ಚೆನ್ನೈ: ಎದೆನೋವು ಕಾಣಿಸಿಕೊಂಡ ಕಾರಣ ಹಿರಿಯ ನಟ-ರಾಜಕಾರಣಿ ಟಿ.ರಾಜೇಂದರ್ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯ ನಂತರ ಹೊಟ್ಟೆಯಲ್ಲಿ ಆಂತರಿಕ ರಕ್ತಸ್ರಾವ ಆಗುತ್ತಿರುವುದು ತಿಳಿದು ಬಂದಿದೆ. ಹೀಗಾಗಿ, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಅವರ ಮಗ ಸಿಲಂಬರಸನ್ ಟಿ ಆರ್ ತಿಳಿಸಿದ್ದಾರೆ.
ಹೊಟ್ಟೆಯಲ್ಲಿನ ಆಂತರಿಕ ರಕ್ತಸ್ರಾವದಿಂದಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿರುವ ಹಿರಿಯ ನಟ-ರಾಜಕಾರಣಿ ಟಿ.ರಾಜೇಂದರ್ ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕೊಂಡೊಯ್ಯಲಾಗುವುದು ಎಂದು ಅವರ ನಟ-ಮಗ ಸಿಲಂಬರಸನ್ ಟಿಆರ್ ಮಂಗಳವಾರ ತಿಳಿಸಿದ್ದಾರೆ.
ತಂದೆಯ ಹೊಟ್ಟೆಯಲ್ಲಿ ಆಂತರಿಕ ರಕ್ತಸ್ರಾವ ಕಂಡುಬಂದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆಯ ಸಲಹೆ ನೀಡಿದ್ದಾರೆ. ಅವರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು, ನಾವು ಅವರನ್ನು ವೈದ್ಯಕೀಯ ಪ್ರಕ್ರಿಯೆಗಾಗಿ ವಿದೇಶಕ್ಕೆ ಕರೆದೊಯ್ಯುತ್ತಿದ್ದೇವೆ. ತಂದೆಯ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತಿರುತ್ತೇನೆ ಎಂದು ಮಗ ಸಿಲಂಬರಸನ್ ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ಅವರು ನಿಮ್ಮೆಲ್ಲರನ್ನೂ ಭೇಟಿಯಾಗುತ್ತಾರೆ. ನಿಮ್ಮೆಲ್ಲರ ಪ್ರಾರ್ಥನೆಗೆ ಧನ್ಯವಾದಗಳು ಎಂದು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಯಾವ ದೇಶಕ್ಕೆ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ನಟ ಟಿ ರಾಜೇಂದರ್ ತಮಿಳು ಚಲನಚಿತ್ರೋದ್ಯಮದಲ್ಲಿ ಸಂಗೀತಗಾರ, ಸಿನಿಮಾಟೋಗ್ರಾಫರ್ ಮತ್ತು ವಿತರಕರಾಗಿದ್ದಾರೆ. ಅವರು ತಮ್ಮ ವಿಶಿಷ್ಟವಾದ ಪಂಚ್ ಡೈಲಾಗ್‌ಗಳಿಂದ ಖ್ಯಾತಿಯನ್ನು ಗಳಿಸಿದರು. ಒರುತಲೈ ರಾಗಂ, ರೈಲ್ ಪಯನಂಗಳಿಲ್, ನೆಂಜಿಲ್ ಒರು ರಾಗಂ ಮತ್ತು ಮೈಥಿಲಿ ಎನ್ನೈ ಕಾತಲಿ ಅವರ ಪ್ರಮುಖ ಚಿತ್ರಗಳೆಂದು ಗುರುತಿಸಬಹುದು.
ಇದನ್ನೂ ಓದಿ: ಲವ್ಲಿ ಚಿತ್ರ ಹಂಚಿಕೊಂಡು ಕರಣ್ ಜೋಹರ್ ಬರ್ತ್ಡೇ ವಿಶ್ ಮಾಡಿದ ನಟಿ ಆಲಿಯಾ !