2020ರ ಸೂಪರ್ ಹಿಟ್ ಚಿತ್ರಗಳಾದ ದಿಯಾ ಹಾಗೂ ಲವ್ ಮಾಕ್ಟೇಲ್ ಚಿತ್ರಗಳ ಮೂಲಕ ಮನೆಮಾತಾಗಿರುವ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಅಭಿನಯದಲ್ಲಿ ಮೂಡಿಬರುತ್ತಿರುವ ಚಿತ್ರ 'ಫಾರ್ ರಿಜಿಸ್ಟ್ರೇಷನ್'. ಈ ಚಿತ್ರ ಟೈಟಲ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗುತ್ತಿದೆ.
ಮಿಲನಾ ನಾಗರಾಜ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಧಾರಾಣಿ, ಸುಂದರರಾಜ್, ಸಿಹಿಕಹಿ ಚಂದ್ರು, ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ, ತಬಲಾ ನಾಣಿ, ತ್ರಿವೇಣಿ ರಾವ್, ತುಳು ನಟ ಅರವಿಂದ್ ಬೋಳಾರ್ ಹೀಗೆ ಹಿರಿಯ ಕಲಾವಿದರ ಬಳಗವೇ ಈ ಚಿತ್ರದಲ್ಲಿದೆ.
ಮೇ 24 ರಂದು ನಿರ್ದೇಶಕ ನವೀನ್ ದ್ವಾರಕನಾಥ್ ಅವರ ಹುಟ್ಟುಹಬ್ಬ. ಆ ಸಂಭ್ರಮಕ್ಕಾಗಿ ಚಿತ್ರತಂಡ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಚಿತ್ರತಂಡದ ಈ ಪ್ರೀತಿಗೆ ಸಂತಸಪಟ್ಟಿರುವ ನಿರ್ದೇಶಕ ನವೀನ್ ದ್ವಾರಕನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಚಿತ್ರದ ಫಸ್ಟ್ ಲುಕ್ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
ನಿರ್ದೇಶಕ ನವೀನ್ ದ್ವಾರಕನಾಥ್ ಕಥೆ, ಚಿತ್ರಕಥೆಯನ್ನ ಬರೆದು ನಿರ್ದೇಶನ ಮಾಡಿದ್ದಾರೆ. ಆರ್. ಕೆ ಹರೀಶ್ ಸಂಗೀತ ನಿರ್ದೇಶನ, ಅಭಿಷೇಕ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿರುವ ಈ ಚಿತ್ರದ ಕಾರ್ಯಕಾರ ನಿರ್ಮಾಪಕರಾಗಿ ನಿರಂಜನ್ ರಾಧಾಕೃಷ್ಣ ಇದ್ದಾರೆ. ನಿಶ್ಚಲ್ ಫಿಲಂಸ್ ಮೂಲಕ ಎನ್. ನವೀನ್ ರಾವ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಓದಿ: ಬೇಸರದಲ್ಲಿದ್ದ ಬಾಲಿವುಡ್ಗೆ ಸಂತಸ ತಂದ 'ಭೂಲ್ ಭೂಲೈಯಾ 2': ಇಲ್ಲಿದೆ ಬಾಕ್ಸ್ ಆಫೀಸ್ ಕಲೆಕ್ಷನ್!