ETV Bharat / entertainment

'ಕೋಯಿ ಮಿಲ್ ಗಯಾ' ರೀ ರಿಲೀಸ್​​: ಖುಷಿ ಹಂಚಿಕೊಂಡ ಹೃತಿಕ್ ರೋಷನ್​ - rakesh Roshan

Koi Mil Gaya re-release: ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ಅಭಿನಯದ 'ಕೋಯಿ ಮಿಲ್ ಗಯಾ' ಸಿನಿಮಾ ಮರು ಬಿಡುಗಡೆಗೊಂಡಿದೆ.

Koi Mil Gaya re release
ಕೋಯಿ ಮಿಲ್ ಗಯಾ ರೀ ರಿಲೀಸ್​​
author img

By

Published : Aug 4, 2023, 1:55 PM IST

ಬಾಲಿವುಡ್​​ ಸ್ಟೈಲಿಶ್​ ಐಕಾನ್​​ ಹೃತಿಕ್ ರೋಷನ್ ಮತ್ತು ಬಹುಬೇಡಿಕೆ ನಟಿಯಾಗಿ ಮಿಂಚಿದ್ದ ಪ್ರೀತಿ ಜಿಂಟಾ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಕೋಯಿ... ಮಿಲ್ ಗಯಾ' ನಿಮಗೆ ನೆನಪಿದೆಯೇ? ಮರೆಯೋದು ಹೇಗೆ ತಾನೆ ಸಾಧ್ಯ ಹೇಳಿ?. ಸದಾ ನೆನಪಿನಲ್ಲಿ ಉಳಿಯುವ ಸಿನಿಮಾವಿದು. ವಿಶ್ವಾದ್ಯಂತ ಸದ್ದು ಮಾಡಿದ್ದ ಚಿತ್ರ. ಜಗತ್ತಿನೆಲ್ಲೆಡೆ ಅಬ್ಬರ ಸೃಷ್ಟಿಸಿದ್ದ 'ಕಹೋ ನಾ ಪ್ಯಾರ್ ಹೈ' ಚಿತ್ರದ ನಂತರ ಹೃತಿಕ್ ರೋಷನ್​​​ ಸಿನಿ ವೃತ್ತಿಜೀವನದ ಎರಡನೇ ಚಿತ್ರವಿದು.

ಈ ಸೂಪರ್​ ಹಿಟ್​ ಸಿನಿಮಾವನ್ನು ಸೂಪರ್​ ಸ್ಟಾರ್​ ಹೃತಿಕ್ ರೋಷನ್​ ಅವರ ತಂದೆ ರಾಕೇಶ್ ರೋಷನ್ ನಿರ್ದೇಶಿಸಿದ್ದಾರೆ. ಇಂದಿಗೂ ಜನರು 'ಕೋಯಿ...ಮಿಲ್ ಗಯಾ' ಚಿತ್ರದ ಡೈಲಾಗ್ಸ್, ಕಥೆ, ದೃಶ್ಯಗಳನ್ನು ಮೆಲುಕು ಹಾಕುತ್ತಾರೆ. 2003ರ ಆಗಸ್ಟ್ 8 ರಂದು ತೆರೆಕಂಡಿದ್ದ ಈ ಸಿನಿಮಾ 20 ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನೆಲೆ ಚಿತ್ರಮಂದಿರಗಳಲ್ಲಿ 'ಕೋಯಿ... ಮಿಲ್ ಗಯಾ' ಮರು ಬಿಡುಗಡೆ ಆಗಿದೆ.

20 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹೃತಿಕ್ ರೋಷನ್ ಅವರ ಬ್ಲಾಕ್​ಬಸ್ಟರ್ ಸಿನಿಮಾ ಮತ್ತೊಮ್ಮೆ ಅಭಿಮಾನಿಗಳಿಗೆ ಥಿಯೇಟರ್​ನಲ್ಲಿ ದರ್ಶನ ಕೊಟ್ಟಿದೆ. ಹೌದು, ಇಂದು (ಆಗಸ್ಟ್ 4, ಶುಕ್ರವಾರ) ದೇಶಾದ್ಯಂತ ಸಿನಿಮಾ ಮರು ಬಿಡುಗಡೆ ಆಗಿದೆ. ರೀ ರಿಲೀಸ್​ಗೂ ಮುನ್ನ ಹೃತಿಕ್ ರೋಷನ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆಗಳನ್ನು ಹೇಳಿಕೊಂಡು, ಸಂತಸ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ನಟ ಹೃತಿಕ್​ ರೋಷನ್​​, ''ಈ ಚಿತ್ರದಲ್ಲಿ ನನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದೆ. ಥಿಯೇಟರ್‌ಗಳಲ್ಲಿ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ವಾಹ್, ಕನಸು ನನಸಾಗುತ್ತಿದೆ. ಈ ರೀತಿ ಆಗಬಹುದು ಎಂದು ನನಗೆ ತಿಳಿದಿರಲಿಲ್ಲ. ಆದ್ರೀಗ ಎಲ್ಲವೂ ನಡೆಯುತ್ತಿದೆ. ನನ್ನ ಹೊಸ ಸಿನಿಮಾವೇ ತೆರೆಕಾಣುತ್ತಿದೆ ಎಂದು ತೋರುತ್ತಿದೆ. ಬಹಳ ಖುಷಿಯಾಗುತ್ತಿದೆ. ನಾನು ಈ ಚಿತ್ರದಲ್ಲಿ ಇನ್ನೂ ಉತ್ತಮವಾಗಿ ಮಾಡಬಹುದಿತ್ತೇನೋ. ಆದರೆ ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ. ಈ ಸಿನಿಮಾ ಆಗಸ್ಟ್ 4 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. 30 ನಗರಗಳ ಪಿವಿಆರ್​ನಲ್ಲಿ ಬಿಡುಗಡೆಯಾಗಲಿದೆ. ನೀವೂ ಕುಟುಂಬಸ್ಥರು, ಸ್ನೇಹಿತರೊಂದಿಗೆ ಹೋಗಿ, ಸಿನಿಮಾವನ್ನು ಆನಂದಿಸಿ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 20 ವರ್ಷಗಳ ಬಳಿಕ 'ಕೋಯಿ ಮಿಲ್ ಗಯಾ' ರೀ ರಿಲೀಸ್​ .. ಸಿನಿಪ್ರಿಯರೇ ಮತ್ತೊಮ್ಮೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿ, ಆನಂದಿಸಿ...!

ಕೋಯಿ ಮಿಲ್ ಗಯಾ ಸಿನಿಮಾ 2003ರ ಆಗಸ್ಟ್ 8 ರಂದು ಬಿಡುಗಡೆ ಆಯಿತು. ಚಿತ್ರ 20 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ರಾಕೇಶ್ ರೋಷನ್ ನಿರ್ದೇಶನದ ಚಿತ್ರ ಮರು ಬಿಡುಗಡೆ ಆಗಿದೆ.

ಇದನ್ನೂ ಓದಿ: ಅನಂತ್​ ನಾಗ್ ಸಿನಿ ಪಯಣಕ್ಕೆ 50ರ ಸಂಭ್ರಮ.. ಎವರ್ ಗ್ರೀನ್ ಹೀರೋನ ಅಪರೂಪದ ಫೋಟೋಗಳು ನಿಮಗಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.