ETV Bharat / entertainment

ಹೆಡ್ ಬುಷ್ ಸಿನಿಮಾದ ಹಬೀಬಿ ಸಾಂಗ್ ರಿಲೀಸ್.. ಡಾಲಿ ಜೊತೆ ಪಾಯಲ್ ರಜಪೂತ್ ಮಸ್ತ್ ಡ್ಯಾನ್ಸ್ - dolly dhananjay

ಪಾಯಲ್ ರಜಪೂತ್ ಡಾಲಿ ಹೆಜ್ಜೆ ಹಾಕಿರೋ ಹೆಡ್ ಬುಷ್ ಸಿನಿಮಾದ ಹಬೀಬಿ ಸಾಂಗ್ ರಿಲೀಸ್ ಆಗಿದೆ.

Habibi song release from Head Bush movie
ಹೆಡ್ ಬುಷ್ ಸಿನಿಮಾದ ಹಬೀಬಿ ಸಾಂಗ್ ರಿಲೀಸ್
author img

By

Published : Oct 6, 2022, 1:28 PM IST

ನಟರಾಕ್ಷಸ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಸದ್ಯ ಪ್ರೇಕ್ಷಕರ ಅದರಲ್ಲೂ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚು ಮಾಡೋ ಹೊಸ ಸಾಂಗ್ ರಿಲೀಸ್ ಆಗಿದೆ.

ಹೆಡ್ ಬುಷ್ ಚಿತ್ರದಲ್ಲಿ ಪಾಯಲ್ ರಜಪೂತ್ ಹೆಜ್ಜೆ ಹಾಕಿರೋ ಹಬೀಬಿ ಸಾಂಗ್ ರಿಲೀಸ್ ಆಗಿದೆ. ಪಂಜಾಬಿ ಬೆಡಗಿ ಪಾಯಲ್ ಸಖತ್ತಾಗಿ ಸೊಂಟ ಬಳುಕಿಸಿದ್ದು, ಹುಡುಗರು ಫಿದಾ ಆಗಿದ್ದಾರೆ. ಈಗಾಗಲೇ ಟಾಲಿವುಡ್​ನಲ್ಲಿ ಮಿಂಚಿರುವ ಪಾಯಲ್ ಈಗ ಸ್ಯಾಂಡಲ್ ವುಡ್​ಗೆ ಹೆಜ್ಜೆ ಇಟ್ಟಿದ್ದು, ಜಯರಾಜ್​ ಪಾತ್ರದ ಡಾಲಿ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

ಇಷ್ಟು ದಿನ ಅಭಿನಯದ ಮೂಲಕವೇ ಪ್ರೇಕ್ಷಕರನ್ನು ರಂಜಿಸಿ ನಟ ರಾಕ್ಷಸ ಎಂದು ಹೆಸರು ಪಡೆದುಕೊಂಡಿದ್ದ ಧನಂಜಯ್ ಈ ಹಾಡಿನ ಮೂಲಕ ಅಭಿಮಾನಿಗಳಿಂದ ಪದ ರಾಕ್ಷಸ ಎಂದು ಕರೆಸಿಕೊಳ್ತಿದ್ದಾರೆ. ಸದ್ಯ ಬಿಡುಗಡೆ ಆಗಿರೋ ಹೆಡ್ ಬುಷ್ ಸಿನಿಮಾದ ಹಬೀಬಿ ಹಾಡನ್ನು ಖುದ್ದು ಡಾಲಿ ಧನಂಜಯ್ ಅವರೇ ಬರೆದಿರೋದು ಸ್ಪೆಷಲ್.

  • " class="align-text-top noRightClick twitterSection" data="">

ಈ ಹಿಂದೆ ಬಡವ ರಾಸ್ಕಲ್, ಆರ್ಕ್ಯಾಸ್ಟ್ರಾ ಚಿತ್ರಗಳಿಗೆ ಸಾಹಿತ್ಯ ಬರೆದ ಮೇಲೆ ಹೆಡ್ ಬುಷ್ ಸಿನಿಮಾಗಾಗಿ ರಮಿಸೋ, ರಂಜಿಸೋ ಸಾಹಿತ್ಯ ಬರೆದಿದ್ದಾರೆ. ಡಾಲಿ ಧನಂಜಯ್, ಚರಣ್ ರಾಜ್ ಸಂಗೀತ ಅರೆಬಿಕ್ ಶೈಲಿಯ ಕ್ಯಾಬರೇ ಹಾಡಿಗೆ ಸದ್ಯ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ಇದನ್ನೂ ಓದಿ: ಹೆಡ್ ಬುಷ್ ಸಿನಿಮಾ ಪ್ರಚಾರ ಜೋರು.. ಸಂದರ್ಶನಕಾರನಾದ ನಟ ರಾಕ್ಷಸ

ಇನ್ನು, ಹೆಡ್ ಬುಸ್ ಸಿನಿಮಾ ಇದೇ ತಿಂಗಳ 21ಕ್ಕೆ ತೆರೆಗೆ ಬರುತ್ತಿದ್ದು, ಡಾಲಿ ಧನಂಜಯ್ ಜಯರಾಜ್ ಆಗಿ ಪ್ರೇಕ್ಷಕರ ಮುಂದೆ ರೆಟ್ರೋ ಸ್ಟೈಲ್​​ನಲ್ಲಿ ಎಂಟ್ರಿ ಕೊಡಲಿದ್ದಾರೆ. ಅಗ್ನಿ ಶ್ರೀಧರ್ ಕಥೆ, ಶೂನ್ಯ ಅವ್ರ ನಿರ್ದೇಶನ ಸಿನಿಮಾಗಿದ್ದು, ಸೋಮಣ್ಣ ಟಾಕೀಸ್ ಹಾಗೂ ಡಾಲಿ ಪಿಚ್ಚರ್ ಅಡಿಯಲ್ಲಿ ನಿರ್ಮಾಣ ಆಗಿದೆ. ಝೀ ಸ್ಟುಡಿಯೋಸ್ ಸಿನಿಮಾವನ್ನು ವಿತರಣೆ ಮಾಡ್ತಿದೆ. ಸಿನಿಮಾದಲ್ಲಿ ಬಹು ದೊಡ್ಡ ತಾರಾ ಬಳಗವಿದ್ದು ಲೂಸ್ ಮಾದ ಯೋಗಿ, ನಿರಂಜನ್, ರೋಷನ್, ಶ್ರುತಿ ಹರಿಹರನ್ ಸೇರಿ ಇನ್ನು ಅನೇಕರು ಅಭಿನಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.