ETV Bharat / entertainment

ತಂದೆಯಾದರೂ ರಣಬೀರ್ ಕಪೂರ್ ಆ ಒಂದು ವಿಷಯದಲ್ಲಿ ನಿರಂತರವಾಗಿ ನರ್ವಸ್: ಆಲಿಯಾ ಭಟ್ - ETV Bharat kannada News

ರಣಬೀರ್​ ಕಪೂರ್​ಗೆ ಬರ್ಫಿ ಸ್ಟಾರ್ ಹ್ಯಾಂಡ್ಸ್ ಆನ್ ಎಂದು ಆಲಿಯಾ ಭಟ್​ ಹೇಳಿದ್ದಾರೆ.

Alia Bhatt
ಆಲಿಯಾ ಭಟ್
author img

By

Published : Apr 26, 2023, 7:29 PM IST

ಬಾಲಿವುಡ್​ ನಟಿ ಆಲಿಯಾ ಭಟ್ ಇತ್ತೀಚೆಗೆ ಮ್ಯಾಗಜೀನ್‌ಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪೋಷಕರ ಕರ್ತವ್ಯಗಳು ಮತ್ತು ತಾಯ್ತನದ ಬಗ್ಗೆ ಹಾಗೂ ತಂದೆಯಾದ ಮೇಲೆ ರಣಬೀರ್​ ಕಪೂರ್​ ಎದುರಿಸುತ್ತಿರುವ ಆತಂಕಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ವೇಳೆ ಮಾತನಾಡಿರುವ ಆಲಿಯಾ ಭಟ್, ನನಗೆ ತಿಳಿದಿರುವಂತೆ ರಣಬೀರ್ ಕಪೂರ್​ ಯಾವಾಗಲೂ ತುಂಬಾ ಸೂಕ್ಷ್ಮ, ನಿಷ್ಠಾವಂತ. ಆದರೆ ನಮ್ಮ ಮಗಳು ರಾಹಾ ಹುಟ್ಟಿದಾಗಿನಿಂದ ರಣಬೀರ್ ಹೆಚ್ಚು ಸಂವೇದನಾಶೀಲರಾಗಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಮುಂಬರುವ ಅನಿಮಲ್ ಚಿತ್ರೀಕರಣದಲ್ಲಿ ನಿರತರಾಗಿರುವ ರಣಬೀರ್ ಕಪೂರ್​, ತಂದೆಯಾಗಿ ತಮ್ಮದೇ ಆದ ಆತಂಕಗಳನ್ನು ಎದುರಿಸುತ್ತಿದ್ದಾರೆ. ರಣಬೀರ್‌ಗೆ ಏನು ತೊಂದರೆಯಾಗಿದೆ ಎಂಬುದನ್ನು ಬಹಿರಂಗಪಡಿಸಿದ ಆಲಿಯಾ, ಸಿನಿಮಾ ಚಿತ್ರೀಕರಣದಿಂದಾಗಿ ತಮ್ಮ ಐದು ತಿಂಗಳ ಮಗಳಿಂದ ದೂರವಿರುವ ಸಂದರ್ಭದಲ್ಲಿ ಎದುರಾಗಲಿದ್ದು, ಈ ವೇಳೆ ರಾಹಾ ನನ್ನನ್ನು ಮರೆತು ಬಿಡಬಹುದು ಎಂದು ನಿರಂತರವಾಗಿ ಹೆದರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ : ಮಕ್ಕಳೊಂದಿಗೆ ಮಗುವಾದ ಆಲಿಯಾ.. ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ

ಅವರಿಬ್ಬರನ್ನು ಒಟ್ಟಿಗೆ ನೋಡುವುದು ಮುದ್ದಾಗಿದ್ದು, ರಾಹಾಳನ್ನು ರಣಬೀರ್ ಒಯ್ಯುವಾಗ, ದೈತ್ಯನೊಬ್ಬ ಪುಟ್ಟ ನಾಯಿಮರಿಯನ್ನು ಎತ್ತಿಕೊಂಡಂತೆ ಕಾಣಿಸುತ್ತದೆ. ಮನೆಯಲ್ಲಿ ನನಗೆ ಕೆಲವೊಮ್ಮೆ ರಾಹಾಳನ್ನು ಒಂದು ಸೆಕೆಂಡ್ ಕೂಡ ಹಿಡಿದಿಡಲು ಕಷ್ಟವಾಗುತ್ತದೆ. ಆದರೇ ರಣಬೀರ್​ ಇದುನ್ನೆಲ್ಲ ನಿಭಾಯಿಸುತ್ತಿದ್ದು, ಬರ್ಫಿ ಸ್ಟಾರ್ ಹ್ಯಾಂಡ್ಸ್-ಆನ್ ತಂದೆ ಎಂದು ರಣಬೀರ್ ಬಗ್ಗೆ ಆಲಿಯಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

