ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಯಶೋದ ಚಿತ್ರ ಟೈಟಲ್‌ನಿಂದಲೇ ಸದ್ದು ಮಾಡುತ್ತಿದೆ. ಇದೇ ನ.11 ರಂದು ತೆರೆಗೆ ಅಪ್ಪಳಿಸಲಿದೆ. ಈ ಸಿನಿಮಾದ ನಾಯಕಿಯಾಗಿ ಸಮಂತಾ ಕಾಣಿಸಿಕೊಂಡಿದ್ದಾರೆ.
ಪ್ರೇಕ್ಷಕರು ಚಿತ್ರದಲ್ಲಿನ ಆಕ್ಷನ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೈ ವೋಲ್ಟೇಜ್ ಫೈಟ್ಸ್ ಮತ್ತು ಸ್ಟಂಟ್‌ಗಳು ಚೆನ್ನಾಗಿ ಮೂಡಿಬರುವುದಕ್ಕೆ ಸಮಂತಾ ಕಾರಣರಾಗಿದ್ದಾರೆ. ಇವರ ಶ್ರದ್ಧೆಗೆ ಹಾಲಿವುಡ್ ಆ್ಯಕ್ಷನ್ ನಿರ್ದೇಶಕ ಯಾನಿಕ್ ಬೆನ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಸಮಂತಾ ಮತ್ತು ಬೆನ್ ಜೊತೆಯಾಗಿ ಕೆಲಸ ಮಾಡಿದ್ದು ಮೊದಲ ಬಾರಿಯೇನಲ್ಲ. ಈ ಹಿಂದೆ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್‌ನಲ್ಲಿ ಕೆಲಸ ಮಾಡಿದ್ದರು. ಈಗ ಯಶೋದದಲ್ಲಿ ಅತ್ಯುತ್ತಮ ಆ್ಯಕ್ಷನ್‌ನಲ್ಲಿ ಜೊತೆಯಾಗಿದ್ದಾರೆ. ಯಶೋದ ಆಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಇದಕ್ಕೆ ಸಮಂತಾ ಅವರ ಸಮರ್ಪಣಾ ಮನೋಭಾವ ಮತ್ತು ಇಚ್ಛಾಶಕ್ತಿಯೇ ಕಾರಣ ಎಂದು ಬೆನ್ ಮೆಚ್ಚಿ ಮಾತನಾಡಿದ್ದಾರೆ.
ಬೆನ್ ಐಕಿಡೊ, ಕಿಕ್ ಬಾಕ್ಸಿಂಗ್, ಜಿಮ್ನಾಸ್ಟಿಕಗಸ್ ಮುಂತಾದ ಕಲೆಗಳಲ್ಲಿ ಪರಿಣತರು. ಹಾಲಿವುಡ್ ನ ಟ್ರಾನ್ಸಪೋರ್ಟರ್, ಇನ್ಸೆಪ್ಷನ್, ಬಾಲಿವುಡ್ ನ ಟೈಗರ್ ಜಿಂದಾ ಹೈ, ರಯೀಸ್, ತೆಲುಗಿನ ಅತ್ತಾರಿಂಟಿಕಿ ದಾರೇದಿ,ನೇನೋಕ್ಕೊಡೇನ್ ನಂತಹ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ.
ಹರಿ-ಹರೀಶ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ವರಲಕ್ಷ್ಮೀ ಶರತ್ ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ ಮುಂತಾದವರು ನಟಿಸಿದ್ದಾರೆ. ಶ್ರೀದೇವಿ ಮೂವೀಸ್ ಅಡಿಯಲ್ಲಿ ಶಿವಲೆಂಕ ಕೃಷ್ಣಪ್ರಸಾದ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ. ಏಕಕಾಲಕ್ಕೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ : ಯಶೋದಾ ಸಿನಿಮಾ ಟೀಸರ್ ರಿಲೀಸ್... ಹೊಸ ಅವತಾರದಲ್ಲಿ ನಟಿ ಸಮಂತಾ ರುತ್ ಪ್ರಭು