ಶಾರುಖ್ ಖಾನ್ ಮತ್ತು ತಾಪ್ಸಿ ಪನ್ನು ತೆರೆ ಹಂಚಿಕೊಂಡಿರುವ 'ಡಂಕಿ' ಸಿನಿಮಾ ಕಳೆದ ಗುರುವಾರ ತೆರೆಗಪ್ಪಳಿಸಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ಅಂಕಿಅಂಶಗಳು ಉತ್ತಮವಾಗಿವೆ. ಆದರೆ ಪಠಾಣ್ ಮತ್ತು ಜವಾನ್ಗೆ ಹೋಲಿಸಿದರೆ ಕೊಂಚ ಹಿನ್ನಡೆ ಕಂಡಿದೆ. ಡಂಕಿ ಜೊತೆಗೇ ತೆರೆಕಂಡಿರುವ 'ಸಲಾರ್' ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.
ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಕಾಮಿಡಿ ಡ್ರಾಮಾ 'ಸಲಾರ್' ಜೊತೆ ಭರ್ಜರಿ ಪೈಪೋಟಿ ನಡೆಸುತ್ತಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಡಂಕಿ ತೆರೆಕಂಡ ಆರನೇ ದಿನ ಅತ್ಯಂತ ಕಡಿಮೆ ಹಣ ಸಂಪಾದಿಸಿದೆ. ಕಲೆಕ್ಷನ್ ಶೇ. 58.88ರಷ್ಟು ಕಡಿಮೆಯಾಗಿದೆ. ಮಂಗಳವಾರ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಡಂಕಿ 10.25 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ.
- " class="align-text-top noRightClick twitterSection" data="">
ಸ್ಯಾಕ್ನಿಲ್ಕ್ ವರದಿಯಂತೆ, ಡಂಕಿ ಬಾಕ್ಸ್ ಆಫೀಸ್ ಪ್ರಯಾಣವನ್ನು ಉತ್ತಮ ಅಂಕಿಅಂಶಗಳೊಂದಿಗೆ ಆರಂಭಿಸಿತು. ಚಿತ್ರ ಬಿಡುಗಡೆಯಾದ ದಿನ ಭಾರತದಲ್ಲಿ 29.2 ಕೋಟಿ ರೂ. ಗಳಿಸಿತ್ತು. ಎರಡನೇ ದಿನ 20.12 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಮೂರನೇ ದಿನ 25.61 ಕೋಟಿ ರೂ., ನಾಲ್ಕನೇ ದಿನ 30.7 ಕೋಟಿ ರೂ., ಐದನೇ ದಿನ 24.32 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಸಿನಿಮಾ ತನ್ನ ಮೊದಲ ಮಂಗಳವಾರದಂದು ಅತಿ ಕಡಿಮೆ ಕಲೆಕ್ಷನ್ ಮಾಡಿದೆ. ಆರನೇ ದಿನ 10.25 ಕೋಟಿ ರೂ. ಗಳಿಸಿದೆ.
ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 6 ದಿನಗಳ ಒಟ್ಟು ಕಲೆಕ್ಷನ್ 137.45 ಕೋಟಿ ರೂಪಾಯಿ. ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶಾರುಖ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಕಾಂಬಿನೇಶನ್ನ ಚೊಚ್ಚಲ ಚಿತ್ರವಿದು. ಸ್ಟಾರ್ ಕಾಂಬೋದ ಬಿಗ್ ಪ್ರಾಜೆಕ್ಟ್ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಪಠಾಣ್, ಜವಾನ್‌ನಷ್ಟು ಸದ್ದು ಮಾಡದಿದ್ದರೂ ಡಂಕಿ ಉತ್ತಮ ಪ್ರದರ್ಶನ ಕಾಣುತ್ತಿರುವುದನ್ನು ಅಲ್ಲಗೆಳೆಯುವಂತಿಲ್ಲ.
ಇದನ್ನೂ ಓದಿ: 'ಸಲಾರ್' ಗಳಿಕೆಯಲ್ಲಿ ಇಳಿಕೆ: ಪ್ರಶಾಂತ್ ನೀಲ್ ಸಿನಿಮಾ ಗಳಿಸಿದ್ದಿಷ್ಟು!
ಸಲಾರ್ ಕಲೆಕ್ಷನ್: ಡಂಕಿ ಗುರುವಾರ ತೆರೆಕಂಡಿದ್ದರೆ, ಸಲಾರ್ ಶುಕ್ರವಾರ ಬಿಡುಗಡೆ ಆಗಿದೆ. ಬಾಕ್ಸ್ ಆಫೀಸ್ ಪೈಪೋಟಿ ಜೋರಾಗಿಯೇ ನಡೆಯುತ್ತಿದ್ದು, ಸಲಾರ್ ಮುನ್ನಡೆ ಸಾಧಿಸಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಸಲಾರ್ ಮೊದಲ ದಿನ 90.07 ಕೋಟಿ ರೂ., ಎರಡನೇ ದಿನ 56.35 ಕೋಟಿ ರೂ., ಮೂರನೇ ದಿನ 62.05 ಕೋಟಿ ರೂ., ನಾಲ್ಕನೇ ದಿನ 41.24 ಕೋಟಿ ರೂ. ಐದನೇ ದಿನ 23.50 ಕೋಟಿ ರೂ. ಸಂಗ್ರಹಿಸಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಸರಿಸುಮಾರು 278.90 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ.
ಇದನ್ನೂ ಓದಿ: ಬರ್ತ್ಡೇ ಬಾಯ್ ಸಲ್ಲುಗೆ ಕಿಚ್ಚನ ಸ್ಪೆಷಲ್ ವಿಶ್