ETV Bharat / entertainment

'ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಉಡುಗೊರೆ': ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ಯಶ್​ ಮನವಿ - yash birthday

Rocking star Yash: ಸೋಮವಾರ ರಾಕಿಂಗ್​ ಸ್ಟಾರ್ ಯಶ್​​ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಯಶ್​​ ​ತಮ್ಮ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

rocking star yash
ರಾಕಿಂಗ್​ ಸ್ಟಾರ್ ಯಶ್​​
author img

By ETV Bharat Karnataka Team

Published : Jan 5, 2024, 12:28 PM IST

Updated : Jan 5, 2024, 2:29 PM IST

ರಾಕಿಂಗ್ ಸ್ಟಾರ್ ಯಶ್.. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತೀಯ​​ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ. ‌ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ‌ ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿರುವ ಯಶ್ ಅವರೀಗ ಪ್ಯಾನ್ ಇಂಡಿಯಾ ಸ್ಟಾರ್. ಅವರ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಇನ್ನೆರಡು ದಿನಗಳಲ್ಲಿ ಯಶ್​ ಹುಟ್ಟುಹಬ್ಬವಿದೆ.

ಬರ್ತ್​ ಡೇ ಹಿನ್ನೆಲೆ ಯಶ್​​ ​ತಮ್ಮ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. 'ಸಿನಿಮಾ ಕೆಲಸದಿಂದಾಗಿ ಬಿಡುವಿಲ್ಲದಂತಾಗಿದೆ. ಈ ಬಾರಿ ಹುಟ್ಟುಹಬ್ಬದ ದಿನ ಅಭಿಮಾನಿಗಳೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತೀರೆಂದು ಭಾವಿಸುತ್ತೇನೆಂದು' ಸೋಷಿಯಲ್​ ಮೀಡಿಯಾ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

ಯಶ್ ಮಾಡಿರುವ ಮನವಿಯೇನು? ''ಜನವರಿ 8. ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನು, ನನ್ನ ಜೊತೆ ಖುದ್ದು ಇದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆಪಡುವ ದಿನ. ನನಗೂ ಅಷ್ಟೇ. ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ, ಸಿನಿಮಾದ ಕೆಲಸ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಬೇಕಿರುವುದರಿಂದ ಈ ಜನವರಿ 8 ರಂದು ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮ ಅಭಿಮಾನ ನನ್ನ ಅನುಪಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು. ಸದಾಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ - ನಿಮ್ಮ ಪ್ರೀತಿಯ ಯಶ್​​'' ಅಂತಾ ಯಶ್​​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಯಶ್​ ಅಭಿನಯದ 'ಟಾಕ್ಸಿಕ್' ಸಿನಿಮಾದಲ್ಲಿ ಕರೀನಾ ಕಪೂರ್​ ಖಾನ್​?!

ಕೆಜಿಎಫ್‌‌ ಚಾಪ್ಟರ್‌ 2 ಹಿಟ್ ಆಗುವದರ‌ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಈ ಸಿನಿಮಾ ಆಗಿ ಒಂದುವರೆ ವರ್ಷಗಳಾದರೂ ಯಶ್ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡಿರಲಿಲ್ಲ. 2023ರ ಡಿಸೆಂಬರ್ 8 ರಂದು ಯಶ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ತಮ್ಮ ಹೊಸ ಚಿತ್ರ 'ಟಾಕ್ಸಿಕ್' ಅನೌನ್ಸ್ ಮಾಡಿ ಅಭಿಮಾನಿಗಳ ಮೊಗದಲ್ಲಿ ಖುಷಿ ತರಿಸಿದರು. ಒಂದೂವರೆ ವರ್ಷದಿಂದ ಯಶ್-​19ಗಾಗಿ ಕಾತರರಾಗಿದ್ದ ಅಭಿಮಾನಿಗಳಲ್ಲಿ ಸಂತೋಷದ ಅಲೆ ಎದ್ದಿತ್ತು. ಈ ಚಿತ್ರಕ್ಕಾಗಿ ಯಶ್ ಭರ್ಜರಿ ತಯಾರಿ ಮಾಡಿಕೊಂಡು ಚಿತ್ರೀಕರಣದಲ್ಲಿ ತೊಡಗಿರುವುದರಿಂದ ಜನವರಿ 8ರಂದು ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿಗಲು ಆಗುತ್ತಿಲ್ಲ. ಇದೇ ವಿಚಾರವನ್ನು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೆಜಿಎಫ್ 3 ಸ್ಕ್ರಿಪ್ಟ್ ರೆಡಿ: ಶೂಟಿಂಗ್​ ಯಾವಾಗ? ಅಧಿಕೃತ ಘೋಷಣೆ ನಿರೀಕ್ಷೆ

ಟಾಕ್ಸಿಕ್ ಚಿತ್ರತಂಡಕ್ಕೆ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ನಾಯಕಿಯಾಗಿ ನಟಿಸಬಹುದು ಎನ್ನಲಾಗುತ್ತಿದೆ. ಅದಾಗ್ಯೂ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ. ಈ ಚಿತ್ರವನ್ನು ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡ್ತಾ ಇದ್ದಾರೆ. ನಿಜಕ್ಕೂ ರಾಕಿಂಗ್ ಸ್ಟಾರ್​ಗೆ ಜೋಡಿಯಾಗಿ ಬಾಲಿವುಡ್ ಬೇಬೋ‌ ನಾಯಕಿ ಆಗ್ತಾರಾ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ. ಯಶ್​​ ಜನ್ಮದಿನದಂದು ಸಿನಿಮಾಗೆ ಸಂಬಂಧಿಸಿದಂತೆ ಯಾವುದಾದರೂ ಅಪ್​ಡೇಟ್ಸ್ ಬರಬಹುದೆಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

Last Updated : Jan 5, 2024, 2:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.