ETV Bharat / entertainment

ಆಸ್ಕರ್‌ಗೆ ಕ್ಷಣಗಣನೆ​​! ನಾಟು ನಾಟು ಹಾಡಿಗೆ ಅಮೆರಿಕನ್ ನರ್ತಕಿಯಿಂದ ಡ್ಯಾನ್ಸ್ ರಿಹಾರ್ಸಲ್‌​

ಆಸ್ಕರ್​ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಅಮೆರಿಕನ್ ನರ್ತಕಿ ಲಾರೆನ್ ಗಾಟ್ಲೀಬ್, ತಮ್ಮ ತಂಡದೊಂದಿಗೆ ಡ್ಯಾನ್ಸ್​ ಮಾಡಲಿದ್ದಾರೆ.

Oscars 2023
ಆಸ್ಕರ್​​ 2023
author img

By

Published : Mar 12, 2023, 12:22 PM IST

ಬಹುನಿರೀಕ್ಷಿತ ಆಸ್ಕರ್​ 2023 ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತದಿಂದ ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡು ಮತ್ತು ಎರಡು ಸಾಕ್ಷ್ಯಚಿತ್ರಗಳು ಆಸ್ಕರ್​ಗೆ ನಾಮನಿರ್ದೇಶನಗೊಂಡಿದ್ದು, ಮೂರು ವಿಭಾಗಗಳಲ್ಲೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇದೆ. ಅಲ್ಲದೇ ಅಕಾಡೆಮಿ ವೇದಿಕೆಯಲ್ಲಿ ನಾಟು ನಾಟು ಹಾಡಿನ ಜೊತೆಗೆ ನೃತ್ಯ ಪ್ರದರ್ಶನ ಕೂಡ ಇರಲಿದೆ. ಆದರೆ ಈ ಹಾಡಿಗೆ ಜೂನಿಯರ್​ ಎನ್​ಟಿಆರ್ ಮತ್ತು ರಾಮ್​ಚರಣ್​ ಪ್ರದರ್ಶನ ನೀಡುತ್ತಿಲ್ಲ.

ಹೌದು. ಸಂದರ್ಶನವೊಂದರಲ್ಲಿ ಈ ಬಗ್ಗೆ ಸ್ವತಃ ಜೂನಿಯರ್​ ಎನ್​ಟಿಆರ್ ಅವರೇ​ ಸ್ಪಷ್ಟಪಡಿಸಿದ್ದರು. "ನಾವು ನಮ್ಮ ಹಾಡಿಗೆ ಡ್ಯಾನ್ಸ್​ ಮಾಡುತ್ತೇವೆ ಎಂದು ಖಚಿತವಾಗಿ ಹೇಳಲಾರೆವು. ರಾಮ್​ಚರಣ್​ ಮತ್ತು ನನಗೆ ರಿಹರ್ಸಲ್​ ಮಾಡಲು ಸಮಯದ ಅಭಾವವಿದೆ. ಹೀಗಾಗಿ ನಾವು ಆಸ್ಕರ್​ ವೇದಿಕೆಯಲ್ಲಿ ನೃತ್ಯ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದರು. ಹೀಗಿದ್ದರೂ ಸಹ ಅಕಾಡೆಮಿ ವೇದಿಕೆಯಲ್ಲಿ ನಾಟು ನಾಟು ಹಾಡಿನ ನೃತ್ಯ ಪ್ರದರ್ಶನ ಇರಲಿದೆ. ಆಸ್ಕರ್ ನಾಮನಿರ್ದೇಶನಗೊಂಡ ನಾಟು ನಾಟು ಹಾಡನ್ನು ಅಮೆರಿಕನ್ ನರ್ತಕಿ ಲಾರೆನ್ ಗಾಟ್ಲೀಬ್ ಅವರು ಮಾರ್ಚ್ 12 ರಂದು ಅಕಾಡೆಮಿ ವೇದಿಕೆಯಲ್ಲಿ ಪ್ರದರ್ಶಿಸಲಿದ್ದಾರೆ.

