ETV Bharat / entertainment

Fathers Day: ಇಂದು ಅಪ್ಪಂದಿರ ದಿನ: ನಿಮ್ಮ ಮೊದಲ ಹೀರೋಗೆ ಕನ್ನಡದ ಯಾವ ಹಾಡನ್ನು ಅರ್ಪಿಸುತ್ತೀರಿ?

ಕನ್ನಡದಲ್ಲಿ ಅಪ್ಪಂದಿರ ಪ್ರೀತಿಯನ್ನು ವರ್ಣಿಸುವ ಕೆಲವೊಂದು ಹಾಡುಗಳಿವೆ. ನಿಮ್ಮ ಜೀವನದ ಮೊದಲ ಹೀರೋಗೆ ನೀವು ಯಾವ ಹಾಡನ್ನು ಅರ್ಪಿಸುವ ಸಂದರ್ಭವಿದು.

father
ಇಂದು ಅಪ್ಪಂದಿರ ದಿನ
author img

By

Published : Jun 18, 2023, 6:42 PM IST

ಹೆಜ್ಜೆ ಹೆಜ್ಜೆಗೂ ಜೊತೆಗಿದ್ದು, ಜೀವನದ ಪಾಠ ಕಲಿಸಿ, ಬದುಕು ರೂಪಿಸಿ ಮುನ್ನಡೆಸಿದ ಕಣ್ಣಿಗೆ ಕಾಣುವ ದೇವರೇ 'ಅಪ್ಪ'. ನಮಗೆ ಜನ್ಮ ನೀಡಿ, ಜೀವನ ರೂಪಿಸಿದ ತಂದೆಗೆ ಏನು ಕೊಟ್ರೂ, ಎಷ್ಟು ಥ್ಯಾಂಕ್ಸ್​ ಹೇಳಿದರೂ ಕಡಿಮೆಯೇ. ಇಂದು ವಿಶ್ವದಾದ್ಯಂತ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಸದಾ ಮಕ್ಕಳಿಗಾಗಿ ಮಿಡಿಯುವ ಜೀವಕ್ಕೆ ಈ ದಿನವನ್ನು ಅರ್ಪಿಸಲಾಗುತ್ತದೆ. ಹಲವಾರು ಕವಿಗಳು, ಸಾಹಿತಿಗಳು ಪದಗಳನ್ನು ಪೋಣಿಸಿ ಹಾಡಿನ ರೂಪದಲ್ಲಿ ಅಪ್ಪನ ಪ್ರೀತಿಯನ್ನು ವರ್ಣಿಸಿದ್ದಾರೆ.

ಕನ್ನಡದಲ್ಲಿ ಅಂತಹ ಅನೇಕ ಹಾಡುಗಳಿವೆ. ಅವುಗಳೆಲ್ಲವೂ ಎಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದುಬಿಡುತ್ತದೆ. ಹಾಡು ಹಳೆಯದಾದರೂ, ಸಾಹಿತ್ಯ ಎಂದಿಗೂ ಹಳೆಯದು ಎಂದೇ ಅನಿಸುವುದಿಲ್ಲ. ಅದೆಷ್ಟೇ ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳುತ್ತಲೇ ಇರಬೇಕಿನಿಸುತ್ತದೆ. ಅದಕ್ಕೆ ಕಾರಣ ಬಹುಶಃ ನಮ್ಮ ತಂದೆಯ ಮೇಲೆ ನಮಗಿರುವ ಪ್ರೀತಿಯೇ ಆಗಿರಬಹುದು. ಅಂತಹ ಕೆಲವು ಹಾಡುಗಳು ಇಂತಿವೆ.

'ರೆಕ್ಕೆಯ ಕುದುರೆ ಏರಿ..' ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಮತ್ತು ಬೇಬಿ ಅನುನ್ಯಾ ಅಭಿನಯದ 'ಕವಚ' ಸಿನಿಮಾದ 'ರೆಕ್ಕೆಯ ಕುದುರೆ ಏರಿ, ಬೆಳ್ಳಿ ಬೆಳ್ಳಿ ಮೋಡವ ದಾಟಿ, ಬರುವ ನನ್ನ ಅಪ್ಪಯ್ಯಾ' ಹಾಡು ಸದ್ಯ ಟ್ರೆಂಡಿಂಗ್​ನಲ್ಲಿದೆ. ಅಪ್ಪ ಮತ್ತು ಮಗಳ ಬಾಂಧವ್ಯವನ್ನು ತುಂಬ ಸುಂದರವಾಗಿ ಕಟ್ಟಿಕೊಡಲಾಗಿದೆ. ಕಣ್ಣು ಕಾಣದ ಅಪ್ಪನಿಗೆ ಮಗಳೇ ಕಣ್ಣಾಗಿ ಆಸರೆಯಾಗುವುದು ನಿಜಕ್ಕೂ ತುಂಬಾ ಅರ್ಥಪೂರ್ಣವಾಗಿದೆ. ಈ ಹಾಡಿಗೆ ಎಸ್​.ಪಿ ಬಾಲಸುಬ್ರಹ್ಮಣ್ಯ ಮತ್ತು ಶ್ರೇಯಾ ಜಯದೀಪ್​ ಧ್ವನಿಯಾಗಿದ್ದಾರೆ.

