ETV Bharat / entertainment

'ಲೋಕಾನೆ ಗರಡಿ..ಬಾಳೇ ಅಖಾಡ': 'ಗರಡಿ' ಟೈಟಲ್ ಸಾಂಗ್ ಬಿಡುಗಡೆ

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ಗರಡಿ'ಯ ಟೈಟಲ್ ಟ್ರ್ಯಾಕ್‌ ಅನಾವರಣಗೊಂಡಿದೆ.

Garadi movie team
ಗರಡಿ ಚಿತ್ರತಂಡ
author img

By ETV Bharat Karnataka Team

Published : Sep 27, 2023, 2:23 PM IST

'ಗರಡಿ' ಹೆಸರು ಕೇಳುತ್ತಿದ್ದಂತೆ ಸ್ಯಾಂಡಲ್​ವುಡ್​ ವಿಕಟ ಕವಿ ಯೋಗರಾಜ್ ಭಟ್ ನೆನಪಾಗುತ್ತಾರೆ. ಅಪ್ಪಟ ದೇಸಿ ಕ್ರೀಡೆಯಾಗಿರುವ ಗರಡಿ ಕುರಿತ ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶಿಸುತ್ತಿರುದ್ದಾರೆ. ಇದೀಗ ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆ ಸಜ್ಜಾಗಿದೆ.

  • " class="align-text-top noRightClick twitterSection" data="">

ಗರಡಿ ಟೈಟಲ್ ಟ್ರ್ಯಾಕ್‌ ರಿಲೀಸ್​: ಚಿತ್ರದ ಪ್ರಚಾರದ ಭಾಗವಾಗಿ ಗರಡಿ‌ ಚಿತ್ರದ ಟೈಟಲ್ ಟ್ರ್ಯಾಕ್​ ಅನಾವರಣಗೊಂಡಿದೆ. ಯೋಗರಾಜ್ ಭಟ್ ಬರೆದಿರುವ 'ಲೋಕಾನೆ ಗರಡಿ..ಬಾಳೇ ಅಖಾಡ' ಎಂಬ ಅರ್ಥಗರ್ಭಿತ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗಾಯಕ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಂಗೀತ ನೀಡುವುದರ ಜೊತೆಗ ವಿ.ಹರಿಕೃಷ್ಣ ಅವರೇ ಮುಖ್ಯ ಗಾಯಕರಾಗಿಯೂ ಹಾಡು ಹಾಡಿದ್ದಾರೆ. ಹರಿಕೃಷ್ಣ ಜೊತೆಗೆ ಸಾಕಷ್ಟು ಗಾಯಕರು ಸಹ ಧ್ವನಿಯಾಗಿದ್ದಾರೆ. ಇತ್ತೀಚೆಗೆ ನಡೆದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

Garadi movie team
ನವೆಂಬರ್ 10ಕ್ಕೆ ಸಿನಿಮಾ ಬಿಡುಗಡೆ

ಗರಡಿ ಸುತ್ತ ಚಿತ್ರದ ಕಥೆ: ಗರಡಿ ಎಂದರೆ ಒಂದು ಊರು ಕಾಯುವ ಪೊಲೀಸ್ ಠಾಣೆ ಇದ್ದ ಹಾಗೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, ''ಹಿಂದೆ ಒಂದು ಊರಿನ ರಕ್ಷಣೆಗೆ ಗರಡಿ ಬಹು ಮುಖ್ಯವಾಗಿತ್ತು. ಊರಿನವರು ಸಹ ಗರಡಿ ಮನೆಯ ಕುಸ್ತಿಪಟುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದರು. ಅಂತಹ ಗರಡಿ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಗರಡಿ ಮನೆಯ ಯಜಮಾನನಾಗಿ ಬಿ.ಸಿ.ಪಾಟೀಲ್ ಅಭಿನಯಿಸಿದ್ದಾರೆ. ಅವರ ಶಿಷ್ಯನಾಗಿ ಸೂರ್ಯ. ಇದೊಂದು ರೀತಿ ದ್ರೋಣಾಚಾರ್ಯ ಹಾಗೂ ಏಕಲವ್ಯನ ಕಥೆ ಎನ್ನಬಹುದು. ಹಾಡನ್ನು ಹರಿಕೃಷ್ಣ ಅದ್ಭುತವಾಗಿ ಸಂಯೋಜಿಸಿ, ಹಾಡಿದ್ದಾರೆ. ಎಲ್ಲಾ ವರ್ಗದವರು ನೋಡಬಹುದಾದ ಚಿತ್ರವಿದು'' ಎಂದು ತಿಳಿಸಿದರು.

