ETV Bharat / entertainment

ವಾಮಾಚಾರದ ಸುತ್ತ 'ಗದಾಯುದ್ಧ' ಮಾಡಲು ರೆಡಿಯಾದ ಯುವ ನಟ ಸುಮಿತ್

ಕನ್ನಡ, ಹಿಂದಿ ಸೇರಿದಂತೆ ಗದಾಯುದ್ಧ ಚಿತ್ರ ಐದು ಭಾಷೆಗಳಲ್ಲಿ ಜೂನ್ 9 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

Gadayuddha movie release on 9th June
Gadayuddha movie release on 9th June
author img

By

Published : May 24, 2023, 11:04 PM IST

Updated : May 25, 2023, 9:15 AM IST

ಸ್ಯಾಂಡಲ್​ವುಡ್​ನಲ್ಲಿ ಬ್ಲ್ಯಾಕ್ ಮ್ಯಾಜಿಕ್ ಕಥೆಯನ್ನೊಳಗೊಂಡಿರುವ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದು ಹೋಗಿವೆ. ಇದೀಗ 'ಗದಾಯುದ್ಧ' ಅಂತಾ ಟೈಟಲ್​ನೊಂದಿಗೆ ವಾಮಾಚಾರ ಕಥೆ ಮೂಲಕ ಯುವನಟ ಸುಮಿತ್ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿದ್ದಾರೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿರುವ 'ಗದಾಯುದ್ಧ' ಚಿತ್ರದ ಟ್ರೈಲರ್ ಕೂಡ ಅನಾವರಣಗೊಂಡಿದೆ. ಮಾಟ ಮಂತ್ರದ ಸುತ್ತ ಸಾಗುವ ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಪ್ರತಿಭೆ ಸುಮಿತ್ ಜೊತೆ ಧನ್ಯ ಪಾಟೀಲ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶ್ರೀವತ್ಸ ರಾವ್ ನಿರ್ದೇಶನವಿದೆ.

ನಾಯಕ ಸುಮಿತ್ ಮಾತನಾಡಿ, ನಾವು ನಮ್ಮ ಕೆಲಸ ಮಾಡಿದ್ದೇವೆ. ಈ ಕೆಲಸದ ಬಗ್ಗೆ ನಮಗೆ ತೃಪ್ತಿ ಇದೆ. ನಾನು ಎಂದೂ ನಾಯಕನಾಗಬೇಕು ಎಂದು ಬಯಸಿರಲಿಲ್ಲ. ಇದೀಗ ಎಲ್ಲವೂ ನಿಮ್ಮ ಮುಂದಿದೆ ಎಂದು ಚಿತ್ರದ ಬಗ್ಗೆ ಅನುಭವ ಹಂಚಿಕೊಂಡರು. ಬಳಿಕ ನಾಯಕಿ ಧನ್ಯ ಪಾಟೀಲ್ ಮಾತನಾಡಿ, ಈ ಸಬ್ಜೆಕ್ಟ್ ನನಗೆ ತುಂಬಾ ಇಷ್ಟವಾಯಿತು. ಮಾಟಗಾರ ಡ್ಯಾನಿಯಲ್ ಕುಟ್ಟಪ್ಪ ಅವರ ಮಗಳು ಪ್ರತ್ಯಕ್ಷ ಪಾತ್ರವನ್ನು ಮಾಡಿದ್ದೇನೆ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು.

Gadayuddha movie release on 9th June
ಗದಾಯುದ್ಧ ಚಿತ್ರ

ನಿರ್ದೇಶಕ ಶ್ರೀವತ್ಸ ರಾವ್ ಮಾತನಾಡಿ, ಚಿತ್ರದ ಕಥೆಗಾಗಿ ಎರಡು ವರ್ಷ ಸಿದ್ದತೆ‌ ಮಾಡಿಕೊಂಡು ಶೂಟಿಂಗ್ ನಡೆಸಿದ್ದೇವೆ. ಚಿತ್ರದ ಪ್ರತಿ ಪಾತ್ರವೂ ಗಮನ ಸೆಳೆಯುವಂತಿದೆ. ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ವಾಮಾಚಾರ ನಡೆಯುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮನರಂಜನೆಯ ಜೊತೆಗೆ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ. ವೈಜ್ಞಾನಿಕವಾಗಿ ಚಿತ್ರದ ಕಥೆ ಮಾಡಿಕೊಂಡು ಕಮರ್ಷಿಯಲ್ ಆಗಿ ಹೇಳಲಾಗಿದೆ ಎಂದರು.

