ಎರ್ನಾಕುಲಂ: ಮಾದಕತಾರೆ ಸನ್ನಿ ಲಿಯೋನ್ ವಿರುದ್ಧ ವಂಚನೆ ಪ್ರಕರಣಕ್ಕೆ ಕೇರಳ ಹೈ ಕೋರ್ಟ್ ತಡೆ ನೀಡಿದೆ. ಈ ಪ್ರಕರಣ ಸಂಬಂಧ ಕೇರಳ ಸರ್ಕಾರ ಮತ್ತು ಅಪರಾಧ ದಳಕ್ಕೆ ನೋಟಿಸ್ ನೀಡಿದೆ. ಈ ಅರ್ಜಿಯನ್ನು ಎರಡು ವಾರಗಳ ಬಳಿಕ ಪುರಸ್ಕರಿಸುವುದಾಗಿ ಕೋರ್ಟ್ ತಿಳಿಸಿದೆ.
ಎರ್ನಾಕುಲಂನ ವ್ಯಕ್ತಿಯೊಬ್ಬರು ಖ್ಯಾತ ಬಾಲಿವುಡ್ ನಟಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸನ್ನಿ ಲಿಯೋನ್ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಹೇಳಿ ನನ್ನ ಬಳಿ 30 ಲಕ್ಷ ಹಣ ಪಡೆದಿದ್ದರು. ಬಳಿಕ ಅವರು ಮಾತಿಗೆ ತಪ್ಪಿದ್ದು, ಹಣ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ 2019ರಲ್ಲಿಯೇ ಪ್ರಕರಣ ದಾಖಲಾಗಿದೆ. ಕ್ರೈಂ ಬ್ರಾಂಚ್ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸನ್ನಿ ಲಿಯೋನ್ ಅರ್ಜಿ ಸಲ್ಲಿಸಿದ್ದು, ಸಂಘಟಕರಿಂದ ಒಪ್ಪಂದದ ಉಲ್ಲಂಘನೆಯಾಗಿದ್ದು, ಈ ಹಿನ್ನೆಲೆ ಪ್ರಕರಣವನ್ನು ಹಿಂಪಡೆಯಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಮ್ಮ ಚಿಕ್ಕ ಸ್ನೇಹಿತರು, ಹೇಳದೇ ಹೊರಟು ಬಿಟ್ಟರು.. ಸಾಕು ನಾಯಿ ನಿಧನಕ್ಕೆ ಬಿಗ್ ಬಿ ಭಾವನಾತ್ಮಕ ಪೋಸ್ಟ್