no problem if you have a child without marriage," Jaya Bachchan tells granddaughter Navya Nanda
— ANI Digital (@ani_digital) October 29, 2022
Read @ANI Story | https://t.co/6xhp8siQk0#JayaBachchan #NavyaNanda #Bollywood #AmitabhBachchan #ShwetaBachchan pic.twitter.com/vrCjP7geFQ
ಕೆಲವೊಮ್ಮೆ ಇದು ಕರುಣಾಜನಕ ಅಂತ ಅನ್ನಿಸಬಹುದು. ನಮಗೆ ಅದರ ಬಗ್ಗೆ ಯೋಚಿಸಲು ಸಹ ಸಾಧ್ಯವಾಗಲಿಲ್ಲ. ಆದರೆ, ನನ್ನ ನಂತರದ ಯುವ ಪೀಳಿಗೆ, ಶ್ವೇತಾ ಅವರ ಪೀಳಿಗೆ, ನವ್ಯಾ ಅವರದು ವಿಭಿನ್ನವಾದ ಪೀಳಿಗೆಯಾಗಿದೆ. ಇವರು ಆ ಅನುಭವವನ್ನು ಪಡೆಯುವುದು ಅಪರಾಧ ಎಂದು ಭಾವಿಸುತ್ತಾರೆ. ಆದರೆ, ಇದು ತುಂಬಾ ತಪ್ಪು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಯುವ ಪೀಳಿಗೆಗೆ ಸಲಹೆನೀಡಿದ ಜಯಾ ಬಚ್ಚನ್, ನಾನು ಅದನ್ನು ಯಾವುದೇ ಮುಚ್ಚುಮರೆ ಇಲ್ಲದೇ ಕ್ಲಿನಿಕಲ್ ಆಗಿ ನೋಡುತ್ತಿದ್ದೇನೆ. ಭಾವನೆಯ ಕೊರತೆಯಿರುವುದರಿಂದ ಇಂದು ನೀವು ನಿಮ್ಮ ಉತ್ತಮ ಸ್ನೇಹಿತನನ್ನು ಮದುವೆಯಾಗಬೇಕು. ಆ ವ್ಯಕ್ತಿಯ ಜೊತೆಗೆ ಕುಳಿತು ಮಾತನಾಡಬೇಕು. ನಿಮ್ಮ ಇಷ್ಟ ಮತ್ತು ಕಷ್ಟಗಳನ್ನು ಹೇಳಿಕೊಳ್ಳಬೇಕು. ಮಗು ಮಾಡಿಕೊಳ್ಳುವ ಬಗ್ಗೆ ಮನಸ್ಸು ಬಿಚ್ಚಿ ಅಭಿಪ್ರಾಯ ಹಂಚಿಕೊಳ್ಳಿ. ಸಮಾಜ ಹೇಳುವ ಪ್ರಕಾರ ಮುಂದೆ ಒಂದು ದಿನ ಮದುವೆಯನ್ನು ಆಗಿ ಎಂದಿದ್ದಾರೆ.
ಹಾಗೆ ಮುಂದುರೆದು ನೀನು ಮದುವೆಯಾಗದೆ ಮಗುವನ್ನು ಹೊಂದಲು ಬಯಸಿದರೆ ತನಗೆ ಯಾವುದೇ ತೊಂದರೆ ಇಲ್ಲ ಮೊಮ್ಮಗಳಿಗೆ ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಬಿಗ್ ಸ್ಕ್ರೀನ್ ಮೇಲೆ ಗುರುತಿಸದಿದ್ದರೂ, ಪಾಡ್‌ಕ್ಯಾಸ್ಟ್ ಎಂಬ ಈ ರೀತಿಯ ಸಣ್ಣ ಪರದೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಸದ್ಯ ಪುತ್ರಿ ಶ್ವೇತಾ ಬಚ್ಚನ್ ಮತ್ತು ಮೊಮ್ಮಗಳು ನವ್ಯಾ ಅವರೊಂದಿಗೆ ನಟಿ ಜಯಾ ಬಚ್ಚನ್ ತಮ್ಮ ಅಭಿಪ್ರಾಯವನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ. ಇದೊಂದು ಪ್ರಸ್ನೋತ್ತರ ವೇದಿಕೆಯಾಗಿದ್ದು ಆಗಾಗ ಈ ರೀತಿ ತಮ್ಮ ಅನಿಸಿಕೆಗಳನ್ನು ಇವರು ಹಂಚಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ: ಆಯ್ದ ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ಆರೋಪ.. ದೂರು ನೀಡಿದ್ರೆ ಲೋಕಾಯುಕ್ತ ತನಿಖೆ ಮಾಡುತ್ತೆ: ಸಚಿವ ಆರಗ