ETV Bharat / entertainment

ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಫಿಲ್ಮ್ ಚೇಂಬರ್ ಅಧ್ಯಕ್ಷ

author img

By

Published : Sep 7, 2022, 11:00 PM IST

ಹಿರಿಯ ನಟಿ ಲೀಲಾವತಿಯವರು ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಇವರ ಆರೋಗ್ಯವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಹಾಗೂ ಅವರ ಪದಾಧಿಕಾರಿಗಳು ಬಂದು ವಿಚಾರಿಸಿದ್ದಾರೆ.

film-chamber-members-inquired-about-leelavatis-health
ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ‌ ಹರೀಶ್

ಹಿರಿಯ ನಟಿ ಲೀಲಾವತಿ ಕನ್ನಡ ಚಿತ್ರರಂಗದಿಂದ ದೂರ ಉಳಿದು ಬಹಳ ವರ್ಷಗಳೇ ಸಂದಿವೆ. ಸದ್ಯ ಲೀಲಾವತಿಯವರು ನೆಲಮಂಗಲ ಸಮೀಪದ ಸೋಲದೇವನಹಳ್ಳಿಯಲ್ಲಿ, ತೋಟ ಮಾಡಿಕೊಂಡು ಮಗ ವಿನೋದ್ ರಾಜ್ ಜೊತೆ ಜೀವನ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಲೀಲಾವತಿಯವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಹಾಗೂ ಅವರ ಪದಾಧಿಕಾರಿಗಳು ಬಂದು ವಿಚಾರಿಸಿದ್ದಾರೆ.

ಅದಕ್ಕೆ ಕಾರಣ ಲೀಲಾವತಿ ಹಾಗೂ ವಿನೋದ್ ರಾಜ್ ನೆಲಮಂಗಲದ ಬಳಿ ಸೋಲದೇವನಹಳ್ಳಿಯಲ್ಲಿ ವಾಸವಿದ್ದು, ಗ್ರಾಮದ ಜನರಿಗಾಗಿ ಸ್ವಂತ ಹಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಿದ್ದಾರೆ. ಚೆನ್ನೈ ಬಳಿ ಖರೀದಿಸಿದ್ದ ಜಮೀನನ್ನು ಲೀಲಾವತಿ ಅವರು 50 ಲಕ್ಷ ರೂಪಾಯಿಗೆ ಮಾರಾಟ ಮಾಡಿ ಬಂದ‌ ಹಣದಲ್ಲಿ ಸೋಮದೇವನಹಳ್ಳಿಯಲ್ಲಿ‌ ಪ್ರಾಥಮಿಕ ಆರೋಗ್ಯ ಕೇಂದ್ರವನ್ನ ನಿರ್ಮಾಣ ಮಾಡಿದ್ದಾರೆ. ಈ ಆರೋಗ್ಯ ಕೇಂದ್ರವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಉದ್ಘಾಟನೆ ಮಾಡಬೇಕಿತ್ತು. ಸಚಿವ ಉಮೇಶ ಕತ್ತಿಯವರ ನಿಧನದಿಂದ‌ ಈ ಆಸ್ಪತ್ರೆಯ ಉದ್ಘಾಟನೆ ‌ಕಾರ್ಯಕ್ರಮ‌ವನ್ನು ಮುಂದೂಡಲಾಗಿದೆ. ಈ ಸಂದರ್ಭದಲ್ಲಿ ಲೀಲಾವತಿ ಮಗ ವಿನೋದ್ ರಾಜ್ ತಾಯಿ ಆರೋಗ್ಯದ ಬಗ್ಗೆ ಸಾಕಷ್ಟು ವಿಚಾರಗಳನ್ನು ಭಾ.ಮಾ ಹರೀಶ್ ಜೊತೆ ಮಾತನಾಡಿದ್ದಾರೆ.

ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ‌ ಹರೀಶ್ ಮತ್ತು ಸದಸ್ಯರು

ಇನ್ನು ನಟ ವಿನೋದ್ ರಾಜ್‌ಕುಮಾರ್ ಹಾಗೂ ಲೀಲಾವತಿಯವರಿಗೆ ಸಮಾಜ ಸೇವೆ ಹೊಸದೇನೂ ಅಲ್ಲ. ಕೋವಿಡ್ ಸಮಯದಲ್ಲಿ ಸೋಲದೇವನಹಳ್ಳಿಯ ಜನರಿಗೆ ಸಹಾಯ ಮಾಡಿದ್ದರು. ಜೊತೆಗೆ ಸಿನಿಮಾ ಕಾರ್ಮಿಕರಿಗೆ ದಿನಸಿ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದರು.

ಇದನ್ನೂ ಓದಿ : ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.