ETV Bharat / entertainment

ಅಭಿಮಾನಿಗಳಿಗೆ ಗಣೇಶ ಚತುರ್ಥಿಯ ಶುಭಾಶಯ ತಿಳಿಸಿದ ಸೂಪರ್​ಸ್ಟಾರ್ಸ್​ ರಾಮ್​ಚರಣ್​, ಅಲ್ಲು ಅರ್ಜುನ್​ - ಈಟಿವಿ ಭಾರತ ಕನ್ನಡ

ಟಾಲಿವುಡ್​ ನಟರಾದ ರಾಮ್​ಚರಣ್​ ಮತ್ತು ಅಲ್ಲು ಅರ್ಜುನ್​ ತಮ್ಮ ಮನೆಯಲ್ಲಿನ ಚೌತಿ ಸಂಭ್ರಮಾಚರಣೆಯ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

Ganesh Chaturthi 2023: Ram Charan celebrates 'first festival with the little Klin Kaara,' Allu Arjun wishes fans
ಅಭಿಮಾನಿಗಳಿಗೆ ಗಣೇಶ ಚತುರ್ಥಿಯ ಶುಭಾಶಯ ತಿಳಿಸಿದ ಸೂಪರ್​ಸ್ಟಾರ್ಸ್​ ರಾಮ್​ಚರಣ್​, ಅಲ್ಲು ಅರ್ಜುನ್​
author img

By ETV Bharat Karnataka Team

Published : Sep 18, 2023, 4:43 PM IST

ಇಂದು ಗೌರಿ ಗಣೇಶ ಹಬ್ಬ. ವಿಶೇಷವಾಗಿ ದಕ್ಷಿಣ ಭಾರತದ ಜನರು ಚೌತಿಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಎಲ್ಲರೂ ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲು ಸಿನಿ ತಾರೆಯರು ತಮ್ಮ ಕುಟುಂಬದ ಜೊತೆ ಸೇರಿಕೊಂಡಿದ್ದಾರೆ. ರಾಮ್​ಚರಣ್​, ಚಿರಂಜೀವಿ ಮತ್ತು ಅಲ್ಲು ಅರ್ಜುನ್​ ತಮ್ಮ ಮನೆಯಲ್ಲಿನ ಚೌತಿ ಸಂಭ್ರಮಾಚರಣೆಯ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಸೂಪರ್​ಸ್ಟಾರ್​ ರಾಮ್​ಚರಣ್ ಮತ್ತು ಪತ್ನಿ ಉಪಾಸನಾ ಕೊನಿಡೆಲಾ ತಮ್ಮ ಪುಟ್ಟ ಮಗಳು ಕ್ಲಿನ್ ಕಾರ ಹುಟ್ಟಿದ ನಂತರ ತಮ್ಮ ಮೊದಲ ಗಣೇಶ ಚತುರ್ಥಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ಹಬ್ಬದ ಆಚರಣೆಯ ಫೋಟೋಗಳನ್ನು ಹಂಚಿಕೊಳ್ಳಲು ಆರ್​ಆರ್​ಆರ್​ ನಟ ಇನ್​ಸ್ಟಾಗ್ರಾಮ್​ ವೇದಿಕೆಯನ್ನು ಬಳಸಿಕೊಂಡರು. ಫೋಟೋದಲ್ಲಿ ರಾಮ್​ ಪಕ್ಕದಲ್ಲಿ ಪತ್ನಿ ಉಪಾಸನಾ ಕುಳಿತಿದ್ದು, ಅವರ ಮಡಿಲಲ್ಲಿ ಕ್ಲಿನ್​ ಕಾರ ಇದ್ದಾರೆ. ಜೊತೆಗೆ ಮೆಗಾಸ್ಟಾರ್​ ಚಿರಂಜೀವಿ ಕೂಡ ಇದ್ದು, ಮೊಮ್ಮಗಳನ್ನು ಪ್ರೀತಿಯಿಂದ ನೋಡುತ್ತಿರುವುದನ್ನು ಕಾಣಬಹುದು.

