ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಫೈಟರ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ 'ಭಾರತದ ಮೊದಲ ವೈಮಾನಿಕ ಆ್ಯಕ್ಷನ್' ಚಲನ ಚಿತ್ರವಾಗಿದೆ.
ಇತ್ತೀಚಿನ ತಂತ್ರಗಳನ್ನು ಬಳಸಿ ಪ್ರಪಂಚದಾದ್ಯ ಹಲವು ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರವು ಜನವರಿ 25, 2024 ರಂದು ತೆರೆಗೆ ಅಪ್ಪಳಿಸಲಿದೆ. ವಯಾಕಾಮ್ 18 ಸ್ಟುಡಿಯೋಸ್, ಮಮತಾ ಆನಂದ್, ರಾಮನ್ ಚಿಬ್ ಮತ್ತು ಅಂಕು ಪಾಂಡೆ ಬಂಡವಾಳ ಹೂಡಿದ್ದಾರೆ.
ಬ್ಯಾಂಗ್ ಬ್ಯಾಂಗ್ (2014) ಮತ್ತು ವಾರ್ (2019) ಚಿತ್ರಗಳ ನಂತರ ಸಿದ್ಧಾರ್ಥ್ ಆನಂದ್ ಮತ್ತು ಹೃತಿಕ್ ರೋಷನ್ ನಡುವಿನ ಮೂರನೇ ಚಿತ್ರ ಇದಾಗಿದೆ. ಹೃತಿಕ್ ಮೊದಲ ಬಾರಿಗೆ ದೀಪಿಕಾ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇವರ ಹೊರತಾಗಿ ಫೈಟರ್‌ನಲ್ಲಿ ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಹೃತಿಕ್ - ದೀಪಿಕಾ ಅಭಿನಯದ ಫೈಟರ್ ಚಿತ್ರ ಬಿಡುಗಡೆಯ ದಿನಾಂಕ ಫಿಕ್ಸ್