ETV Bharat / entertainment

'ಹೊಂದಿಸಿ ಬರೆಯಿರಿ' ಟ್ರೇಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

ಹೊಂದಿಸಿ ಬರೆಯಿರಿ ಟ್ರೇಲರ್ ಅನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ಅನಾವರಣಗೊಳಿಸಿದ್ದಾರೆ.

hondisi bareyiri trailer release
ಹೊಂದಿಸಿ ಬರೆಯಿರಿ ಟ್ರೈಲರ್ ಬಿಡುಗಡೆ
author img

By

Published : Feb 1, 2023, 6:12 PM IST

ಟೀಸರ್ ಹಾಗು ಹಾಡುಗಳಿಂದ ಸ್ಯಾಂಡಲ್​ವುಡ್​ನಲ್ಲಿ ಸುದ್ದಿಯಲ್ಲಿರೋ ಸಿನಿಮಾ 'ಹೊಂದಿಸಿ ಬರೆಯಿರಿ'. ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲಾವಿದರ ದಂಡು ಚಿತ್ರದಲ್ಲಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

'ಐವರು ಸ್ನೇಹಿತರ 12 ವರ್ಷದ ಪಯಣ': ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿ, "ಹೊಂದಿಸಿ ಬರೆಯಿರಿ ಎಂದಾಗ ನೆನಪಾಗೋದು ಬಾಲ್ಯ. ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಹೋಗಬೇಕು, ಬದುಕು ಬಂದಂತೆ ಸ್ವೀಕರಿಸಿ ಅನ್ನೋದು ಈ ಚಿತ್ರದ ಆಶಯ. ಐವರು ಸ್ನೇಹಿತರ ಹನ್ನೆರಡು ವರ್ಷದ ಜರ್ನಿ ಚಿತ್ರದಲ್ಲಿದೆ. ಕಾಲೇಜು, ಕಾಲೇಜು ನಂತರದ ದಿನಗಳು, ಮದುವೆ ಈ ಪಯಣವನ್ನು ಚಿತ್ರ ಒಳಗೊಂಡಿದೆ. ಬಹಳ ಜನರಿಗೆ ಈ ಸಿನಿಮಾ ಕನೆಕ್ಟ್ ಆಗಲಿದೆ. ಚಿತ್ರಕ್ಕೆ ಟೈಟಲ್ ನೀಡಿದ್ದು ಮಾಸ್ತಿ ಸರ್. ನನಗೆ ಈ ಚಿತ್ರ ಹೊಸತು. ಇಲ್ಲಿ ನಟಸಿರೋರೆಲ್ಲ ಅನುಭವಿಗಳು. ಹಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಈ ಸಿನಿಮಾ ಕೆಲಸ ಆರಂಭಿಸಿದೆವು" ಎಂದು ತಿಳಿಸಿದರು.

ನಟ, ನಟಿಯರ ಪ್ರತಿಕ್ರಿಯೆ: ನಟ ಪ್ರವೀಣ್ ತೇಜ್ ಮಾತನಾಡಿ, "ನಮ್ಮ ಚಿತ್ರದ ನಿಜವಾದ ನಾಯಕರೆಂದರೆ ನಿರ್ದೇಶಕ ಹಾಗೂ ನಿರ್ಮಾಪಕ ರಾಮೇನಹಳ್ಳಿ ಜಗನ್ನಾಥ್. ಒಂದೊಳ್ಳೆ ತಂಡವನ್ನು ಕಟ್ಟಿಕೊಂಡು ಎಲ್ಲರನ್ನೂ ನಿಭಾಯಿಸಿ ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಒಂದೊಳ್ಳೆ ಅನುಭವವನ್ನು ಸಿನಿಮಾ ನೀಡಿದೆ" ಎಂದು ತಿಳಿಸಿದ್ರು.

hondisi bareyiri trailer release
ಟ್ರೇಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

