ETV Bharat / entertainment

'ನಾನು ನಗಿಸ್ತಾ ಇರ್ತೀನಿ ಯಾವತ್ತೂ ಅಳೊಲ್ಲ' ಅಂತಿದ್ದಾರೆ ಗೋಲ್ಡನ್ ಸ್ಟಾರ್: ಗಾಳಿಪಟ 2 ಚಿತ್ರದ ಟ್ರೈಲರ್ ಲಾಂಚ್​​ - ಗೋಲ್ಡನ್ ಸ್ಟಾರ್ ಗಣೇಶ್

ಗಾಳಿಪಟ 2 ಚಿತ್ರದ ಅಧಿಕೃತ ಟ್ರೈಲರ್ ಅನಾವರಣ- ಆ. 12 ರಂದು ವಿಶ್ವದಾದ್ಯಂತ ಚಿತ್ರ ತೆರೆಗೆ- ಸಿನಿಮಾ ತಂಡದಿಂದ ಮಾಹಿತಿ

Gaalipata 2 Movie Trailer Released
ಗಾಳಿಪಟ 2 ಚಿತ್ರದ ಟ್ರೈಲರ್ ಅನಾವರಣ
author img

By

Published : Aug 1, 2022, 12:17 PM IST

2008ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ‌ ಎಬ್ಬಿಸಿದ ಸಿನಿಮಾ ಗಾಳಿಪಟ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದ ಗಾಳಿಪಟ ಚಿತ್ರ ಸೂಪರ್ ಹಿಟ್ ಆಗಿ, ಬಾಕ್ಸ್ ಆಫೀಸ್​​ನಲ್ಲೂ ಒಳ್ಳೆ ಗಳಿಕೆ ಮಾಡಿತ್ತು. ಸದ್ಯ ಗಣಿ ಹಾಗು ಭಟ್ರು ಜುಗಲ್ ಬಂದಿಯಲ್ಲಿ ಗಾಳಿಪಟ 2 ಸಿನಿಮಾ ಬರ್ತಾ ಇದೆ. ಹಾಡುಗಳಿಂದಲೇ ಸ್ಯಾಂಡಲ್ ವುಡ್ ನಲ್ಲಿ ಬೇಜಾನ್ ಹೈಪ್ ಕ್ರಿಯೇಟ್ ಆಗಿರುವ ಗಾಳಿಪಟ 2 ಚಿತ್ರದ ಅಧಿಕೃತ ಟ್ರೈಲರ್ ಅನಾವರಣಗೊಂಡಿದೆ.

  • " class="align-text-top noRightClick twitterSection" data="">

ಕನ್ನಡ ಮೇಷ್ಟ್ರು, ಎಲ್ಲರಿಗೂ ಇಷ್ಟ ಆಗುವ ಗಣೇಶ್, ದಿಗಂತ್, ಪವನ್ ಕುಮಾರ್ ತರ್ಲೆ ತಮಾಷೆ ಜೊತೆಗೆ ಮೂರು ಜನ ನಾಯಕಿಯರ ಎಂಟ್ರಿ, ಫ್ಯಾಮಿಲಿ ಡ್ರಾಮ ಹಾಗೂ ಸಂಬಂಧಗಳ ಮೌಲ್ಯಗಳು ಎಷ್ಟು ಮುಖ್ಯ ಅನ್ನೋದು ಗಾಳಿಪಟ 2 ಸಿನಿಮಾದ ಟ್ರೈಲರ್ ಒಳಗೊಂಡಿದೆ. ಈ ಟ್ರೈಲರ್​​ನ ಕೊನೆಯಲ್ಲಿ ಗಣೇಶ್ 'ನಾನು ನಗಿಸ್ತಾ ಇರ್ತೀನಿ ಯಾವತ್ತೂ ಅಳೊಲ್ಲ' ಎಂದು ಹೇಳುವ ಡೈಲಾಗ್ ಪಂಚಿಂಗ್ ಆಗಿದೆ.

ಈ ಚಿತ್ರದಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ಜೊತೆಗೆ ಅನಂತನಾಗ್, ರಂಗಾಯಣ ರಘು, ಸುಧಾ ಬೆಳವಾಡಿ, ಪದ್ಮಜಾ ರಾವ್ ಪಾತ್ರಗಳು ನೋಡುಗರನ್ನ ಇಂಪ್ರೆಸ್ ಮಾಡುತ್ತದೆ.

ಸಂತೋಷ್ ರೈ ಪಾತಾಜೇ ಕ್ಯಾಮರಾ ವರ್ಕ್​, ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ. ನಾತಿಚರಾಮಿ, ಪಡ್ಡೆಹುಲಿ, 100 ಸಿನಿಮಾಗಳನ್ನ ನಿರ್ಮಾಣ ಮಾಡಿರುವ ನಿರ್ಮಾಪಕ ಎಂ. ರಮೇಶ್ ರೆಡ್ಡಿ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕನ್ನಡದ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್‌ ಸಂಸ್ಥೆ ಈ ಸಿನಿಮಾವನ್ನ ವಿತರಣೆ ಜವಾಬ್ದಾರಿಯನ್ನ ವಹಿಸಿಕೊಂಡಿದೆ. ಸದ್ಯ ಟೀಸರ್, ಟ್ರೈಲರ್​​​ನಿಂದಲೇ ಸೆನ್ಸೇಷನ್​​ ಕ್ರಿಯೇಟ್ ಮಾಡುತ್ತಿರುವ ಈ ಚಿತ್ರ ಆ. 12 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

ಇದನ್ನೂ ಓದಿ: ಬಿಡುಗಡೆಗೂ ಮುಂಚೆ ಸಖತ್ ಸೌಂಡ್ ಮಾಡುತ್ತಿದ್ದಾರೆ ಗಾಳಿಪಟ 2 ಪಂಟರ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.