ETV Bharat / entertainment

'ದಿ ರೊಮ್ಯಾಂಟಿಕ್ಸ್'ನಲ್ಲಿ ಹಿಂದಿ ಚಿತ್ರರಂಗದ ತಾರೆಯರ ಸಮಾಗಮ

50 ವರ್ಷಗಳ ಕಾಲ ಯಶ್ ರಾಜ್ ಫಿಲ್ಮ್ಸ್ ನೊಂದಿಗೆ ಸಿನಿಮಾ ನಿರ್ಮಾಣ ಮಾಡಿದ ಬಾಲಿವುಡ್​ ಬಳಗ ಫೆ.14 ರಂದು 'ದಿ ರೊಮ್ಯಾಂಟಿಕ್ಸ್' ಜೊತೆ ಬರುತ್ತಿದೆ.

Smriti Mundra
ಸ್ಮೃತಿ ಮುಂದ್ರಾ
author img

By

Published : Feb 6, 2023, 8:05 PM IST

ಮುಂಬೈ :'ದಿ ರೊಮ್ಯಾಂಟಿಕ್ಸ್' ಎಂಬ ಡಾಕ್ಯುಮೆಂಟರಿ ಟ್ರೈಲರ್ ಅನ್ನು ನೆಟ್‌ಫ್ಲಿಕ್ಸ್​ನಲ್ಲಿ ಇಂದು ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್​ ಖ್ಯಾತ ಹಿಂದಿ ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ ಮತ್ತು ಅವರ ನಿರ್ಮಾಣ ಸಂಸ್ಥೆಯಾದ ಯಶ್ ರಾಜ್ ಫಿಲ್ಮ್ಸ್ ಗೆ ಸಂಬಂಧಿಸಿರುವುದಾಗಿದೆ. ಸಂಸ್ಥೆದೊಂದಿಗೆ 50 ವರ್ಷಗಳ ಕಾಲ ನಿಕಟವಾಗಿ ಕೆಲಸ ಮಾಡಿದ ಬಾಲಿವುಡ್​ನ 35 ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಿರುವ ಡಾಕ್ಯುಮೆಂಟರಿ ಇದಾಗಿದೆ. ಇಂಡಿಯನ್ ಮ್ಯಾಚ್‌ಮೇಕಿಂಗ್ ಖ್ಯಾತಿಯ ಸ್ಮೃತಿ ಮುಂದ್ರಾ ಅವರು ಈ ​ ಡಾಕ್ಯುಮೆಂಟ್ರಿ ಅನ್ನು ನಿರ್ದೇಶಿಸಿದ್ದು ಪ್ರೇಮಿಗಳ ದಿನವಾದ ಫೆ.14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಹೀಗಾಗಿ ಅಭಿಮಾನಿಗಳು ಈ ಥ್ರಿಲ್ಲಿಂಗ್​​ ಡಾಕ್ಯುಮೆಂಟರಿ ನೋಡಲು ಕಾತರರಾಗಿದ್ದಾರೆ.

ಈ ಟ್ರೇಲರ್​ನಲ್ಲಿ ಮೂರು ತಲೆಮಾರಿನ ನಟ ನಟಿರಾದ ರಿಷಿ ಕಪೂರ್, ಅಮಿತಾಭ್ ಬಚ್ಚನ್, ಶಾರುಖ್ ಖಾನ್, ರಾಣಿ ಮುಖರ್ಜಿ, ರಣಬೀರ್ ಕಪೂರ್, ಅಭಿಷೇಕ್ ಬಚ್ಚನ್, ಭೂಮಿ ಪೆಡ್ನೇಕರ್ ಮತ್ತು ರಣವೀರ್ ಸಿಂಗ್, ದಿವಂಗತ ಚಿತ್ರನಿರ್ಮಾಪಕ ಯಶ್ ಚೋಪ್ರಾ ಅವರ ಬಗ್ಗೆ ಕುರಿತು ಮಾತನಾಡುವುದು ಈ ಕಿರುಚಿತ್ರದಲ್ಲಿ ಚಿತ್ರೀಕರಿಸಲಾಗಿದೆ. ಇವರೆಲ್ಲರ ಇತಿಹಾಸವೂ ಈ ಚಿಕ್ಕ ಕಥೆಯಲ್ಲಿ ಇದೆ ಎಂದು ಚಿತ್ರತಂಡ ಹೇಳಿದೆ.