ನಟಿ ಭಾವನ ರಾವ್ ಮಾತನಾಡಿ, "ಹೊಂದಿಸಿ ಬರೆಯಿರಿ ಕಥೆ ಕೇಳಿದಾಗ ಸಿಂಪಲ್ ಕಥೆ ಆದ್ರೆ ಇದರಲ್ಲಿ ಬರುವ ಪಾತ್ರಗಳು ತುಂಬಾ ಕಾಂಪ್ಲಿಕೇಟ್ ಅನ್ನಿಸ್ತು. ಕೆಲವು ಸನ್ನಿವೇಶಗಳಿಂದ ನಾವು ಜೀವನವನ್ನು ಕಾಂಪ್ಲಿಕೇಟ್ ಮಾಡಿಕೊಳ್ಳುತ್ತೇವೆ. ಅದೇ ವಿಚಾರ ಚಿತ್ರದಲ್ಲಿದೆ. ಚಿತ್ರದಲ್ಲಿ ನಾನು ಭೂಮಿಕ ಪಾತ್ರ ನಿರ್ವಹಿಸಿದ್ದೇನೆ. ನಿರ್ದೇಶಕರು ಸಿನಿಮಾ ಬಗ್ಗೆ ಆರಂಭದಿಂದಲೂ ತುಂಬಾ ಕ್ಲಿಯರ್ ಆಗಿದ್ದರು, ಇಂತಹ ಬ್ಯೂಟಿಫುಲ್ ಸಿನಿಮಾ ಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದಗಳು" ಎಂದರು.

ಜೀವನ ಕುರಿತ ಕಥೆ: ನಟ ಶ್ರೀ ಮಹದೇವ್ ಮಾತನಾಡಿ, "ಹೊಂದಿಸಿ ಬರೆಯಿರಿ ಎಂದಾಗ ಬಾಲ್ಯ ನೆನಪಾಗುತ್ತದೆ. ಆದ್ರೆ ಕೇವಲ ಬಾಲ್ಯ ಅಲ್ಲ, ಜೀವನ ಹೇಗೆ ನಡೆಯುತ್ತದೆ, ನಾವು ಹೇಗಿರಬೇಕು, ಚಿಕ್ಕ ತಪ್ಪು ಎಷ್ಟು ದೊಡ್ಡದಾಗುತ್ತೆ ಎಲ್ಲವೂ ಸಿನಿಮಾದಲ್ಲಿ ರಿಯಲೈಝ್​ ಆಗುತ್ತದೆ. ಇಡೀ ಸಿನಿಮಾವನ್ನು ಮಾತಲ್ಲಿ ಹೇಳೋಕಾಗಲ್ಲ ಅಷ್ಟು ಡೆಪ್ತ್ ಆಗಿದೆ ಕಾನ್ಸೆಪ್ಟ್. ನನಗಿದು ಬಹಳಾನೇ ಸ್ಪೆಶಲ್. ನಾಲ್ಕರಿಂದ ಐದು ಲುಕ್​ನಲ್ಲಿ ಕಾಣಿಸಿಕೊಂಡಿದ್ದೇನೆ. ಈ ಸಿನಿಮಾ ಗೆಲ್ಲುವ ವಿಶ್ವಾಸದಲ್ಲಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ" ಎಂದು ಮನವಿ ಮಾಡಿದರು.

"ಹೊಂದಿಸಿ ಬರೆಯಿರಿ ಸಿನಿಮಾ ಒಪ್ಪಿಕೊಳ್ಳಲು ಮೊದಲ ಕಾರಣ ಸಿನಿಮಾದ ಕಥೆ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಪಾತ್ರಗಳು ಬದುಕಿಗೆ ಬಹಳ ಹತ್ತಿರವಾಗುತ್ತದೆ. ಮೊದಲ ಸಿನಿಮಾದಲ್ಲೇ ಉತ್ತಮ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ನಾನು ಸನಿಹ ಪಾತ್ರ ಮಾಡಿದ್ದೇನೆ. ಈ ಪಾತ್ರ ಹಾಗೂ ಚಿತ್ರದ ಭಾಗವಾಗಿರೋದಕ್ಕೆ ನನಗೆ ಬಹಳ ಹೆಮ್ಮೆಯಿದೆ" ಎಂದು ನಟಿ ಐಶಾನಿ ಶೆಟ್ಟಿ ಹೇಳಿದರು

ನಟಿ ಅರ್ಚನಾ ಜೋಯೀಸ್ ಮಾತನಾಡಿ, "ಇಡೀ ತಂಡದ ಪರಿಶ್ರಮ, ನಿರ್ದೇಶಕರ ಪರಿಶ್ರಮ ತೆರೆ ಮೇಲೆ ಬರೋ ಸಮಯ ಬಂದಿದೆ. ನಾನು ಪಲ್ಲವಿ ಪಾತ್ರ ಮಾಡಿದ್ದೇನೆ. ಬಹಳ ಪ್ರಬುದ್ಧತೆ ಹೊಂದಿರುವ ಪಾತ್ರ, ಸರಳ ಜೀವಿ, ಸ್ವಾವಲಂಬಿ, ಬದುಕಿನ ಎಲ್ಲ ದ್ವಂದ್ವಗಳನ್ನು ಸಮಚಿತ್ತದಿಂದ ನೋಡುವ ಪಾತ್ರ ಪಲ್ಲವಿಯದ್ದು. ಸಿನಿಮಾ ನೋಡಿ ಹೋಗುವಾಗ ಪಲ್ಲವಿ ಎಲ್ಲರನ್ನೂ ಕಾಡುತ್ತಾಳೆ. ಈ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ" ಎಂದರು.