ವಿಶೇಷ ಪಾತ್ರದಲ್ಲಿ ದರ್ಶನ್​​: ಬಳಿಕ ನಾಯಕ ನಟ ಸೂರ್ಯ ಮಾತನಾಡಿ, "ಈ ಚಿತ್ರದಲ್ಲೂ ನನ್ನ ಹೆಸರು ಸೂರ್ಯ. ಸಿನಿಮಾದಲ್ಲಿ ಎಲ್ಲರೂ "ಗರಡಿ ಸೂರಿ" ಅಂತ ಕರೆಯುತ್ತಾರೆ. ಈ ಚಿತ್ರದಲ್ಲಿ ನನಗೆ ಅವಕಾಶ ಸಿಗಲು ದರ್ಶನ್ ಅವರು ಕಾರಣ. ಅವರು ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಡುಗಡೆಯಾಗಿರುವ ಹಾಡಿನಲ್ಲಿ ನಾನು ಮೈ ಕುಣಿಸಿದ್ದೇನೆ. ಯೋಗರಾಜ್ ಭಟ್ ಸಾಹಿತ್ಯ ಹಾಗೂ ಹರಿಕೃಷ್ಣ ಸಂಗೀತದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ" ಎಂದರು.

ಸೂರ್ಯಗೆ ಜೋಡಿಯಾಗಿ ಸೋನಾಲ್ ಮಾಂತೆರೊ ಅಭಿನಯಿಸಿದ್ದಾರೆ. ಇನ್ನುಳಿದಂತೆ, ರವಿಶಂಕರ್ ಗೌಡ, ಸುಜಯ್, ಧರ್ಮಣ್ಣ, ರಾಘು ಸೇರಿದಂತೆ ಸಾಕಷ್ಟು ಕಲಾವಿದರು ಇದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುಮುಖ್ಯ ಪಾತ್ರವೊಂದರಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲಿದ್ದಾರೆ.

Garadi movie team
ಗರಡಿ ಟೈಟಲ್ ಟ್ರ್ಯಾಕ್‌ ರಿಲೀಸ್​ ಈವೆಂಟ್​​

ನವೆಂಬರ್ 10ಕ್ಕೆ ಬಿಡುಗಡೆ: ಗರಡಿ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿರುವ ಬಿ.ಸಿ.ಪಾಟೀಲ್ ಮಾತನಾಡಿ, "ಗರಡಿ ಚಿತ್ರ ಆರಂಭವಾಗಿ ಈ ನವೆಂಬರ್ 14ಕ್ಕೆ ಎರಡು ವರ್ಷಗಳಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಈ ಚಿತ್ರ ಆರಂಭವಾಗಿತ್ತು. ದರ್ಶನ್ ಶೀರ್ಷಿಕೆ ಅನಾವರಣ ಮಾಡಿದ್ದರು. ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅಂದರೆ ನವೆಂಬರ್ 10ರಂದು ಚಿತ್ರ ಬಿಡುಗಡೆಯಾಗಲಿದೆ. ಯೋಗರಾಜ್ ಭಟ್ ಬಹಳ ಶ್ರಮವಹಿಸಿ ಚಿತ್ರವನ್ನು ಉತ್ತಮವಾಗಿ ನಿರ್ದೇಶನ ಮಾಡಿದ್ದಾರೆ. ನಾನು ಈಗಾಗಲೇ ಚಿತ್ರವನ್ನು ಸಾಕಷ್ಟು ಸಲ ನೋಡಿ ಖುಷಿಪಟ್ಟಿದ್ದೇನೆ. ನಿಮಗೂ ಚಿತ್ರ ಹಿಡಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಾಂಪ್ರದಾಯಿಕ ನೋಟ ಬೀರಿದ ಸೌತ್​ ಸಿನಿಮಾ ಸುಂದರಿ: ಮಾಳವಿಕಾ ಮೋಹನನ್ ಫೋಟೋಗಳಿಗೆ ಮೆಚ್ಚುಗೆಯ ಮಳೆ

ನಿರಂಜನ್ ಬಾಬು ಛಾಯಾಗ್ರಹಣವಿದ್ದು, ಧನಂಜಯ​ ನೃತ್ಯ ಸಂಯೋಜನೆ ‌ಮಾಡಿದ್ದಾರೆ‌. ವನಜಾ ಪಾಟೀಲ್ ನಿರ್ಮಾಣ ಮಾಡಿದ್ದು, ಸೃಷ್ಟಿ ಪಾಟೀಲ್ ಕಾರ್ಯಕಾರಿ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ನಯನತಾರಾ-ವಿಘ್ನೇಶ್​ ಶಿವನ್​​​ ಅವಳಿ ಮಕ್ಕಳ ಮೊದಲ ವರ್ಷದ ಜನ್ಮದಿನ: ಫೋಟೋ ಹಂಚಿಕೊಂಡ ಸ್ಟಾರ್ ಕಪಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.