ETV Bharat / entertainment

ಗುರುನಂದನ್​ ನಟನೆಯ 'ರಾಜು ಜೇಮ್ಸ್ ಬಾಂಡ್' ಚಿತ್ರದ 'ಬೇಕಿತ್ತಾ ಬೇಕಿತ್ತಾ' ಹಾಡು ಬಿಡುಗಡೆ - ನಿರ್ದೇಶಕ ದೀಪಕ್ ಮಧುವನಹಳ್ಳಿ

Watch: ನಟ ಗುರುನಂದನ್​ ಅಭಿನಯದ 'ರಾಜು ಜೇಮ್ಸ್ ಬಾಂಡ್' ಚಿತ್ರದ 'ಬೇಕಿತ್ತಾ ಬೇಕಿತ್ತಾ, ಈ ಲವ್​ ಬೇಕಿತ್ತಾ' ಹಾಡು ಬಿಡುಗಡೆಯಾಗಿದೆ.

Raju James Bond
ರಾಜು ಜೇಮ್ಸ್ ಬಾಂಡ್
author img

By

Published : Jun 9, 2023, 5:55 PM IST

'ಫಸ್ಟ್ ರ್ಯಾಂಕ್ ರಾಜು' ಚಿತ್ರದ ಮೂಲಕ ಗುರುನಂದನ್ ಸ್ಯಾಂಡಲ್​ವುಡ್​ನ​ ಭರವಸೆಯ ನಟರಾಗಿದ್ದಾರೆ. 'ರಾಜು ಕನ್ನಡ ಮೀಡಿಯಂ' ಚಿತ್ರದ ನಂತರ ಕೊಂಚ ಕಾಲ ಬ್ರೇಕ್​ ತೆಗೆದುಕೊಂಡಿದ್ದ ಗುರುನಂದನ್ ಇದೀಗ ಜೇಮ್ಸ್ ಬಾಂಡ್ ಲುಕ್​ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರೋ 'ರಾಜು ಜೇಮ್ಸ್ ಬಾಂಡ್' ಚಿತ್ರದ ಹಾಡೊಂದನ್ನು ಚಿತ್ರತಂಡ ಅನಾವರಣ ಮಾಡಿದೆ.

ನಿರ್ದೇಶಕ ದೀಪಕ್ ಮಧುವನಹಳ್ಳಿ ಬರೆದಿರುವ 'ಬೇಕಿತ್ತಾ ಬೇಕಿತ್ತಾ, ಈ ಲವ್​ ಬೇಕಿತ್ತಾ' ಎಂಬ ಹಾಡಿನ ಲಿರಿಕಲ್ ವಿಡಿಯೋ A2 music ಮೂಲಕ ಬಿಡುಗಡೆಯಾಗಿದೆ. ಅಂತೋನಿ ದಾಸ್ ಹಾಡಿರುವ ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಅಧಿಕಾರಿ ವೆಂಕಟೇಶ್ ಹಾಡು ಬಿಡುಗಡೆ ಮಾಡಿದ್ದಾರೆ.

ನಟ ಗುರುನಂದನ್ ಮಾತನಾಡಿ, "ನಿರ್ದೇಶಕ ದೀಪಕ್ ಮಧುವನಹಳ್ಳಿ ಒಳ್ಳೆಯ ಕಥೆ ಬರೆದಿದ್ದಾರೆ. ಮಂಜು ವಿಶ್ವಕರ್ಮ ಹಾಗೂ ಕಿರಣ್ ಬರ್ತೂರ್ ಯಾವುದೇ ಕುಂದು ಕೊರತೆ ಬಾರದಂತೆ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನನ್ನ ಪಾತ್ರ ನನ್ನ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿರುತ್ತದೆ. ಅನೂಪ್ ಸೀಳಿನ್ ಸಂಗೀತದಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳು ಚೆನ್ನಾಗಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ ಈ ಹಾಡು ಚೆನ್ನಾಗಿ ಮೂಡಿ ಬಂದಿದೆ" ಎಂದರು.

