ETV Bharat / entertainment

ಮಾದಕ ವಸ್ತು ಆಧಾರಿತ 'ವೆಲ್‌ಕಮ್ ಟು ಕಾಶ್ಮೀರ್' ಸಿನಿಮಾದ ಟ್ರೇಲರ್ ಬಿಡುಗಡೆ

author img

By

Published : May 7, 2023, 1:04 PM IST

ಮಾದಕ ವಸ್ತು ಆಧಾರಿತ 'ವೆಲ್‌ಕಮ್ ಟು ಕಾಶ್ಮೀರ್' ಚಿತ್ರದ ಟ್ರೇಲರ್​ ಇಂದು ಬಿಡುಗಡೆಯಾಗಿದೆ.

Welcome To Kashmir
ವೆಲ್‌ಕಮ್ ಟು ಕಾಶ್ಮೀರ್

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾವೊಂದು ಬಾಲಿವುಡ್​ಗಾಗಿ ತಯಾರಾಗಿದೆ. ಹಿಂದಿ ಚಿತ್ರರಂಗಕ್ಕೆ ಕಾಶ್ಮೀರದ ಮೊದಲ ಚಲನಚಿತ್ರ ಎಂದು ಹೇಳಲಾದ 'ವೆಲ್‌ಕಮ್ ಟು ಕಾಶ್ಮೀರ್' ಟ್ರೇಲರ್​ ಇಂದು ಬಿಡುಗಡೆಯಾಗಿದೆ. ಟ್ರೇಲರ್​​ ಅನ್ನು ಪ್ರವಾಸೋದ್ಯಮ ಕಾರ್ಯದರ್ಶಿ ಸೈಯದ್ ಅಬಿದ್ ರಶೀದ್ ಶಾ ಅನಾವರಣಗೊಳಿಸಿದ್ದಾರೆ.

ಚಿತ್ರವನ್ನು ತಾರಿಕ್​ ಭಟ್​ ನಿರ್ದೇಶಿಸಿದ್ದು, ಮೇ 26 ರಂದು ಬಿಡುಗಡೆಗೊಳಿಸಲು ಚಿತ್ರತಂಡ ಯೋಜಿಸಿದೆ. ಈ ಚಿತ್ರವು ಕಣಿವೆ ನಗರಿಯ ಜನರನ್ನು ಸಕಾರಾತ್ಮಕವಾಗಿ ಬಿಂಬಿಸುವ ಗುರಿಯನ್ನು ಹೊಂದಿದೆ. ಪ್ರಮುಖವಾಗಿ ಮಹಿಳಾ ಸಬಲೀಕರಣ ಮತ್ತು ಮಾದಕ ವ್ಯಸನದ ಬಳಕೆ ಮತ್ತು ಅವುಗಳ ದುಷ್ಪರಿಣಾಮಗಳ ಮೇಲೆ ಕೇಂದ್ರೀಕರಿಸಿದೆ.

ಶ್ರೀನಗರದಲ್ಲಿನ ಐನಾಕ್ಸ್ ಚಿತ್ರಮಂದಿರದಲ್ಲಿ ಟ್ರೇಲರ್ ಅನಾವರಣಗೊಳಿಸಿ ಮಾತನಾಡಿದ ಸೈಯದ್​, "ಪ್ರಮುಖ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವ ಸಿನಿಮಾಗಳನ್ನು ಮಾಡಿರುವುದು ನಿಜಕ್ಕೂ ಸಂತಸದಾಯಕ. ಡ್ರಗ್ಸ್​ ಹಾವಳಿ ಪ್ರಪಂಚದಾದ್ಯಂತ ಬಹುದೊಡ್ಡ ಸಮಸ್ಯೆಯಾಗಿದೆ. ನಮ್ಮ ಸಮಾಜವು ಇಂತಹ ಮಾದಕ ವ್ಯಸನಗಳ ನಿರ್ಮೂಲನೆಗೆ ಶ್ರಮಿಸುತ್ತಿದೆ. ಆದರೆ ಈ ಕೆಲಸವನ್ನು ಮಾಡಬೇಕಾಗಿರುವುದು ಕೇವಲ ಒಂದು ಇಲಾಖೆ ಅಥವಾ ಸರ್ಕಾರ ಎನ್ನುವುದಕ್ಕಿಂತ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ." ಎಂದು ಹೇಳಿದರು.

