ETV Bharat / entertainment

ಮೊದಲ ದಿನವೇ ಏಳು ಕೋಟಿ .. ಬಾಕ್ಸ್​ ಆಫೀಸ್​ ನಲ್ಲಿ ಸದ್ದು ಮಾಡಿದ  'ಏಕ್​ ವಿಲನ್​ ರಿಟರ್ನ್ಸ್​' - ETV Bharat Kannada

ಮೋಹಿತ್​ ಸೂರಿ ನಿರ್ದೇಶನದ ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾ ಏಕ್​ ವಿಲನ್​ ರಿಟರ್ನ್ಸ್​ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್​​ ಆಫೀಸ್​ನಲ್ಲಿ 7.05 ಕೋಟಿಯಷ್ಟು ಗಳಿಸುವ ಮೂಲಕ ಸದ್ದು ಮಾಡುತ್ತಿದೆ.

Ek Villain Returns
ಏಕ್​ ವಿಲನ್​ ರಿಟರ್ನ್ಸ್
author img

By

Published : Jul 30, 2022, 12:36 PM IST

Updated : Jul 30, 2022, 12:42 PM IST

ಮುಂಬೈ: ಜಾನ್ ಅಬ್ರಹಾಂ ಮತ್ತು ಅರ್ಜುನ್ ಕಪೂರ್ ಅಭಿನಯದ "ಏಕ್ ವಿಲನ್ ರಿಟರ್ನ್ಸ್" ಭಾರತದಲ್ಲಿ ಬಿಡುಗಡೆಯಾದ ಮೊದಲ ದಿನವೇ 7.05 ಕೋಟಿ ರೂಪಾಯಿ ಲೂಟಿ ಹೊಡೆದಿದೆ ಎಂದು ತಯಾರಕರು ಶನಿವಾರ ಘೋಷಿಸಿದ್ದಾರೆ. 2014ರಲ್ಲಿ ಬಿಡುಗಡೆಯಾಗಿದ್ದ ಇದೇ ಹೆಸರಿನ ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾದ ಮುಂದುವರಿದ ಭಾಗವಾಗಿ ಮೋಹಿತ್ ಸೂರಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಚಲನಚಿತ್ರ ನಿರ್ಮಾಣ ಕಂಪನಿ ಟಿ-ಸರಣಿ, 'ಏಕ್ ವಿಲನ್ ರಿಟರ್ನ್ಸ್' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆಯೊಂದಿಗೆ ಮೊದಲ ದಿನ ಆರಂಭಿಸಿದ್ದು, ಭಾರತದಲ್ಲಿ ಮೊದಲ ದಿನದಲ್ಲಿ 7.05 ಕೋಟಿ ಬಾಚಿಕೊಂಡಿದೆ ಎಂದು ಮಾಧ್ಯಮ ಹೇಳಿಕೆಯೊಂದರಲ್ಲಿ ಹೇಳಿದೆ. ದಿಶಾ ಪಟಾನಿ ಮತ್ತು ತಾರಾ ಸುತಾರಿಯಾ ಅವರು ತಾರಾಗಣದಲ್ಲಿರುವ ಈ ಚಲನಚಿತ್ರವನ್ನು ಏಕ್ತಾ ಕಪೂರ್ ಅವರ ಬ್ಯಾನರ್ ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ಭೂಷಣ್ ಕುಮಾರ್ ಅವರ ಟಿ-ಸೀರೀಸ್ ಅಡಿ ನಿರ್ಮಿಸಿದ್ದಾರೆ.

ಇದನ್ನೂ ಓದಿ : ಫಿಲ್ಮ್‌ಫೇರ್ ಅವಾರ್ಡ್ಸ್ 2022: ಕಾರ್ಯಕ್ರಮ ನಿರೂಪಿಸಲಿದ್ದಾರೆ ಬಾಲಿವುಡ್‍ನ ಗಲ್ಲಿಬಾಯ್

Last Updated : Jul 30, 2022, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.