​ರಾಹಾ ಜೊತೆ ಸಮಯ ಕಳೆಯಲು ಬಹಳ ರಣಬೀರ್ ವಿಶಿಷ್ಟವಾದ ಮಾರ್ಗಗಳನ್ನು ಹುಡುಕಿಕೊಂಡಿದ್ದು, ತಂಗಾಳಿ ಬೀಸಿ ಬರುವ ಕಿಟಕಿಯ ಮುಂದೆ ಅವಳೊಂದಿಗೆ ಕುಳಿತುಕೊಂಡು ಎದುರುಗಡೆ ಇರುವ ದೊಡ್ಡ ಹಸಿರು ಗಿಡವನ್ನು ನೋಡುತ್ತ ಅವಳ ಜೊತೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಇದನ್ನು ರಣಬೀರ್​ ಇಷ್ಟಪಡುವುದರೊಂದಿಗೆ, ಈ ಭೂಲೋಕದ ಮೋಹಕ ಎಂದು ರಾಹಾಳನ್ನು ಭಾವಿಸಿದ್ದಾನೆ ಎಂದು ತಂದೆ ಮಗಳ ಬಾಂಧವ್ಯವನ್ನು ಆಲಿಯಾ ತಿಳಿಸಿದ್ದಾರೆ.

ಇದನ್ನೂ ಓದಿ : ಅಬ್ಬಬ್ಬಾ.. ಆಲಿಯಾ ಭಟ್​ ತೊಟ್ಟ ಬಟ್ಟೆ, ಬ್ಯಾಗ್​ ಬೆಲೆ 4 ಲಕ್ಷ ರೂ., ಏರ್ಪೋರ್ಟ್​​ಗೆ ಬರಲು ಇಷ್ಟೊಂದು ಖರ್ಚು!

5 ವರ್ಷಗಳ ಡೇಟಿಂಗ್​ ನಂತರ ಕಳೆದ ವರ್ಷ (2022) ಏಪ್ರಿಲ್​ 14 ರಂದು ಬಾಲಿವುಡ್‌ನ ಜೋಡಿ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ದಾಂಪತ್ಯಕ್ಕೆ ಕಾಲಿರಿಸಿದ್ದರು. ಮುಂಬೈನ ಬಾಂದ್ರಾದಲ್ಲಿರುವ ವರನ ಮನೆಯಲ್ಲಿ ಅದ್ಧೂರಿಯಾಗಿ ವಿವಾಹ ಸಮಾರಂಭ ನಡೆದಿತ್ತು. ಬಳಿಕ ಇದೇ ತಿಂಗಳಿನಲ್ಲಿ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಸರಳವಾಗಿ ಈ ಜೋಡಿ ಆಚರಿಸಿಕೊಂಡಿತ್ತು. ಮದುವೆಯಾದ ಕೆಲವು ತಿಂಗಳ ನಂತರ ಈ ದಂಪತಿ ಹೆಣ್ಣು ಮಗು ರಾಹಾಳನ್ನು ಸ್ವಾಗತಿಸಿದ್ದರು. ಈ ಜೋಡಿ 2018 ರಲ್ಲಿ ಬ್ರಹ್ಮಾಸ್ತ್ರ ಸೆಟ್​ನಲ್ಲಿ ಡೇಟಿಂಗ್​ ಮಾಡಲು ಪ್ರಾರಂಭಿಸಿದ್ದರು.

ಇದನ್ನೂ ಓದಿ : ಹೆಂಡತಿಯ ಚಪ್ಪಲಿ ಎತ್ತಿಟ್ಟ ರಣಬೀರ್ ಕಪೂರ್​​: ನೆಟ್ಟಿಗರಿಂದ ಮೆಚ್ಚುಗೆ ಪಡೆದ ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.