ETV Bharat / entertainment

ಚಿತ್ರಮಂದಿರದಲ್ಲಿ ಮೆಚ್ಚುಗೆ ಪಡೆದ ಪಚುವುಮ್ ಅದ್ಭುತ ವಿಲಕ್ಕುಮ್​ ಇದೇ 26 ರಿಂದ ಒಟಿಟಿಗೆ - Pachuvum Athbutha Vilakkum

ಫಹದ್ ಫಾಸಿಲ್ ಅವರ ಮಲಯಾಳಂ ಚಿತ್ರ ಪಚುವುಮ್ ಅದ್ಭುತ ವಿಲಕ್ಕುಮ್​ ಒಟಿಟಿ ಬಿಡುಗಡೆಗೆ ಸಿದ್ಧವಾಗಿದೆ. ಅಖಿಲ್ ಸತ್ಯನ್ ಅವರ ನಿರ್ದೇಶನವು ಮೇ 26 ರಂದು ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ.

Here's where and when Fahadh Faasil's Pachuvum Athbutha Vilakkum will drop on OTT
ಚಿತ್ರಮಂದಿರದಲ್ಲಿ ಮೆಚ್ಚುಗೆ ಪಡೆದ ಪಚುವುಮ್ ಅದ್ಭುತ ವಿಲಕ್ಕುಮ್​ ಇದೇ 26 ರಿಂದ ಓಟಿಟಿಗೆ
author img

By

Published : May 23, 2023, 7:48 PM IST

ಮುಂಬೈ (ಮಹಾರಾಷ್ಟ್ರ): ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ನಂತರ ಫಹದ್ ಫಾಸಿಲ್ ಅಭಿನಯದ ಪಚುವುಮ್ ಅದ್ಭುತ ವಿಲಕ್ಕುಮ್ ಈಗ ಓವರ್​ ದಿ ಟಾಪ್​ನಲ್ಲಿ ಬಿಡುಗಡೆಯಾಗಲಿದೆ. ಒಟಿಟಿಗೆ ಚಿತ್ರ ಬರುವ ಮುನ್ನ ಚಿತ್ರದ ನಾ ಯಕ ಫಹದ್​ ತಮ್ಮ ಸಿನಿಮಾದ ಜರ್ನಿಯ ಭಾವನಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಅಖಿಲ್ ಸತ್ಯನ್ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಫಹಾದ್ ಫಾಸಿಲ್ ನಾಯಕನಾಗಿ ನಟಿಸಿದ್ದಾರೆ - ಪ್ರಶಾಂತ್ ರಾಜನ್ ಅಕಾ ಪಚು, ಅಂಜನಾ ಜಯಪ್ರಕಾಶ್, ಮೋಹನ್ ಅಗಾಶೆ ಮತ್ತು ಇಂದ್ರನ್ಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ಮುಂಬೈ ಮೂಲದ ಮಧ್ಯಮ - ವರ್ಗದ ಮಲಯಾಳಿ ಉದ್ಯಮಿ ಪಾಚು, ಒಂದು ಕೆಲಸಕ್ಕಾಗಿ ಕೇರಳಕ್ಕೆ ಪ್ರಯಾಣಿಸುವ ಕಥೆ ವಿವರಿಸುತ್ತದೆ.

ಪಾಚು ಎಂಬುವವನ ಸಾಮಾನ್ಯ ಪ್ರಯಾಣದ ವಿಶೇಷ ತಿರುವುವೇ ಕಥೆ: ಚಿತ್ರದ ಕುರಿತು ಮಾತನಾಡಿದ ಫಹಾದ್ ಫಾಸಿಲ್, "ನನ್ನ ಪಾತ್ರ ಪಾಚು ಸಾಮಾನ್ಯ ವ್ಯಕ್ತಿಯಾಗಿದ್ದು, ಸಾಮಾನ್ಯ ಜೀವನ ನಡೆಸುತ್ತಿದ್ದರೂ ಈ ಅಸಾಮಾನ್ಯ ಪ್ರಯಾಣದಲ್ಲಿ ಇದ್ದಕ್ಕಿದ್ದಂತೆ ತನ್ನನ್ನು ಕಂಡುಕೊಳ್ಳುತ್ತಾನೆ, ಅದು ಅವನ ಜೀವನದ ದೃಷ್ಟಿಕೋನ ಮತ್ತು ಅದರಲ್ಲಿರುವ ಎಲ್ಲವನ್ನೂ ಬದಲಾಯಿಸುತ್ತದೆ. "ಪಚುವುಮ್ ಅದ್ಭುತ ವಿಲಕ್ಕುಮ್​" ಇದು ಭಾವನಾತ್ಮಕ ಪ್ರಯಾಣದ ಸುಂದರ ಕಥೆಯಾಗಿದ್ದು, ಹಾಸ್ಯ ಮತ್ತು ಸಿನಿಮೀಯ ಟಚ್ ಎಲ್ಲಾ ವಯಸ್ಸಿನ ಪ್ರೇಕ್ಷಕರಿಗೆ ಹಗುರವಾದ ಮತ್ತು ಆಕರ್ಷಕವಾದ ಮನರಂಜನೆಯನ್ನು ನೀಡುತ್ತದೆ" ಎಂದಿದ್ದಾರೆ.

