ETV Bharat / entertainment

ಕಾಂತಾರ ಕುರಿತು ಟ್ವೀಟ್​ ಮಾಡಿದ ಹೃತಿಕ್​ ರೋಷನ್​ - Etv Bharat Kannada

ಕಾಂತಾರ ಚಿತ್ರವನ್ನು ವೀಕ್ಷಣೆ ಮಾಡಿರುವ ಬಾಲಿವುಡ್​ನ ಖ್ಯಾತ ನಟ ಹೃತಿಕ್​ ರೋಷನ್​ ಸಿನಿಮಾ ಕುರಿತು ತಮ್ಮ ಅಭಿಪ್ರಾಯವನ್ನು ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.

Hrithik Roshan
ಕಾಂತಾರ ಕುರಿತು ಟ್ವೀಟ್​ ಮಾಡಿದ ಹೃತಿಕ್​ ರೋಷನ್​
author img

By

Published : Dec 12, 2022, 9:16 AM IST

ರಿಷಭ್​​ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಿತ್ರ ಅತ್ಯುತ್ತಮ ಯಶಸ್ಸು ಗಳಿಸಿ ದಾಖಲೆಯ ಗಳಿಕೆಯನ್ನು ಮಾಡಿದೆ. ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್2 ಬಳಿಕ ಸ್ಯಾಂಡಲ್​ವುಡ್​ನಲ್ಲಿ ಅತಿ ಹೆಚ್ಚು ಗಳಿಕೆಯನ್ನು ಕಾಂತಾರ ಚಿತ್ರ ಕಂಡಿದೆ. ಇಂದಿಗೂ ಚಿತ್ರ ಮಂದಿರದಲ್ಲಿ ಕಾಂತಾರ ಪ್ರದರ್ಶನ ಕಾಣುತ್ತಿದೆ. ಕೇವಲ ಕನ್ನಡ ಚಿತ್ರರಂಗವಲ್ಲದೇ ಹಿಂದಿ, ತಮಿಳು, ಮಲಯಾಳಂಗಳಲ್ಲೂ ಚಿತ್ರ ಯಶಸ್ಸು ಕಂಡಿದೆ.

ಅಲ್ಲದೇ ಚಿತ್ರಕ್ಕೆ ನೀಡುವ ಐಎಮ್​ಡಿಬಿ ರೇಟಿಂಗ್​ನಲ್ಲೂ ಕಾಂತಾರ ಮೇಲುಗೈ ಸಾಧಿಸಿದ್ದು, ಕಡಿಮೆ ಬಜೆಟ್​ನಲ್ಲಿ ದೊಡ್ಡ ಗಳಿಕೆ ಮಾಡಿದ ಸಿನಿಮಾ ಎಂಬ ಪಾತ್ರಕ್ಕೆ ಕಾಂತಾರ ಕಾರಣವಾಗಿದೆ.

ಇನ್ನು, ಚಿತ್ರವನ್ನು ವೀಕ್ಷಣೆ ಮಾಡಿರುವ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಚಿತ್ರದ ನಿರ್ಮಾಣ, ಕ್ಯಾಮರಾ​ ವರ್ಕ್​, ಹಾಡುಗಳು ಸೇರಿದಂತೆ ರಿಷಭ್​ ನಟನೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಕಾಂತಾರ ಚಿತ್ರ ವೀಕ್ಷಣೆ ಮಾಡಿರುವ ಬಾಲಿವುಡನ ಖ್ಯಾತ ನಟ ಹೃತಿಕ್ ರೋಷನ್ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ, ಕಾಂತಾರ ಚಿತ್ರ ನೋಡಿ ತುಂಬ ಕಲಿತುಕೊಂಡಿರುವೆ ಎಂದಿದ್ದಾರೆ.

ರಿಷಭ್​ ಶೆಟ್ಟಿ ಅವರ ಕನ್ವಿಕ್ಷನ್ ಸಿನಿಮಾ ಅಸಮಾನ್ಯವಾಗಿಸುತ್ತದೆ. ಚಿತ್ರದ ಕಥೆ, ನಿರ್ದೇಶನ, ನಟನೆ ಅತ್ಯುತ್ತಮವಾಗಿ ಮೂಡಿ ಬಂದಿದೆ. ಅಲ್ಲದೇ ಚಿತ್ರದ ಕ್ಲೈಮ್ಯಾಕ್ಸ್ ನನ್ನನ್ನು ರೋಮಾಂಚನಗೊಳಿಸಿದೆ. ನನ್ನ ಪರವಾಗಿ ಚಿತ್ರ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಅಪ್ಪು ವೇದಿಕೆಯಲ್ಲಿದ್ದಿದ್ದರೆ ಕಾಂತಾರ ಅಂತಿದ್ರು, ರಿಷಬ್​ ಶೆಟ್ಟಿಯನ್ನು ಅಪ್ಪಿಕೊಳ್ಳುತ್ತಿದ್ರು: ಪ್ರಕಾಶ್ ರೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.