ಇದನ್ನೂ ಓದಿ: ಅರ್ಜುನ್​ ಸರ್ಜಾ ವಿರುದ್ಧ Me Too ಆರೋಪ ಪ್ರಕರಣ: ಶೃತಿ ಹರಿಹರನ್​ಗೆ ಕೋರ್ಟ್‌ ನೋಟಿಸ್

'ರಾಜು ಜೇಮ್ಸ್ ಬಾಂಡ್' ನನ್ನ ನಿರ್ದೇಶನದ ಮೂರನೇ ಚಿತ್ರ. ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ. ಲಂಡನ್​ನಲ್ಲಿ 21 ದಿನಗಳ ಚಿತ್ರೀಕರಣ ಮಾಡಿದ್ದೇವೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದು ನಿರ್ದೇಶಕ ದೀಪಕ್ ಮಧುವನಹಳ್ಳಿ ಹೇಳಿದರು. ಬಳಿಕ ನಿರ್ಮಾಪಕ ಮಂಜುನಾಥ್ ವಿಶ್ವಕರ್ಮ ಮತ್ತು ಕಿರಣ್ ಬರ್ತೂರ್ ಮಾತನಾಡಿ, "ರಾಜು ಜೇಮ್ಸ್ ಬಾಂಡ್ ಒಂದೊಳ್ಳೆ ಚಿತ್ರ. ಚಿತ್ರ ಉತ್ತಮವಾಗಿ ಮೂಡಿ ಬರಲು ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ. ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ. ಮುಂದೆ ಕೂಡ ಕನ್ನಡದಲ್ಲಿ ಇನ್ನಷ್ಟು ಚಿತ್ರಗಳನ್ನು ನಿರ್ಮಾಣ ಮಾಡುತ್ತೇವೆ" ಎಂದು ಹೇಳಿದರು.

"ಚಿತ್ರದಲ್ಲಿ ನಾಲ್ಕು ಹಾಡುಗಳಿದೆ‌. ನಾಲ್ಕು ಹಾಡುಗಳು ಕೂಡ ಸುಮಧುರವಾಗಿದೆ. ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ" ಎಂದು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ತಿಳಿಸಿದರು. ಇನ್ನೂ ಚಿತ್ರದಲ್ಲಿ ಗುರುನಂದನ್​ಗೆ ನಾಯಕಿಯಾಗಿ ಮೃದಲ‌ ನಟಿಸಿದ್ದಾರೆ. ರವಿಶಂಕರ್, ಸಾಧುಕೋಕಿಲ, ಅಚ್ಯುತಕುಮಾರ್, ಚಿಕ್ಕಣ್ಣ, ಜೈ ಜಗದೀಶ್, ತಬಲ ನಾಣಿ, ಮಂಜುನಾಥ್ ಹೆಗಡೆ, ವಿಜಯ್ ಚೆಂಡೂರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಈ ಚಿತ್ರಕ್ಕೆ ಕ್ಯಾಮರ ವರ್ಕ್ ಮಾಡಿದ್ದಾರೆ. ಆಲ್ ಮೋಸ್ಟ್ ಚಿತ್ರೀಕರಣ ಮುಗಿಸಿರೋ ರಾಜು ಜೇಮ್ಸ್ ಬಾಂಡ್ ಚಿತ್ರವನ್ನು ಆಗಸ್ಟ್ ನಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡ ಇದೆ.

ಇದನ್ನೂ ಓದಿ: Pathaan: 3,000ಕ್ಕೂ ಹೆಚ್ಚು ಪರದೆಯಲ್ಲಿ ರಷ್ಯಾ, ಸಿಐಎಸ್ ದೇಶಗಳಲ್ಲಿ ತೆರೆ ಕಾಣಲಿದೆ ಶಾರುಖ್ ನಟನೆಯ​ 'ಪಠಾಣ್'​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.