ETV Bharat / entertainment

Gadar 2: ಹುಬ್ಬೇರಿಸುವಂತಿದೆ ಗದರ್​ 2 ಕಲೆಕ್ಷನ್ -​ ಸೂಪರ್​ಹಿಟ್​ ಸಿನಿಮಾ ವೀಕ್ಷಿಸಿದ ಕಾರ್ತಿಕ್​ ಆರ್ಯನ್​ - ಸನ್ನಿ ಡಿಯೋಲ್

Gadar 2: ಗದರ್ 2 ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ.

Gadar 2
ಗದರ್ 2
author img

By

Published : Aug 16, 2023, 12:42 PM IST

Updated : Aug 16, 2023, 1:04 PM IST

ಸನ್ನಿ ಡಿಯೋಲ್​ ಅಭಿನಯದ ಗದರ್ 2 ಸಿನಿಮಾ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಅನಿಲ್​ ಶರ್ಮಾ ನಿರ್ದೇಶನದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ್ದು, ಮೊದಲ ಮೂರು ದಿನಗಳಲ್ಲಿ 100 ಕೋಟಿ ರೂ. ಗೂ ಹೆಚ್ಚು ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಿದೆ. ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು ಭರ್ಜರಿ ಕಲೆಕ್ಷನ್​ ಮಾಡುವ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.

  • Comparison of #Pathaan (only Hindi) Vs #Gadar2 #BoxOffice Collections

    Day 1: 55 cr / 40.10 cr
    Day 2: 68 cr / 43.08 cr
    Day 3: 38 cr / 51.70 cr
    Day 4: 51.50 cr / 38.70 cr
    Day 5: 58.50 cr / 56.50 cr

    Total: 281 cr / 230.08 cr (18% behind)

    1st Week Total (7 days): 318.50 cr / –… https://t.co/n2O8BzbSAS

    — Box Office Worldwide (@BOWorldwide) August 15, 2023 " class="align-text-top noRightClick twitterSection" data=" ">

ಗದರ್ 2 ಕಲೆಕ್ಷನ್​: ಗದರ್ 2 ಸಿನಿಮಾದ ವ್ಯವಹಾರದಲ್ಲಿ ನಿರಂತರ ಬೆಳವಣಿಗೆ ಆಗುತ್ತಿದೆ. ವರದಿಗಳ ಪ್ರಕಾರ, ಸಿನಿಮಾ ತೆರೆಕಂಡ 5ನೇ ದಿನ ಆರಂಭಿಕ ಕಲೆಕ್ಷನ್​ಗಿಂತ ಶೇ. 42ರಷ್ಟು ಹೆಚ್ಚು ವ್ಯವಹಾರ ನಡೆಸಿದೆ. ಸ್ವಾತಂತ್ರ್ಯ ದಿನಾಚರಣೆ ಸಲುವಾಗಿ ರಜೆ ಇದ್ದ ಹಿನ್ನೆಲೆ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರ ದಂಡೇ ಹರಿದಿತ್ತು. ಸನ್ನಿ ಡಿಯೋಲ್​ ಮತ್ತು ಅಮಿಷಾ ಪಟೇಲ್​​ ಮುಖ್ಯಭೂಮಿಕೆಯ ಸಿನಿಮಾ ರಜೆಯ ಲಾಭ ಪಡೆದಿದೆ. ಚಿತ್ರ ತೆರೆಕಂಡ ಐದನೇ ದಿನ ಬಾಕ್ಸ್ ಆಫೀಸ್​ನಲ್ಲಿ ಸುಮಾರು 56.50 ಕೋಟಿ ರೂ. ಕಲೆಕ್ಷನ್​ ಮಾಡುವಲ್ಲಿ ಯಶ ಕಂಡಿದೆ. ಒಟ್ಟಾರೆ ಈವರೆಗೆ ಸಿನಿಮಾ 230 ಕೋಟಿ ರೂ. ಗಡಿ ದಾಟಿದೆ.

