ETV Bharat / entertainment

ಮುದ್ದಿನ ಮಡದಿಗೆ ಶುಭ ಕೋರಿದ ದುಲ್ಕರ್​ ಸಲ್ಮಾನ್​: ಚಿತ್ರರಂಗದ ಸ್ನೇಹಿತರಿಂದಲೂ ಅಭಿನಂದನೆ - ಪ್ರೀತಿ ಪೂರ್ವಕ ಶುಭಾಶಯ

ದುಲ್ಕರ್​ ಮತ್ತು ಅಮಲ್​​ 2011ರಲ್ಲಿ ಮದುವೆಯಾಗಿದ್ದು, ಈ ಜೋಡಿಗೆ ಮರ್ಯಮ್​ ಅಮ್ರೀಹಾ ಸಲ್ಮಾನ್​ ಎಂಬ ಮುದ್ದಾದ ಮಗಳು ಇದ್ದಾಳೆ.

Dulquer Salmaan wishes wife Amaal on birthday with sweet post, Aditi Rao Hydari, Nazriya Fahadh follow suit

author img

By ETV Bharat Karnataka Team

Published : Sep 4, 2023, 3:44 PM IST

ಬೆಂಗಳೂರು: ಮಲೆಯಾಳಂ ನಟ ದುಲ್ಕರ್​ ಸಲ್ಮಾನ್​ ತಮ್ಮ ಮಡದಿ ಅಮಲ್​ ಸಲ್ಮಾನ್​ ಹುಟ್ಟು ಹಬ್ಬದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಪೂರ್ವಕ ಶುಭಾಶಯ ಕೋರಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಈ ಕುರಿತು ಫೋಟೋ ಹಂಚಿಕೊಂಡು ಸುದೀರ್ಘ ಅಡಿಬರಹವನ್ನು ಬರೆದಿದ್ದಾರೆ. 'ಮನೆಯಲ್ಲಿ ಕೇಳಿಬರುವ ಸಾಮಾನ್ಯ ಪದ ಎಂದರೆ ಅಮ್​​ಮ್​...!! ಮಮ್​ಮ್​ ಆಗಿದೆ. ನೀನು ಎಷ್ಟೇ ಬಳಲಿದರು. ನಿನ್ನ ದಿನ ಎಷ್ಟೇ ದೀರ್ಘವಾಗಿದ್ದರೂ, ನಮಗಾಗಿ ಸದಾ ನೀನು ಶಕ್ತಿಯನ್ನು ಹುಡುಕುತ್ತಿಯಾ. ಇದಕ್ಕಾಗಿ ಈಗಾಗಲೇ ಹಲವು ಬಾರಿ ನಿನಗೆ ಪ್ರಶಂಸೆ ನೀಡಿದ್ದೇವೆ. ನೀವು ಬದಲಾಗುವುದನ್ನು ನೋಡಿದ್ದೇನೆ. ಆದರೆ. ಪರಿವರ್ತನೆ ಆಗಿಲ್ಲ ನೀನು ನೀನಾಗಿಯೇ ಇದ್ದಿಯಾ. ಸರಾಗವಾಗಿ ನೀನು ಹಲವು ಪಾತ್ರವನ್ನು ನಿರ್ವಹಿಸುತ್ತೀಯ. ನಿನ್ನ ಶಾಂತಿಯ ಬಲ ಮತ್ತು ಸಾಮರ್ಥ್ಯದಿಂದ ನಮ್ಮ ಜೀವನದಲ್ಲಿ ಅನೇಕ ಜನರನ್ನು ಹಾಗೇ ಸೆಳೆಯುವಂತೆ ಮಾಡಿದೆ. ಸದಾ ನೀನು ನೀನಾಗಿಯೇ ಇರುವುದಕ್ಕೆ ಧನ್ಯವಾದಗಳು . ಹುಟ್ಟು ಹಬ್ಬದ ಶುಭಾಶಯಗಳು. ನಾನು ನಿನ್ನನ್ನು ಬಹಳ ಸಮಯದಿಂದ ಪ್ರೀತಿಸುತ್ತಿದ್ದೇನೆ' ಎಂದು ಪ್ರೀತಿಯ ಅಭಿಮಾನಪೂರ್ವಕ ಸಂದೇಶ ಬರೆದಿದ್ದಾರೆ.