ಟ್ರೇಲರ್​ ಏನು ಹೇಳುತ್ತದೆ ಗೊತ್ತಾ?: ಸಲೀಂ ಖಾನ್ ಮತ್ತು ರಣಬೀರ್ ಕಪೂರ್ "ಬಾಲಿವುಡ್" ಪದದ ಬಗ್ಗೆ ತಮ್ಮ ದ್ವೇಷವನ್ನು ವ್ಯಕ್ತಪಡಿಸುವುದರೊಂದಿಗೆ ಟ್ರೈಲರ್ ಪ್ರಾರಂಭವಾಗುತ್ತದೆ. ಅಮೀರ್ ಖಾನ್, ಹೃತಿಕ್ ರೋಷನ್, ಮಾಧುರಿ ದೀಕ್ಷಿತ್, ಕಾಜೊಲ್​, ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್, ಆಯುಷ್ಮಾನ್ ಖುರಾನಾ ಮತ್ತು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಅಡಿಯಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಪ್ರಖ್ಯಾತಿಗಳಿಸಿದ ಅನೇಕ ತಾರೆಯರು ಮನಬಿಚ್ಚಿ ಬಾಲಿವುಡ್​ ಮತ್ತು ಭಾರತೀಯ ಸಿನಿರಂಗದ ಬಗ್ಗೆ ಮಾತನಾಡಿದ್ದಾರೆ.

ಇಂದು ಬಿಡುಗಡೆಯಾಗಿರುವ ಟ್ರೇಲರ್​ನಲ್ಲಿ ಕರಣ್ ಜೋಹರ್ ಅವರು ಯಶ್ ಚೋಪ್ರಾ ಬಗ್ಗೆ ಮಾತನಾಡುತ್ತಾ, "ನಾನು ಎಲ್ಲಾ ಸುಂದರವಾದ ಚಲನಚಿತ್ರಗಳನ್ನು ನೋಡುತ್ತೇನೆ, ಆದರೆ ಅಂತಹ ಸಾಕಷ್ಟು ಸಿನಿಮಾಗಳು ನನ್ನ ಕಣ್ಣಿಗೆ ಬಿದ್ದದ್ದು ಯಶ್ ಚೋಪ್ರಾ ಅವರು ನಿರ್ಮಾಣ ಮಾಡಿದ ಸಿನಿಮಾಗಳು ಎಂದಿದ್ದಾರೆ.

ಬಿಗ್ ಬಿ (ಅಮಿತಾಭ್ ಬಚ್ಚನ್) ಅವರನ್ನು "ವಿಭಿನ್ನ ಪಾತ್ರಗಳೊಂದಿಗೆ ಚಿತ್ರಗಳನ್ನು ಮಾಡಲು ಬಯಸುವ ಯುವ ಚಲನಚಿತ್ರ ನಿರ್ಮಾಪಕ" ಎಂದು ಬಣ್ಣಿಸಿದ್ದಾರೆ. ಯಶ್ ಚೋಪ್ರಾ ಅವರು ರೋಮ್ಯಾಂಟಿಕ್, ಸಾಮಾಜಿಕ ನಾಟಕಗಳು ಮತ್ತು ಸಾಹಸ ಚಲನಚಿತ್ರಗಳನ್ನು ನಿರ್ಮಾಣ ಮಾಡಿ ಖ್ಯಾತಿ ಗಳಿಸಿದ್ದಾರೆ. ಹಾಗೂ ಬಾಲಿವುಡ್​ನಲ್ಲಿ ಈ ನಿರ್ಮಾಣ ಸಂಸ್ಥೆ ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮ ತಂದು ಕೊಟ್ಟಿದೆ ಎಂದು ಕರಣ್​ ಜೋಹರ್​ ಹೇಳಿದ್ದಾರೆ.

ಇದನ್ನೂ ಓದಿ :ಬಿಜ್‌ಕಾನ್ ಕಾನ್ಕ್ಲೇವ್ ಕಾರ್ಯಕ್ರಮ.. ಚಿತ್ರ ನಟಿ ಪ್ರಾಚಿ ದೇಸಾಯಿ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.