ಕನ್ನಡ ಮಾತ್ರವಲ್ಲದೇ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ 'ಘೋಸ್ಟ್'. ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಮತ್ತು ನಿರ್ದೇಶಕ ಶ್ರೀನಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಮೋಷನ್ ಪೋಸ್ಟರ್ನಿಂದಲೇ ಸಾಕಷ್ಟು ಟಾಕ್ ಆಗುತ್ತಿರುವ 'ಘೋಸ್ಟ್' ಸಿನಿಮಾದ 'BIG DADDY' ಫಸ್ಟ್ ಲುಕ್ ರಿಲೀಸ್ ಆಗಿದೆ.
ಜುಲೈ 12 ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆ 'BIG DADDY' ಎಂಬ ಸ್ಪೆಷಲ್ ವಿಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಅದಕ್ಕೂ ಮುನ್ನ ಇಂದು ನಿರ್ದೇಶಕ ಶ್ರೀನಿ ಅವರ ಹುಟ್ಟುಹಬ್ಬದ ಸಲುವಾಗಿ 'ಬಿಗ್ ಡ್ಯಾಡಿ' ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಶಿವಣ್ಣ ರೈಫಲ್ ಹಿಡಿದು ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಕಾಣಿಸಿದ ಹೊಸ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ನಿಮ್ಮ ಮುಂದೆ ಬರಲಿದ್ದಾರೆ.
-
"When Violence Dies, Big Daddy Is Born”
— SRINI (@lordmgsrinivas) July 9, 2023 " class="align-text-top noRightClick twitterSection" data="
Don't miss the grand debut on #July12 at 11:45am on the
T-Series YouTube channel. Join the excitement and embrace #GHOST as we welcome the mighty #BIGDADDY!"@NimmaShivanna @SandeshPro @baraju_SuperHit @TSeries @ArjunJanyaMusic pic.twitter.com/EApTABjlY9
">"When Violence Dies, Big Daddy Is Born”
— SRINI (@lordmgsrinivas) July 9, 2023
Don't miss the grand debut on #July12 at 11:45am on the
T-Series YouTube channel. Join the excitement and embrace #GHOST as we welcome the mighty #BIGDADDY!"@NimmaShivanna @SandeshPro @baraju_SuperHit @TSeries @ArjunJanyaMusic pic.twitter.com/EApTABjlY9"When Violence Dies, Big Daddy Is Born”
— SRINI (@lordmgsrinivas) July 9, 2023
Don't miss the grand debut on #July12 at 11:45am on the
T-Series YouTube channel. Join the excitement and embrace #GHOST as we welcome the mighty #BIGDADDY!"@NimmaShivanna @SandeshPro @baraju_SuperHit @TSeries @ArjunJanyaMusic pic.twitter.com/EApTABjlY9
'ಶ್ರೀನಿವಾಸ ಕಲ್ಯಾಣ', 'ಓಲ್ಡ್ ಮಾಂಕ್' ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಶ್ರೀನಿ 'ಘೋಸ್ಟ್' ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ರೀನಿ ನಿರ್ದೇಶನವಾಗಿರುವುದರಿಂದ 'ಘೋಸ್ಟ್' ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಮುಗಿಲೆತ್ತರದಲ್ಲಿದೆ. ಜನ್ಮದಿನ ಆಚರಿಸಿಕೊಳ್ಳುತ್ತಿರುವ 'ಘೋಸ್ಟ್' ಒಡೆಯನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಿನಿಮಾ ಸೆಲೆಬ್ರಿಟಿಗಳು, ಸ್ನೇಹಿತರು, ಕುಟುಂಬಸ್ಥರು ಸೇರಿದಂತೆ ಅನೇಕರು ವಿಶ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಶ್ರೇಷ್ಠ ಸಾಹಿತಿ ರವೀಂದ್ರನಾಥ್ ಠಾಗೋರ್ ಪಾತ್ರದಲ್ಲಿ ಅನುಪಮ್ ಖೇರ್: ಹಿರಿಯ ನಟನ 538ನೇ ಸಿನಿಮಾ!
ಶಿವಣ್ಣನಿಗೆ 'BIG DADDY' ಸರ್ಪ್ರೈಸ್: ಶಿವ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಸಲುವಾಗಿ ಬಹು ನಿರೀಕ್ಷಿತ "ಘೋಸ್ಟ್" ಚಿತ್ರತಂಡದಿಂದ ವಿಶೇಷ ವಿಡಿಯೋವೊಂದು ಅನಾವರಣಗೊಳ್ಳಲಿದೆ. 'BIG DADDY' ಎಂಬ ಸ್ಪೆಷಲ್ ವಿಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಈ BIG DADDY ವಿಡಿಯೋವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ.
'ಘೋಸ್ಟ್' ಪ್ಯಾನ್ ಇಂಡಿಯಾ ಸಿನಿಮಾ: ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ 'ಘೋಸ್ಟ್' ಚಿತ್ರ ತೆರೆ ಕಾಣಲಿದೆ. ಸದ್ಯ ಶಿವಣ್ಣನ ಲುಕ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಚಿತ್ರದಲ್ಲಿ ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಸಿನಿಮಾದ ಸಂಭಾಷಣೆ ಜವಾಬ್ದಾರಿ ಮಾಸ್ತಿ ಹಾಗೂ ಪ್ರಸನ್ನ ಅವರದ್ದು.
ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಘೋಸ್ಟ್ ಚಿತ್ರಕ್ಕಿದೆ. ಐದು ಸಾಹಸ ಸನ್ನಿವೇಶಗಳು ಚಿತ್ರದಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂದೇಶ್ ನಾಗರಾಜ್ ಅರ್ಪಿಸಲಿದ್ದಾರೆ. ಸಂದೇಶ್ ಎನ್ ಸಿನಿಮಾವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: 'ಸಂಜು ವೆಡ್ಸ್ ಗೀತಾ' ಪಾರ್ಟ್ 2 ಘೋಷಣೆ; ನಾಯಕಿಯಾಗಿ ರಮ್ಯಾ ಇರ್ತಾರಾ?