  • " class="align-text-top noRightClick twitterSection" data="">

'ನಾನು ನನ್ನ ಕನಸು...' 'ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಬಾಯಿ' ಎಂದು ಶುರುವಾಗುವ ನಾನು ನನ್ನ ಕನಸು ಸಿನಿಮಾದ ಹಾಡು ಅತ್ಯಂತ ಅದ್ಭುತವಾಗಿದೆ. ಬಹುಭಾಷಾ ನಟ ಪ್ರಕಾಶ್​ ರಾಜ್​ ಮತ್ತು ಅಮೂಲ್ಯ ಈ ಸಿನಿಮಾದಲ್ಲಿ ಅಪ್ಪ, ಮಗಳ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಡೀ ಸಿನಿಮಾವೇ ತಂದೆ ಮತ್ತು ಮಗಳ ಬಾಂಧವ್ಯದ ಸುತ್ತವೇ ಸುತ್ತುತ್ತದೆ.

'ಪರಪಂಚ ನೀನೆ ನನ್ನ..' ಕೋಟಿಗೊಬ್ಬ 2 ಸಿನಿಮಾದ 'ಪರಪಂಚ ನೀನೆ ನನ್ನ ಪರಪಂಚ ನೀನೆ' ಹಾಡು ಎಂತಹವರನ್ನು ಭಾವುಕರನ್ನಾಗಿಸುತ್ತದೆ. ಪ್ರಕಾಶ್​ ರಾಜ್​ ಮತ್ತು ಸುದೀಪ್​ ಅಪ್ಪ ಮಗನಾಗಿ ನಟಿಸಿದ್ದಾರೆ. ಸಣ್ಣ ಪ್ರಾಯದಲ್ಲೇ ಅಪ್ಪನನ್ನು ಕಳೆದುಕೊಂಡ ಸುದೀಪ್​ ನೋವು ಅನುಭವಿಸುವುದನ್ನು ಹಾಡಿನ ಮೂಲಕವೇ ತೋರಿಸಲಾಗಿದೆ. ಈ ಹಾಡಿಗೆ ಶಂಕರ್​ ಮಹದೇವನ್​ ಧ್ವನಿಯಾಗಿದ್ದಾರೆ.

'ಚಿನ್ನುಮರಿ, ಮುದ್ದುಮರಿ..' ನಟ ಶಿವ ರಾಜ್​ಕುಮಾರ್​ ಅಭಿನಯದ 125ನೇ ಚಿತ್ರ 'ವೇದ'. ಈ ಸಿನಿಮಾದ ಚಿನ್ನುಮರಿ, ಮುದ್ದುಮರಿ ಹಾಡು ಇತ್ತೀಚೆಗೆ ತುಂಬಾ ಫೇಮಸ್​ ಆಗಿದೆ. ಸಿನಿಮಾ ಕೂಡ ಅಷ್ಟೇ. ಅಪ್ಪ ಮತ್ತು ಮಗಳ ಪ್ರೀತಿಯನ್ನು ತೋರಿಸಿಕೊಟ್ಟಿದೆ. ಅಮ್ಮನ ಸಾವಿನ ಪ್ರತೀಕಾರವಾಗಿ ಹೋರಾಡುವ ಮಗಳಿಗೆ ಅಪ್ಪನೇ ಆಸರೆಯಾಗಿ ನಿಲ್ಲುವ ಒಂದು ಅದ್ಭುತ ಕಥೆ ಇದಾಗಿದೆ.

'ಅಪ್ಪಾ..ಐ ಲವ್​ ಯು ಪಾ..': ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯವನ್ನು ಹಾಡಿನ ಮೂಲಕ ತೋರಿಸಿಕೊಟ್ಟದ್ದು 'ಚೌಕ' ಚಿತ್ರದಲ್ಲಿನ ಅಪ್ಪಾ..ಐ ಲವ್​ ಯು ಪಾ ಹಾಡು. ಅನುರಾಧಾ ಭಟ್​ ಧ್ವನಿಯಲ್ಲಿ ಮೂಡಿ ಬಂದ ಈ ಹಾಡು ಕನ್ನಡಿಗರ ಮೋಸ್ಟ್​ ಫೇವರೆಟ್​ ಅಂತಲೇ ಹೇಳಬಹುದು. ಒಂದು ಹಾಡಿನಲ್ಲೇ ಅಪ್ಪನ ಬಗ್ಗೆ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: World father's day: 'ನೀನು ಮುಗಿಲೂ, ಹೆಗಲೂ..' ಮಕ್ಕಳನ್ನು ಹೆಗಲ ಮೇಲೆ ಕುಳ್ಳಿರಿಸಿ ಪ್ರಪಂಚ ತೋರಿಸುವ ಅಪ್ಪ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.