ಇದರ ಜೊತೆಗೆ ಇಬ್ಬರ ಫೋಟೋವನ್ನು ನಟ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ದುಲ್ಕರ್​ ಮತ್ತು ಅಮಲ ಬಿಳಿ ಧರಿಸಿನಲ್ಲಿ ಕಂಡು ಬಂದಿದ್ದಾರೆ. ಎರಡನೇ ಫೋಟೋದಲ್ಲಿ ನಟ ಹೆಂಡತಿಯತ್ತ ಚಿತ್ತ ನೆಟ್ಟಿರುವುದು ಕಾಣಬಹುದಾಗಿದೆ.

ನಟ ಈ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಕೆಂಪು ಹೃದಯ ಎಮೋಜಿಗಳನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಮಾಳವಿಕ ಮೆನನ್​ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಶುಭಾಶಯ ಕೋರಿದ್ದಾರೆ. ಮತ್ತೊಬ್ಬ ಅಭಿಮಾನಿ, ನೀವು ಮೇಡ್​ ಫಾರ್​ ಈಚ್​ ಅದರ್​, ನಿಮ್ಮ ಪ್ರೀತಿ ಇತರರಿಗೆ ಪ್ರೇರಣೆ ನೀಡುತ್ತದೆ ಎಂದಿದ್ದಾರೆ.

ದುಲ್ಕರ್​ ಮತ್ತು ಅಮಲ್​​ 2011ರಲ್ಲಿ ಮದುವೆಯಾಗಿದ್ದು, ಈ ಜೋಡಿಗೆ ಮರ್ಯಮ್​ ಅಮ್ರೀಹಾ ಸಲ್ಮಾನ್​ ಎಂಬ ಮುದ್ದಾದ ಮಗಳು ಇದ್ದಾಳೆ.

ಇನ್ನು ದುಲ್ಕರ್​ ಮಡದಿ ಅಮಲ್​ಗೆ ಅನೇಕ ಸಿನಿ ಉದ್ಯಮದ ಮಂದಿ ಕೂಡ ಶುಭಾಶಯ ಕೋರಿದ್ದಾರೆ. ಬಾಲಿವುಡ್​ ನಟಿ ಅದಿತಿ ರಾವ್​ ಹೈದರ್​ ಕೂಡ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಅಮಲ್​ ಜೊತೆಗಿನ ಫೋಟೋ ಹಂಚಿಕೊಂಡು ಶುಭಕೋರಿದ್ದಾರೆ. ಮತ್ತೊಬ್ಬ ಮಲಯಾಳಂ ನಟಿ ನಜರಿಯಾ ಫಹಾದ್​ ಕೂಡ ಅಮಲ್​ಗೆ ಶುಭಾಶಯ ತಿಳಿಸಿದ್ದಾರೆ. ಫಹಾದ್​ ಫಸಲ್​ ಕೂಡ ಸಹೋದರಿಗೆ ಶುಭಾಶಯ ಎಂದಿದ್ದಾರೆ.

ಮಲಯಾಳಂ, ತೆಲುಗು ಮತ್ತು ಹಿಂದಿಯಲ್ಲಿ ಈಗಾಗಲೇ ಬಿಗ್​ ಹಿಟ್​ ನೀಡಿರುವ ದುಲ್ಕರ್​ ಸದ್ಯ ಗನ್ಸ್​ ಅಂಡ್​ ಗುಲಬ್ಸ್​ ಯಶಸ್ಸಿನಲ್ಲಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ಸದ್ಯ ಈ ವೆಬ್​ ಸಿರೀಸ್​ ಹಿಟ್​ ಆಗಿದೆ. ಕಿಂಗ್​ ಆಫ್​ ಕೋತಾ ಕೂಡ ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ: ಸಹೋದರನೊಂದಿಗಿನ ಫೋಟೋ ಹಂಚಿಕೊಂಡ ಸಾರಾ ಅಲಿ ಖಾನ್​: ಪಟೌಡಿ ವಂಶಸ್ಥರಿಗೆ ಫ್ಯಾನ್ಸ್​ ಮೆಚ್ಚುಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.