Ganesh Chaturthi 2023: Ram Charan celebrates 'first festival with the little Klin Kaara,' Allu Arjun wishes fans
ಅಲ್ಲು ಅರ್ಜುನ್​ ಇನ್​ಸ್ಟಾಗ್ರಾಮ್​ ಸ್ಟೋರಿ

ಇದನ್ನೂ ಓದಿ: ಪುತ್ರಿ ಕ್ಲಿನ್ ಕಾರಾ ಜೊತೆಗೆ ಮೊದಲ ವರಲಕ್ಷ್ಮಿ ವೃತ ಆಚರಿಸಿದ ರಾಮ್ ಚರಣ್ ಪತ್ನಿ ಉಪಾಸನಾ...

ಸುಂದರ ಫ್ಯಾಮಿಲಿ ಫೋಟೋ ಹಂಚಿಕೊಂಡಿರುವ ರಾಮ್​ಚರಣ್​, "ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು. ಭಗವಂತ ವಿಘ್ನೇಶ್ವರನ ಆಶೀರ್ವಾದದಿಂದ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗಲಿ ಮತ್ತು ಎಲ್ಲರಿಗೂ ಅದೃಷ್ಟ ಬರಲಿ ಎಂದು ಪ್ರಾರ್ಥಿಸುತ್ತೇನೆ. ಈ ಬಾರಿಯ ವಿಶೇಷವೆಂದರೆ, ಕ್ಲಿನ್ ಕಾರ ಹುಟ್ಟಿದ ನಂತರ ತಮ್ಮ ಮೊದಲ ಗಣೇಶ ಚತುರ್ಥಿಯನ್ನು ಆಚರಿಸುತ್ತಿದ್ದೇವೆ. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು" ಎಂದು ತಮ್ಮ ಅಭಿಮಾನಿಗಳಿಗೆ ಚೌತಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಫೋಟೋದಲ್ಲಿ ಉಪಾಸನಾ ಕೊನಿಡೆಲಾ ಹಳದಿ ಬಣ್ಣದ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸೋಫಾದ ಮೇಲೆ ಕುಳಿತುಕೊಂಡಿದ್ದು, ತೊಡೆಯ ಮೇಲೆ ಕ್ಲಿನ್​ ಕಾರಳನ್ನು ಮಲಗಿಸಿಕೊಂಡಿದ್ದಾರೆ. ರಾಮ್​ಚರಣ್​ ಸಾಂಪ್ರದಾಯಿಕ ಬ್ಲ್ಯಾಕ್​ ಡ್ರೆಸ್​ನಲ್ಲಿ ಸ್ಟೈಲಿಶ್​ ಆಗಿ ಕಾಣುತ್ತಿದ್ದಾರೆ. ಮೆಗಾಸ್ಟಾರ್​ ಚಿರಂಜೀವಿ ವೈಟ್​ ಪಜಾಮದಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿಯನ್ನು ಸುತ್ತುವರಿದಿರುವ ಈ ಪೋಟೋಗಳು ಸೋಷಿಯಲ್​ ಮೀಡಿಯಾವನ್ನೂ ಸುತ್ತುವರಿದಿದೆ.

ಶುಭಾಶಯ ಕೋರಿದ ಅಲ್ಲು ಅರ್ಜುನ್​: ರಾಮ್​ಚರಣ್​ ಮಾತ್ರವಲ್ಲದೇ, ಟಾಲಿವುಡ್​ ಸ್ಟೈಲಿಶ್​ ಹೀರೋ ಅಲ್ಲು ಅರ್ಜುನ್​ ಕೂಡ ತಮ್ಮ ಮನೆಯ ಗಣೇಶ ಚತುರ್ಥಿಯ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಸರ್ವಶಕ್ತನ ಪೋಟೋವನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಅಭಿಮಾನಿಗಳಿಗೆ ಚೌತಿಯ ಶುಭಾಶಯಗಳನ್ನು ಕೋರಿದ್ದಾರೆ.

ಇದನ್ನೂ ಓದಿ: ಬಹುನಿರೀಕ್ಷಿತ 'ಪುಷ್ಪ 2' ರಿಲೀಸ್​ಗೆ ಮುಹೂರ್ತ ಫಿಕ್ಸ್​; ಚಿತ್ರತಂಡದಿಂದ ಅಧಿಕೃತ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.