ನಟ ಸುಮಿತ್​ ತಂದೆ ಹಾಗೂ ಚಿತ್ರದ ನಿರ್ಮಾಪಕರೂ ಆದ ನಿತಿನ್ ಶಿರಗೂರ್​ ಕರ್ ಮಾತನಾಡಿ, ನಾಲ್ಕ ವರ್ಷದ ಹಿಂದೆ ನಿರ್ದೇಶಕರು ಹೇಳಿದ ಈ ಕಥೆ ನನಗೆ ಇಷ್ಡವಾಯಿತು. ಬಾನಾಮತಿ ಅಥವಾ ಬ್ಲ್ಯಾಕ್ ಮ್ಯಾಜಿಕ್ ಮಹಾರಾಷ್ಟ್ರದಲ್ಲಿಯೂ ಇದೆ. ನಾನು ಅನೇಕ ಜನರನ್ನು ಭೇಟಿ ಮಾಡಿ ಈ ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ವಿಚಾರಿಸಿದ್ದೆ. ನನ್ನ ಮಗ ಸುಮಿತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಖುಷಿ ತರಿಸಿದೆ ಎಂದರು. ಈ ವೇಳೆ ನಟಿ ಸ್ಪರ್ಶ ರೇಖಾ ಕೂಡ ಹಾಜರಿದ್ದರು. ಚಿತ್ರದಲ್ಲಿ ನಾನು ಒಬ್ಬ ನಟಿಯಾಗಿಯೇ ಕಾಣಿಸಿಕೊಂಡಿದ್ದೇನೆ.‌ ಮಾಟ ಮಂತ್ರಕ್ಕೆ ಒಳಗಾಗುವ ಸ್ಪರ್ಶ ರೇಖಾ ಆಗಿಯೇ ಕಾಣಿಸಿಕೊಂಡಿದ್ದೇನೆ ಎಂದರು. ಸಂಗೀತ ನಿರ್ದೇಶಕ ವೈಸ್ ಕಿಂಗ್ ಅವರು ಹಿನ್ನೆಲೆ ಮ್ಯೂಸಿಕ್ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡರು.

ಚಿತ್ರದಲ್ಲಿ ಸುಮಿತ್ ಹಾಗು ಧನ್ಯ ಪಾಟೀಲ್ ಅಲ್ಲದೇ ಶರತ್ ಲೋಹಿತಾಶ್ವ, ಅಯ್ಯಪ್ಪ ಶರ್ಮಾ, ಸಾಧುಕೋಕಿಲ, ಶರತ್ ಲೋಹಿತಾಶ್ವ ಸೇರಿದಂತೆ ಮತ್ತಿತರು ನಟಿಸಿದ್ದಾರೆ. ಕ್ಲೈಮಾಕ್ಸ್ ಸಾಹಸ ದೃಶ್ಯವನ್ನು 14 ದಿನಗಳವರೆಗೆ ಚಿತ್ರೀಕರಣ ಮಾಡಲಾಗಿದ್ದು, ನಿರ್ಮಾಪಕರು ಸಾಹಸ ದೃಶ್ಯಕ್ಕಾಗಿಯೇ ಒಂದು ಕೋಟಿ ಖರ್ಚು ಮಾಡಿದ್ದಾರೆ. ಚಿತ್ರದ ಕಥೆ ಮಾಟ ಮಂತ್ರದ ಕುರಿತಾಗಿದ್ದರೂ ಇಲ್ಲಿ ಪ್ರತಿ ಪಾತ್ರವೂ ಮುಖ್ಯವಾಗಿದೆ. ಕನ್ನಡ, ಹಿಂದಿ ಸೇರಿದಂತೆ ಐದು ಭಾಷೆಯಲ್ಲಿ ಜೂನ್ 9 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಇದನ್ನೂ ಓದಿ: ಟೈಗರ್ ನಾಗೇಶ್ವರ್ ರಾವ್: ರಾಜಮುಂಡ್ರಿಯ ಹ್ಯಾವ್ಲಾಕ್ ಸೇತುವೆ ಮೇಲೆ ರವಿತೇಜ ಸಿನಿಮಾದ ಫಸ್ಟ್ ಲುಕ್ ಲಾಂಚ್

Last Updated : May 25, 2023, 9:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.