Gadar 2
ಸೂಪರ್​ಹಿಟ್​ ಸಿನಿಮಾ ವೀಕ್ಷಿಸಿದ ಕಾರ್ತಿಕ್​ ಆರ್ಯನ್​

ಗದರ್ 2 ಒಟ್ಟು ಸಂಪಾದನೆ: ಸಿನಿಮಾ ಕಳೆದ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ಕಳೆದ ಐದು ದಿನಗಳಲ್ಲಿ 231.50 ಕೋಟಿ ರೂ. ಹಣ ಸಂಪಾದಿಸಿದೆ. ಶಾರುಖ್​ ಖಾನ್​ ಅವರ ಬ್ಲಾಕ್​ ಬಸ್ಟರ್ ಸಿನಿಮಾ ಪಠಾಣ್​ ಬಳಿಕ ಗದರ್​ 2 ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಆಕರ್ಷಿಸಿದ್ದಲ್ಲದೇ, ಚಿತ್ರರಂಗದವರ ಮೆಚ್ಚುಗೆಯನ್ನೂ ಸಂಪಾದಿಸಿದೆ. ಭಾರತದಲ್ಲಿ ಸದ್ಯ ಗದರ್​ 2 ಕ್ರೇಜ್​ ಜೋರಾಗೇ ಇದೆ. ಬಾಲಿವುಡ್​ನ ಯಂಗ್​ ಅಂಡ್​​ ಎನರ್ಜಿಟಿಕ್​​ ಹೀರೋ ಕಾರ್ತಿಕ್​ ಆರ್ಯನ್​ ಸಹ ಸಿನಿಮಾ ವೀಕ್ಷಿಸಿ ಆನಂದಿಸಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ 25 ವರ್ಷಗಳ ಬಳಿಕ ಹಿಂದಿ ಚಿತ್ರ ಪ್ರದರ್ಶನ.. How Is Josh?

ಸಿನಿಮಾ ವೀಕ್ಷಿಸಿದ ಕಾರ್ತಿಕ್​ ಆರ್ಯನ್​: ಬಾಲಿವುಡ್​​ ನಟ ಕಾರ್ತಿಕ್​ ಆರ್ಯನ್​ ನಿನ್ನೆ ಸಂಜೆ ಗದರ್​ 2 ಸಿನಿಮಾ ವೀಕ್ಷಿಸಿದ್ದಾರೆ. ಮುಂಬೈನ ಗೈಟಿ ಗ್ಯಾಲಾಕ್ಸಿ ಥಿಯೇಟರ್​ ಹೊರಗೆ ನಟ ಕಾಣಿಸಿಕೊಂಡಿದ್ದರು. ನಟನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಸಿನಿಮಾ ವೀಕ್ಷಿಸುತ್ತಿರುವ ಫೋಟೋ ಶೇರ್ ಮಾಡಿದ್ದು, ಇದು ಗದರ್​ ಸಮಯ ಎಂದು ಬರೆದುಕೊಂಡಿದ್ದರು. ಇನ್ನೂ ಸ್ವಾತಂತ್ರ್ಯ ದಿನ ಹಿನ್ನೆಲೆ ತ್ರಿವರ್ಣ ಧ್ವಜ ಹಿಡಿದು ಸುಂದರ ವಿಡಿಯೋ ಶೇರ್ ಮಾಡಿದ್ದರು. ಜೊತೆಗೆ ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದರು.

ಇದನ್ನೂ ಓದಿ: Rachita Ram: ಸ್ವಚ್ಛತಾ ಕಾರ್ಮಿಕನಿಗೆ ಕಾರು ಡಿಕ್ಕಿ; ಮನೆಗೆ ಕರೆಸಿ ಕ್ಷಮೆ ಯಾಚಿಸಿದ ನಟಿ‌ ರಚಿತಾ ರಾಮ್

Last Updated : Aug 16, 2023, 1:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.