ಜಲಕ್​ ದಿಕ್ಲಾ ಜಾ ಆರನೇ ಸೀಸನ್​ ರನ್ನರ್​ ಅಪ್​ ಆಗಿರುವ ಲಾರೆನ್​ ಗಾಟ್ಲೀಬ್​ ಈ ಹಿಂದೆ ಆಸ್ಕರ್​ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಡ್ಯಾನ್ಸ್​ ಮಾಡುವುದಾಗಿ ಹೇಳಿದ್ದರು. ಅದರಂತೆ ಲಾರೆನ್​ ತಮ್ಮ ತಂಡದೊಂದಿಗೆ ನೃತ್ಯಾಭ್ಯಾಸ ಮಾಡುತ್ತಿದ್ದು, ಈ ವಿಡಿಯೋ ತುಣುಕನ್ನು ಜೂನಿಯರ್​ ಎನ್​ಟಿಆರ್​ ಅಭಿಮಾನಿಗಳು ತಮ್ಮ ಟ್ವಿಟರ್​ ಪೇಜ್​​ನಲ್ಲಿ ಹಂಚಿಕೊಂಡಿದ್ದಾರೆ. 'ನಾಟು ನಾಟು ಆಸ್ಕರ್​​ 2023ರ ಹೈಲೈಟ್'​ ಎಂಬುದಾಗಿ ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಲಾರೆನ್​ ಗಾಟ್ಲೀಬ್​ ತಮ್ಮ ತಂಡದೊಂದಿಗೆ ಡ್ಯಾನ್ಸ್​ ಮಾಡುತ್ತಿರುವುದು ಕಾಣಬಹುದು.

ಇದನ್ನೂ ಓದಿ: ಆಸ್ಕರ್​ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ನೃತ್ಯ ಮಾಡಲಿದ್ದಾರಾ ರಾಮ್​​ಚರಣ್​, ಜೂ.ಎನ್​ಟಿಆರ್​?!

ಟ್ವಿಟರ್​ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಅಪ್​ಲೋಡ್​ ಮಾಡಿದ ತಕ್ಷಣ ಫ್ಯಾನ್ಸ್​ ಕೆಂಪು ಹೃದಯ ಮತ್ತು ಫೈರ್​ ಎಮೋಜಿನೊಂದಿಗೆ ಕಮೆಂಟ್​ ವಿಭಾಗವನ್ನು ತುಂಬಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, "ಇದು ಆಸ್ಕರ್ ರಾತ್ರಿಯ ಹೈಲೈಟ್ ಆಗಲಿದೆ. ನೃತ್ಯ ತಂಡಕ್ಕೆ, ನಮ್ಮ ಅದ್ಭುತ ಗಾಯಕರಾದ ರಾಹುಲ್​ ಸಿಪ್ಲಿಗಂಜ್​, ಕಾಲಭೈರವ ಮತ್ತು ಎಂ.ಎಂ ಕೀರವಾಣಿ ಅವರಿಗೆ ಶುಭಾಶಯಗಳು" ಎಂದು ಬರೆದಿದ್ದಾರೆ. ಇನ್ನು ಕೆಲವರು, ಆರ್​ಆರ್​ಆರ್​​ ಬಾಲಿವುಡ್​ ಸಿನಿಮಾವಲ್ಲ, ಟಾಲಿವುಡ್​ ಚಿತ್ರ ಎಂಬುದಾಗಿ ಕಮೆಂಟ್​ ಮಾಡುತ್ತಿದ್ದಾರೆ.

ನಾಟು ನಾಟು ಹಾಡನ್ನು ಈ ವರ್ಷ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಜೊತೆಗೆ ಈ ಹಾಡಿಗೆ ಅಮೆರಿಕನ್ ನರ್ತಕಿ ಲಾರೆನ್ ಗಾಟ್ಲೀಬ್ ಪ್ರಮುಖ ಮಹಿಳಾ ಡ್ಯಾನ್ಸರ್​ ಅಗಿ ಪ್ರದರ್ಶನ ನೀಡಲಿದ್ದಾರೆ. ಈ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಅವರು, ಇಷ್ಟು ದೊಡ್ಡ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ನೀಡಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಆಸ್ಕರ್‌ ವಿಶ್ವದ ಅತಿದೊಡ್ಡ ವೇದಿಕೆಗಳಲ್ಲಿ ಒಂದಾಗಿದೆ. ನಾನು ಪ್ರಮುಖ ಮಹಿಳಾ ಡ್ಯಾನ್ಸರ್​ ಆಗಿ ಆಯ್ಕೆಯಾಗಿದ್ದೇನೆ ಮತ್ತು ನನ್ನ ಹೃದಯಕ್ಕೆ ಹತ್ತಿರವಿರುವ ಬಾಲಿವುಡ್ ಮತ್ತು ಹಾಲಿವುಡ್‌ಗೆ ಸಂಪರ್ಕ ಕಲ್ಪಿಸುವುದು ಅತಿವಾಸ್ತವಿಕವಾಗಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಕ್ಷಣಗಣನೆ: ಆಸ್ಕರ್​ ವೇದಿಕೆ ಏರಲಿದ್ದಾರೆ ಭಾರತೀಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.