ETV Bharat / entertainment

ಗನ್ಸ್ ಅಂಡ್​​ ರೋಸಸ್: ಬಾರ್ ಸೆಟ್​ನಲ್ಲಿ ಸಖತ್ ಸ್ಟೆಪ್ ಹಾಕಿದ ಯುವನಟ ಅರ್ಜುನ್ - ajay kumar

Guns and Roses: ಗನ್ಸ್ ಅಂಡ್​​ ರೋಸಸ್ ಸಿನಿಮಾ ಶೂಟಿಂಗ್​ ಅಂತಿಮ ಘಟ್ಟ ತಲುಪಿದೆ..

Guns and Roses
ಗನ್ಸ್ ಆ್ಯಂಡ್​ ರೋಸಸ್
author img

By ETV Bharat Karnataka Team

Published : Oct 20, 2023, 12:22 PM IST

ಕನ್ನಡ ಚಿತ್ರರಂಗದಲ್ಲಿ ಹೊಸಬರ ಆಗಮನ ಸಾಮಾನ್ಯ. ಆ ಪೈಕಿ ಹಲವರಿಗೆ ಬಣ್ಣದ ಲೋಕ ಕೈ ಹಿಡಿದಿದ್ದು, ಚಂದನವನದಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಂಡಿದ್ದಾರೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಕಥೆಗಾರನಾಗಿ ಗುರುತಿಸಿಕೊಂಡಿರುವ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ''ಗನ್ಸ್ ಅಂಡ್​ ರೋಸಸ್'' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಿರುವುದು ನಿಮಗೆ ತಿಳಿದಿರುವ ವಿಷಯವೇ.

Guns and Roses
ಗನ್ಸ್ ಆ್ಯಂಡ್​ ರೋಸಸ್ ಸಾಂಗ್​ ಶೂಟಿಂಗ್

​ಅಂತಿಮ ಘಟ್ಟದಲ್ಲಿ ಚಿತ್ರೀಕರಣ: ''ಗನ್ಸ್ ಅಂಡ್​ ರೋಸಸ್'' ಸೆಟ್ಟೇರಿದಾಗಿನಿಂದಲೂ ಸಖತ್​​ ಸದ್ದು ಮಾಡುತ್ತಿದೆ. ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಅವರ ಸಿನಿಮಾ ಎಂಬ ಕಾರಣಕ್ಕೂ ಪ್ರೇಕ್ಷಕರ ಗಮನ ಸೆಳೆದಿದೆ. ಶ್ರೀನಿವಾಸ ಕುಮಾರ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ''ಗನ್ಸ್ ಅಂಡ್​ ರೋಸಸ್'' ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ.

''108ಗೆ ಫೋನ್ ಮಾಡೋ ಶಿಷ್ಯ, ಸಾವು ಬದುಕಿನ ಮಧ್ಯೆ ಹೋರಾಡೋ ವಿಷ್ಯ'': ಬಹುತೇಕ ಶೂಟಿಂಗ್​​ ಕಂಪ್ಲೀಟ್​ ಆಗಿದೆ. ಕೆಲ ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಸುಮಾರು 40 ದಿನಗಳ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ವಿಜಯ್ ಪ್ರಕಾಶ್ ಅವರು ಹಾಡಿರುವ '108ಗೆ ಫೋನ್ ಮಾಡೋ ಶಿಷ್ಯ' ಎಂಬ ಹಾಡು ಇತ್ತೀಚೆಗೆ ಬಾರ್ ಸೆಟ್​​ನಲ್ಲಿ ಅದ್ಧೂರಿಯಾಗಿ ಚಿತ್ರೀಕರಣಗೊಂಡಿದೆ. ನೃತ್ಯ ನಿರ್ದೇಶಕ ಧನಂಜಯ ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ನಾಯಕ ಅರ್ಜುನ್, ಡ್ಯಾನ್ಸರ್ಸ್ ಜೊತೆ ಸಖತ್​ ಹಾಕಿದ್ದಾರೆ.

Guns and Roses
ಗನ್ಸ್ ಆ್ಯಂಡ್​ ರೋಸಸ್ ಸಾಂಗ್​ ಶೂಟಿಂಗ್

ಗನ್ಸ್ ಆ್ಯಂಡ್ ರೋಸಸ್ ಚಿತ್ರತಂಡ: ಅರ್ಜುನ್ ಜೋಡಿಯಾಗಿ ಯಶ್ಚಿಕ ನಿಷ್ಕಲ ಅಭಿನಯಿಸಿದ್ದಾರೆ. ಇವರ ಜೊತೆಗೆ ಶೋಭ್ ರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣಾ ಬಾಲರಾಜ್, ಡೈಮಂಡ್‌ ರಾಜಣ್ಣ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌. ಶರತ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮಲ್ಲೇನಹಳ್ಳಿ ರಾಜು ನಿರ್ಮಾಣ ನಿರ್ವಹಣೆ ಮತ್ತು ಮುನಿರಾಜ್ (ಕಬ್ಜ) ಅವರ ಸಹ ನಿರ್ದೇಶನವಿದೆ.

ಇದನ್ನೂ ಓದಿ: ಅಬ್ಬಬ್ಬಾ...ವಿಶ್ವಾದ್ಯಂತ 140 ಕೋಟಿ ರೂ. ಗಳಿಸಿದ 'ಲಿಯೋ': ದೇಶೀಯ ಗಲ್ಲಾಪಟ್ಟಿಗೆಯಲ್ಲೇ 60 ಕೋಟಿ ರೂ. ಕಲೆಕ್ಷನ್​!

ಹೆಚ್ ಆರ್ ನಟರಾಜ್ ನಿರ್ಮಾಣದ ಗನ್ಸ್ ಅಂಡ್​​ ರೋಸಸ್ ಸಿನಿಮಾದ ಬಾಕಿ ಉಳಿದಿರುವ ಶೂಟಿಂಗ್ ಮುಗಿಸಿ ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್​ ಹಾಕಿಕೊಂಡಿದೆ. ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಅವರಿಗೆ ಈ ಸಿನಿಮಾ ಎಷ್ಟರ ಮಟ್ಟಿಗೆ ಯಶಸ್ಸು, ಜನಪ್ರಿಯತೆ ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ' ಬಿಡುಗಡೆಗೆ ಮುಹೂರ್ತ ಫಿಕ್ಸ್: ಅದ್ಭುತ ಪ್ರೇಮಕಥೆ ವೀಕ್ಷಿಸಲು ಪ್ರೇಕ್ಷಕರ ಕಾತರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.