ETV Bharat / entertainment

'ಸಲಾರ್'​ ಅಬ್ಬರದ ನಡುವೆಯೂ 'ಡಂಕಿ' ಗಳಿಕೆಯಲ್ಲಿ ಅಲ್ಪ ಏರಿಕೆ - ಶಾರುಖ್​ ಖಾನ್​

Dunki collection: ಡಂಕಿ ಸಿನಿಮಾ ಭಾರತದಲ್ಲಿ ಮೂರನೇ ದಿನ 26 ಕೋಟಿ ರೂ. ಕಲೆಕ್ಷನ್​ ಮಾಡಿದೆ.

Dunki box office collection
ಡಂಕಿ ಬಾಕ್ಸ್ ಅಫೀಸ್​ ಕಲೆಕ್ಷನ್​​
author img

By ETV Bharat Karnataka Team

Published : Dec 24, 2023, 10:29 AM IST

ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿರುವ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ 'ಡಂಕಿ' ಸಿನಿಮಾ ಗುರುವಾರ ತೆರೆ ಕಂಡು, ಉತ್ತಮ ಪ್ರದರ್ಶನ ಮುಂದುವರೆಸಿದೆ. ಶುಕ್ರವಾರ ಸಲಾರ್​​ ಬಿಡುಗಡೆ ಆದ ಹಿನ್ನೆಲೆ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಎರಡೂ ಚಿತ್ರಗಳೂ ಕೂಡ ಭಾರತೀಯ ಚಿತ್ರರಂಗದ ಬಿಗ್​ ಪ್ರಾಜೆಕ್ಟ್​ ಆಗಿದ್ದು, ಸಲಾರ್​ ಎಲ್ಲಾ ವಿಚಾರಗಳಲ್ಲೂ ಒಂದು ಹೆಜ್ಜೆ ಮುಂದಿದೆ ಅಂತಲೇ ಹೇಳಬಹುದು.

ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಡಂಕಿ ಮೂರು ದಿನಗಳಲ್ಲಿ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 70 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಅದಾಗ್ಯೂ, ಬಾಲಿವುಡ್​​ ಕಿಂಗ್​ ಖ್ಯಾತಿಯ ಶಾರುಖ್ ಖಾನ್ ಅಭಿನಯದ ಈ ಹಿಂದಿನ ಎರಡು ಬ್ಲಾಕ್‌ಬಸ್ಟರ್‌ ಸಿನಿಮಾಗಳಾದ ಪಠಾಣ್​​ ಮತ್ತು ಜವಾನ್‌ಗೆ ಹೋಲಿಸಿದರೆ ಗಲ್ಲಾಪೆಟ್ಟಿಗೆಯಲ್ಲಿ ಡಂಕಿ ಹಿನ್ನಡೆ ಕಂಡಿದೆ ಅಂತಲೇ ಹೇಳಬಹುದು.

ನಾಲ್ಕು ವರ್ಷಗಳ ಬ್ರೇಕ್​ ಬಳಿಕ ಎಸ್​ಆರ್​ಕೆ ಪಠಾಣ್​​ ಮತ್ತು ಜವಾನ್‌ ಸಿನಿಮಾಗಳೊಂದಿಗೆ ಸದ್ದು ಮಾಡಿದರು. ಈ ಎರಡೂ ಸಿನಿಮಾಗಳೂ 1,000 ಕೋಟಿ ರೂ. ಕಲೆಕ್ಷನ್​​ ಮಾಡುವಲ್ಲಿ ಯಶ ಕಂಡಿದೆ. 2023ರ ಟಾಪ್​ ಕಲೆಕ್ಷನ್ ಮೂವಿಗಳೆಂದರೆ ಅದು ಪಠಾಣ್​​ ಮತ್ತು ಜವಾನ್‌. ಹಾಗಾಗಿ ಡಂಕಿ ಮೇಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಈ ಸಿನಿಮಾ ಕೊಂಚ ಹಿಂದೆ ಬಿದ್ದಿದೆ ಎಂದು ವರದಿಗಳು ಸೂಚಿಸಿವೆ.

ವರದಿಗಳ ಪ್ರಕಾರ, ಡಂಕಿ ಸಿನಿಮಾ ಭಾರತದಲ್ಲಿ ಮೊದಲ ದಿನ 29.2 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನ 20.12 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಮೂರನೇ ದಿನದ ಗಳಿಕೆ ಏರಿಕೆ ಕಂಡಿದ್ದು, 26 ಕೋಟಿ ರೂ. ಸಂಪಾದಿಸಿದೆ. ಮೂರು ದಿನಗಳಲ್ಲಿ ಭಾರತದಲ್ಲಿ ಒಟ್ಟು 75.32 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್​ ಖಾನ್​​ ಜೊತೆಗೆ ಚಿತ್ರದಲ್ಲಿ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮತ್ತು ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 3 ಈಡಿಯಟ್ಸ್ ಮತ್ತು ಪಿ.ಕೆ ಸಿನಿಮಾ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತು ಕಿಂಗ್​ ಖಾನ್ ಕಾಂಬಿನೇಶನ್​ನ ಚೊಚ್ಚಲ ಚಿತ್ರವಿದು.

ಇದನ್ನೂ ಓದಿ: ಇಳಿಕೆ ಕಂಡ 'ಡಂಕಿ' ಗಳಿಕೆ: 'ಸಲಾರ್​' ಅಬ್ಬರದೆದುರು ಮಂಕಾಯ್ತಾ ಶಾರುಖ್​ ಸಿನಿಮಾ?

ಇನ್ನೊಂದೆಡೆ, ಡಂಕಿ ಸಿನಿಮಾಗೆ ಭರ್ಜರಿ ಪೈಪೋಟಿ ಕೊಡುತ್ತಿರುವ ಸಲಾರ್​ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಲಾರ್ ಎರಡನೇ ದಿನ 57.61 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಮಾಹಿತಿಯಂತೆ, ಸಲಾರ್ ಮೊದಲ ದಿನ ದೇಶದಲ್ಲಿ 93.45 ಕೋಟಿ ರೂ. ಸೇರಿ ಜಾಗತಿಕವಾಗಿ ಒಟ್ಟು 178.7 ಕೋಟಿ ರೂ. ವ್ಯವಹಾರ ನಡೆಸಿದೆ.

ಇದನ್ನೂ ಓದಿ: 'ಸಲಾರ್' ಸಿನಿಮಾದಲ್ಲಿ ಕನ್ನಡಿಗರ ದರ್ಬಾರ್; ಹೊಂಬಾಳೆ ಫಿಲ್ಮ್ಸ್​ಗೆ ದೊಡ್ಡ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.