ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈಗ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದೆ. ಕೆಜಿಎಫ್ 1, ಕೆಜಿಎಫ್ 2 ಮತ್ತು ಕಾಂತಾರ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರೋ ನಿರ್ಮಾಪಕ ವಿಜಯ್ ಕಿರಂಗದೂರ್ ಈಗ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈ ಹಿಂದೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಸಲ್ಮಾನ್ ಖಾನ್ ಜೊತೆ ಭಜರಂಗಿ ಬಾಯಿಜಾನ್ ಸಿನಿಮಾ ಮಾಡುವ ಮೂಲಕ ಸಕ್ಸಸ್ ಕಂಡಿದ್ದರು. ಇದೀಗ ಹೊಂಬಾಳೆ ಫಿಲ್ಸ್ಮ್ ನಿರ್ಮಾಪಕ ವಿಜಯ್ ಕಿರಂಗದೂರ್ ಅವರು ಬಾಲಿವುಡ್ನ ಕಿಂಗ್ ಖಾನ್ ಜೊತೆ ಸಿನಿಮಾ ಮಾಡೋದು ಪಕ್ಕಾ ಆಗಿದೆ.
ಹೌದು ಬಾಲಿವುಡ್ನಲ್ಲಿ ನಟನಾಗಿ, ನಿರ್ಮಾಪಕನಾಗಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಶಾರುಖ್ ಖಾನ್ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಸಿನಿಮಾ ಮಾಡಿಲ್ಲ. ಕೆಜಿಎಫ್ ಸಿನಿಮಾ ಮುಂದೆ ಶಾರುಖ್ ಖಾನ್ ಅವರು 'ಝೀರೋ' ಸಿನಿಮಾ ಪೈಪೋಟಿ ಮಾಡಿತ್ತು. ಆದರೆ ಕೆಜಿಎಫ್ 1 ನಿರೀಕ್ಷೆಗೂ ಮೀರಿ ದಾಖಲೆ ಬರೆಯಿತು.
ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದ ಶಾರುಖ್ ಸದ್ಯ ಪಠಾಣ್, ಜವಾನ್, ಟೈಗರ್ 3, ಡುಂಕಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಹೊಂಬಾಳೆ ಫಿಲ್ಸ್ಮ್ ನಿಂದ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾಗೆ ಶಾರುಖ್ ಅಭಿನಯಿಸಲಿದ್ದಾರೆ ಅನ್ನೋ ವಿಷಯ ಗಾಂಧಿನಗರದಿಂದ ಹಿಡಿದು ಬಾಲಿವುಡ್ವರೆಗೂ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ: ಕಾಂತಾರಕ್ಕೆ 'ವರಾಹ ರೂಪಂ' ಸೇರ್ಪಡೆ.. ಹಾಡು ಕೇಳಿ ಆನಂದಿಸಿ
ಈ ಚಿತ್ರದಲ್ಲಿ ಕಾಂತಾರದ ರಿಷಬ್ ಶೆಟ್ಟಿ ಮತ್ತು ಚಾರ್ಲಿಯ ರಕ್ಷಿತ್ ಶೆಟ್ಟಿ ಅತಿಥಿ ಪಾತ್ರಗಳಲ್ಲಿ ನಟಿಸಲಿದ್ದಾರೆ. ಬಾಲಿವುಡ್ನ ಸ್ಟಾರ್ ಡೈರೆಕ್ಟರ್ಗಳಲ್ಲೊಬ್ಬರಾದ ರೋಹಿತ್ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಶಾರುಖ್ ಖಾನ್ ಅವರ ದಿಲ್ವಾಲೆ ಸಿನಿಮಾವನ್ನು ನಿರ್ದೇಶನ ಮಾಡಿ ರೋಹಿತ್ ಶೆಟ್ಟಿ ಗಮನ ಸೆಳೆದಿದ್ದರು.
ಈಗ ಹೊಂಬಾಳೆ ಫಿಲ್ಸ್ಮ್ ನಿರ್ಮಿಸಲಿರುವ ಶಾರೂಖ್ ಖಾನ್ ಅವರ ಸಿನಿಮಾಗೆ ನಿರ್ದೇಶಕ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ನಮ್ಮ ಕನ್ನಡ ಸಿನಿಮಾ ನಿರ್ಮಾಣ ಸಂಸ್ಥೆ ಬಾಲಿವುಡ್ನಲ್ಲಿ ಸಿನಿಮಾ ಮಾಡುವಷ್ಟು ದೊಡ್ಡದಾಗಿ ಬೆಳೆದಿದೆ ಅಂದ್ರೆ ಹೆಮ್ಮೆಯ ವಿಚಾರ.
ಇದನ್ನೂ ಓದಿ: ಕೆಜಿಎಫ್-ಕಾಂತಾರ ಅಷ್ಟೇ ಅಲ್ಲ.. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಮೂಡಿ ಬಂದ ಟಾಪ್ ಸಿನಿಮಾಗಳು ಇಲ್ಲಿವೆ ನೋಡಿ