ನಟ ನವೀನ್ ಶಂಕರ್ ಮಾತನಾಡಿ, "ಈ ಸಿನಿಮಾ ಒಪ್ಪಿಕೊಳ್ಳಲು ಮೂಲ ಕಾರಣ ಈ ಚಿತ್ರದ ಆಶಯ. ಸಂಬಂಧಗಳ ಸುತ್ತ, ಸ್ನೇಹದ ಸುತ್ತ, ಬಾಂಧವ್ಯದ ಸುತ್ತ ಇರುವ ವಿಷಯ ಬಹಳ ಇಷ್ಟವಾಯ್ತು. ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗುತ್ತದೆ. ನಿರ್ದೇಶಕರು ಈ ಚಿತ್ರವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಸಾಹಿತ್ಯದ ಅಭಿರುಚಿ ಇದೆ. ಅವೆಲ್ಲವೂ ಸಿನಿಮಾವನ್ನು ಚೆಂದಗೊಳಿಸಿದೆ. ನಾನು ರಂಜಿತ್ ಪಾತ್ರ ಮಾಡಿದ್ದೇನೆ. ತುಂಬಾ ಅನುಭವಿ, ಗಟ್ಟಿತನ ಇರುವ ಹುಡುಗನ ಪಾತ್ರ. ಈ ಸಿನಿಮಾ ಭಾಗವಾಗಿರೋದಕ್ಕೆ ಬಹಳ ಖುಷಿ ಇದೆ" ಎಂದು ತಿಳಿಸಿದರು.

ಇದನ್ನೂ ಓದಿ: ವರನಟ ರಾಜ್ ಕುಮಾರ್ ಆದರ್ಶದ‌ ಹಾದಿಯಲ್ಲಿ ಕಬ್ಜ ನಿರ್ದೇಶಕ ಆರ್ ಚಂದ್ರು

ನಟಿ ಅರ್ಚನಾ ಕೊಟ್ಟಿಗೆ ಮಾತನಾಡಿ, "ಮೊದಲ ಸಿನಿಮಾವಾದರೂ ಕೂಡ ಇಷ್ಟು ಕಲಾವಿದರನ್ನು ಇಟ್ಟುಕೊಂಡು ತುಂಬಾ ಅಚ್ಚುಕಟ್ಟಾಗಿ ಎಲ್ಲವನ್ನೂ ನಿಭಾಯಿಸಿದ್ದಾರೆ ನಮ್ಮ ನಿರ್ದೇಶಕರು. ಈ ಚಿತ್ರದಲ್ಲಿ ಒಂದೊಳ್ಳೆ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದಗಳು ಎಂದು ತಿಳಿಸಿದ್ರು. ಇನ್ನೂ ನಟ ಅನಿರುದ್ದ್ ಆಚಾರ್ಯ ಮಾತನಾಡಿ, ಹದಿಮೂರು ವರ್ಷದಿಂದ ರಂಗಭೂಮಿಯಲ್ಲಿ ಸಕ್ರಿಯನಾಗಿದ್ದೇನೆ. ನಾನು ನಟನಾಗಿ ಏನೇನು ಹುಡುಕುತ್ತಿದ್ದೆನೋ ಅದೆಲ್ಲ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಸಿಕ್ಕಿದೆ" ಎಂದು ಸಂತಸ ವ್ಯಕ್ತಪಡಿಸಿದ್ರು.

ಇದನ್ನೂ ಓದಿ: 'ಭೂಮಿ ಮೇಲಿನ ಸ್ವರ್ಗ' ಉತ್ತರಾಖಂಡದಲ್ಲಿ ವಿರುಷ್ಕಾ ವಿಹಾರ

ಶಾಂತಿ ಸಾಗರ್ ಹೆಚ್.ಜಿ ಕ್ಯಾಮರಾ ವರ್ಕ್, ಜೋ ಕೋಸ್ಟ ಸಂಗೀತ ನಿರ್ದೇಶನ, ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಚಿತ್ರಕ್ಕಿದೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸಂಡೇ ಸಿನಿಮಾಸ್ ಬ್ಯಾನರ್ ಅಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದು, ಫೆಬ್ರವರಿ 10ರಂದು ಹೊಂದಿಸಿ ಬರೆಯಿರಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.