ಜಾಗತಿಕ ಮಟ್ಟದಲ್ಲಿ ಸಿನಿಪ್ರಿಯರ ಗಮನ ಸೆಳೆಯುವಲ್ಲಿ 'ಕಾಂತಾರ' ಯಶಸ್ವಿಯಾಗಿದೆ. ದೇಶದಾದ್ಯಂತ ಸೆ.30 ರಂದು ತೆರೆಕಂಡಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಇಂದಿಗೂ ಧೂಳೆಬ್ಬಿಸುತ್ತಲೇ ಇದೆ. ಮೊದಲು ಕನ್ನಡದಲ್ಲಿ ಪ್ರದರ್ಶನ ಕಂಡ ಚಿತ್ರ ಬಳಿಕ ಕೇವಲ 15-20 ದಿನಗಳಲ್ಲಿ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಅಂದರೆ ದೇಶಾದ್ಯಂತ ಡಬ್ ಆಗಿ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಅದರಂತೆ ಇದೀಗ ಕಾಂತಾರ ಹಿಂದಿ ಅವತರಣಿಕೆ ಸಿನಿಮಾ ಶತದಿನ ಪೂರೈಸಿದೆ.
-
We are ecstatic to share that #Kantara in Hindi, depicting the traditional folklore, has completed 100 days. We express our deep gratitude to the audience for their unwavering support. #KantaraHindi100Days @KantaraFilm @hombalefilms pic.twitter.com/KnOf10nZ2A
— Rishab Shetty (@shetty_rishab) January 22, 2023 " class="align-text-top noRightClick twitterSection" data="
">We are ecstatic to share that #Kantara in Hindi, depicting the traditional folklore, has completed 100 days. We express our deep gratitude to the audience for their unwavering support. #KantaraHindi100Days @KantaraFilm @hombalefilms pic.twitter.com/KnOf10nZ2A
— Rishab Shetty (@shetty_rishab) January 22, 2023We are ecstatic to share that #Kantara in Hindi, depicting the traditional folklore, has completed 100 days. We express our deep gratitude to the audience for their unwavering support. #KantaraHindi100Days @KantaraFilm @hombalefilms pic.twitter.com/KnOf10nZ2A
— Rishab Shetty (@shetty_rishab) January 22, 2023
ಈ ಕುರಿತು ನಟ ರಿಷಬ್ ಶೆಟ್ಟಿ ಅವರು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. "ಹಿಂದಿಯಲ್ಲಿ ಕಾಂತಾರ 100 ದಿನಗಳನ್ನು ಪೂರೈಸಿದೆ ಎನ್ನಲು ನಾವು ಸಂಭ್ರಮಿಸುತ್ತೇವೆ. ನಮ್ಮ ಚಿತ್ರವನ್ನು ಪ್ರೋತ್ಸಾಹಿಸಿ ಬೆಂಬಲಿಸಿದ ಪ್ರೇಕ್ಷಕರಿಗೆ ವಿನಯಪೂರ್ವಕ ಕೃತಜ್ಞತೆಗಳು" ಎಂದಿದ್ದಾರೆ. ಇತ್ತೀಚೆಗೆ ದೈವಕ್ಕೆ ಹರಕೆ ತೀರಿಸಿದ ಸಿನಿಮಾ ತಂಡದ ವಿಡಿಯೋ ಕೂಡ ಗಮನ ಸೆಳೆದಿತ್ತು. ಇದರ ನಂತರ ಕಾಂತಾರ-2 ಚಿತ್ರದ ವಿಷಯವೂ ಮುನ್ನೆಲೆಗೆ ಬಂದಿದ್ದು, ಚಿತ್ರತಂಡದ ಪ್ರತಿ ನಡೆಯನ್ನೂ ಜನರು ಕುತೂಹಲದಿಂದ ಗಮನಿಸುತ್ತಿದ್ದಾರೆ.
ಕಾಂತಾರ 2ಗೆ ದೈವದ ಅಭಯ?: ಕಾಂತಾರ 2 ಸಿನಿಮಾ ನಿರ್ಮಾಣವಾಗಲಿದೆಯಾ? ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಬಗ್ಗೆ ಅಧಿಕೃತ ಘೋಷಣೆ ಇಲ್ಲದಿದ್ದರೂ ಕಾಂತಾರ 2 ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಕಾಂತಾರ ಯಶಸ್ಸಿನ ಉತ್ತುಂಗದಲ್ಲಿರುವ ನಟ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಪಕ ವಿಜಯ್ ಕಿರಂಗದೂರ್ ಪಂಜುರ್ಲಿ ಕೋಲ ಕೊಟ್ಟು ಹರಕೆ ತೀರಿಸಿದ್ದಾರೆ. ಈ ಸಮಯದಲ್ಲಿ ಕಾಂತಾರ 2 ಮಾಡುವ ಬಗ್ಗೆ ಚಿತ್ರತಂಡ ದೈವದ ಬಳಿ ಕೇಳಿದೆ. ಇದಕ್ಕೆ ದೈವವು ಕೂಡ ಆಶೀರ್ವಾದ ನೀಡಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ.
ಇದಾದ ಬಳಿಕ ನಿರ್ಮಾಪಕ ವಿಜಯ್ ಕಿರಗಂದೂರು ಅವರಲ್ಲಿ, ಕಾಂತಾರ 2 ಚಿತ್ರ ಮಾಡುವ ಯೋಚನೆ ಇದೆಯೇ? ಎಂದು ಕೇಳಿದಾಗ, ಹೌದು, ಕಾಂತಾರ 2 ಚಿತ್ರ ಮಾಡುವ ಯೋಚನೆ ಇದೆಯೆಂದು ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದರು. ರಿಷಬ್ ಶೆಟ್ಟಿ ಸದ್ಯ ಚಿತ್ರದ ಕಥೆ ಬರೆಯುತ್ತಿದ್ದಾರೆ. ತನ್ನ ಸಹ ಬರಹಗಾರರೊಂದಿಗೆ ಕರ್ನಾಟಕ ಕರಾವಳಿ ಕಾಡಿನ ಒಳಹೋಗಿ ಸಂಶೋಧನೆ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕೆಲ ಭಾಗವನ್ನು ಚಿತ್ರೀಕರಣ ಮಾಡುವ ಯೋಚನೆ ಇದೆ. ಚಿತ್ರಕ್ಕಾಗಿ ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿ ಕಾಂತಾರ..: ಸ್ಯಾಂಡಲ್ವುಡ್ ಸೂಪರ್ ಹಿಟ್ ಸಿನಿಮಾ ಆಸ್ಕರ್ ನಾಮನಿರ್ದೇಶನಕ್ಕೆ ಎಂಟ್ರಿಯಾಗಿದೆ. ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತಾರ ಅರ್ಹತೆಯ ಸುತ್ತು ಪಾಸ್ ಮಾಡಿದೆ. ಸದ್ಯ 301 ಸಿನಿಮಾಗಳು ಈ ಪಟ್ಟಿಯಲ್ಲಿವೆ.
ಈ ಚಿತ್ರದಲ್ಲಿ ನಟ ರಿಷಬ್ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ‘ಕಾಂತಾರ’ ಸಿನಿಮಾ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆ ಒಳಗೊಂಡಿದೆ.
ಇದನ್ನೂ ಓದಿ: ಸಿನಿಮಾ ಸಕ್ಸಸ್: ದೈವಕ್ಕೆ ಹರಕೆ ತೀರಿಸಿದ ಕಾಂತಾರ ಚಿತ್ರತಂಡ