ಪಚು ಅವರ ಭೇಟಿಯ ಸಮಯದಲ್ಲಿ, ಅನಿರೀಕ್ಷಿತ ಘಟನೆಗಳ ಸರಣಿಯು ಅವನನ್ನು ಲಾಭದಾಯಕ ಅವಕಾಶಕ್ಕೆ ಕೊಂಡೊಯ್ಯುತ್ತದೆ, ಅವನು ಊಹಿಸಿರುವುದಕ್ಕಿಂತಲೂ ಹೆಚ್ಚಿನ ಆಶ್ಚರ್ಯಗಳು ಮತ್ತು ತಿರುವುಗಳನ್ನು ಸುತ್ತಿಕೊಂಡಿದೆ. ಈ ಚಿತ್ರವು ಪಚು ಎಂಬ ಪಾತ್ರವನ್ನು ಹಿಂಬಾಲಿಸುತ್ತದೆ. ಪಯಣದ ಉದ್ದಕ್ಕೂ ಆ ಪಾತ್ರಕ್ಕೆ ಸಿಗುವ ಸಹಾನುಭೂತಿ ಮತ್ತು ಪ್ರೀತಿ ಕಥೆಯನ್ನು ಇನ್ನಷ್ಟೂ ಉತ್ಸಾಹಗೊಳಿಸುತ್ತದೆ.

ಕಥೆಯ ಸಾರ ಪ್ರೇಕ್ಷಕರಿಗೆ ತಲುಪಿದೆ: ನಿರ್ದೇಶಕ ಅಖಿಲ್ ಸತ್ಯನ್ ಮಾತನಾಡಿ,"ಪಚುವುಮ್ ಅದ್ಭುತ ವಿಲಕ್ಕುಮ್​ ಚಿತ್ರಕ್ಕೆ ಪ್ರಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಬಂದಿದೆ. ಅಲ್ಲದೇ ವಿಮರ್ಶಕರು ಸಹ ಉತ್ತಮ ಅಭಿಪ್ರಾಯವನ್ನು ಹೇಳಿದ್ದಾರೆ. ಇದಕ್ಕೆ ಕಥೆ ಮಾತ್ರ ಮೂಲ ಕಾರಣ ಅಲ್ಲ. ಫಹಾದ್​ ಅವರ ಮನೋಜ್ಞ ಅಭಿನಯವೂ ಚಿತ್ರಕ್ಕೆ ಒಳ್ಳೆಯ ಅಭಿಪ್ರಯಾಕ್ಕೆ ಕಾರಣವಾಗಿದೆ. ಪ್ರೇಕ್ಷಕರು ಚಿತ್ರದ ಪ್ರಯಾಣವನ್ನು ಇಷ್ಟ ಪಟ್ಟಿದ್ದಾರೆ. ನಾವು ಸಿನಿಮಾದ ಮೂಲಕ ಕೆಲ ಉತ್ತಮ ಅಂಶಗಳನ್ನು ಜನರಿಗೆ ತಿಳಿಸಲು ಪ್ರಯತ್ನಸಿದ್ದೇವೆ. ಇದು ಪ್ರೇಕ್ಷಕರಿಗೆ ತಲುಪುತ್ತಿದೆ ಎಂಬುದೇ ಸಂತೋಷವಾದ ವಿಷಯ. ಈಗ ಓಟಿಟಿಯಲ್ಲಿ ಬರುತ್ತಿರುವುದರಿಂದ ಇನ್ನಷ್ಟೂ ಪ್ರೇಕ್ಷಕರನ್ನು ಇದು ತಲುಪುತ್ತದೆ" ಎಂದು ಹೇಳಿದ್ದಾರೆ.

ಸೇತು ಮನ್ನಾರ್ಕ್ಕಾಡ್ ನಿರ್ಮಿಸಿದ, ಪಚುವುಮ್ ಅದ್ಭುತ ವಿಲಕ್ಕುಮ್ ಮೇ 26 ರಂದು ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿರುತ್ತದೆ. ತಮಿಳು ಮತ್ತು ತೆಲುಗಿಗೆ ಚಿತ್ರ ಡಬ್​ ಮಾಡಲಾಗಿದ್ದು ಆ ಭಾಷೆಗಳಲ್ಲೂ ಒಟಿಟಿಯಲ್ಲಿ ಲಭ್ಯವಿರಲಿದೆ.

ಇದನ್ನೂ ಓದಿ: ಸ್ಟಾರ್​ ಚಿನ್ಹೆಯೇ ಚಿತ್ರದ ಟೈಟಲ್: ವಿಭಿನ್ನ ಪ್ರಯತ್ನಕ್ಕೆ ಸಿಕ್ತು ಶಾಸಕ ರವಿ ಸುಬ್ರಮಣ್ಯ ಸಪೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.