ಮುಂದುವರೆದು, "ಕಾಶ್ಮೀರದವನಾದ ನನಗೆ ಇಂದು ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿರುವುದು ತುಂಬಾ ಖುಷಿ ತಂದುಕೊಟ್ಟಿದೆ. ಇಲ್ಲಿನ ನಗರದ ಸೋನ್ವಾರ್​ ಪ್ರದೇಶದಲ್ಲಿ ಐನಾಕ್ಸ್​ ಮಲ್ಟಿಫ್ಲೆಕ್ಸ್​ ಚಿತ್ರಮಂದಿರಗಳನ್ನು ಪುನರಾರಂಭಿಸಿರುವುದು ಸ್ಥಳೀಯ ಕಲಾವಿದರಿಗೂ ಅನುಕೂಲ ಮಾಡಿದೆ. ಸಿನಿಮಾವು ಮಾದಕ ವ್ಯಸನದ ವಿರುದ್ಧ ಹೋರಾಡುವುದು ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಹೇಳಿದೆ. ಇದು ಕಾಶ್ಮೀರಿ ಸಂಸ್ಕೃತಿಯನ್ನು ಮುಟ್ಟಿದೆ. ಜನರಿಗೆ ಈ ಸಿನಿಮಾ ಇಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ನುಡಿದರು.

ಇದನ್ನೂ ಓದಿ: 70 ದೇಶಗಳಲ್ಲಿ ತೆರೆ ಕಾಣಲಿದೆ 'ಆದಿಪುರುಷ್​' ಟ್ರೇಲರ್; ಪ್ರೇಕ್ಷಕರಲ್ಲಿ ಗರಿಗೆದರಿದ ನಿರೀಕ್ಷೆ​

ಬಳಿಕ, "ಒಬ್ಬ ಕಲಾವಿದನಾಗಿ ಏನೂ ಬೇಕಾದರೂ ಮಾಡಬಹುದು ಎಂಬುದನ್ನು ನಾನು ನಂಬುತ್ತೇನೆ. ಇಂತಹ ಸಿನಿಮಾಗಳು ಅನೇಕ ನಿರ್ದೇಶಕರನ್ನು ಕಣಿವೆ ನಗರಿಯತ್ತ ಆಕರ್ಷಿಸಲು ಮತ್ತು ಸ್ಥಳೀಯ ಕಲಾವಿದರನ್ನು ಉತ್ತೇಜಿಸಲು ಸಹಕಾರಿಯಾಗುತ್ತದೆ. ಪ್ರಸ್ತುತ ದಾಖಲೆಯಂತೆ ಕಾಶ್ಮೀರದಲ್ಲಿ ಚಲನಚಿತ್ರ ಪ್ರವಾಸೋದ್ಯಮವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಸ್ವಾಗತಾರ್ಹ ಹೆಜ್ಜೆಯಾಗಿದೆ. ನಾವು ಮುನ್ನೂರಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಇದರೊಂದಿಗೆ ಸೇರಿಸುತ್ತಿದ್ದೇವೆ" ಎಂದು ತಿಳಿಸಿದರು.

ಇದೇ ವೇಳೆ ಚಿತ್ರ ನಿರ್ದೇಶಕ ತಾರಿಕ್​ ಭಟ್​ ಮಾತನಾಡಿ, "ನಾವು ಸಿನಿಮಾವನ್ನು ಉತ್ತಮ ಉದ್ದೇಶ ಇಟ್ಟುಕೊಂಡು ಮಾಡಿದ್ದೇವೆ. ಹಾಗಾಗಿ ಜನರು ಚಿತ್ರವನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಇನ್ನೂ ಈ ಚಿತ್ರದಲ್ಲಿ ಡ್ರಗ್ಸ್​ ಬಳಕೆ ಮತ್ತು ದುಷ್ಪರಿಣಾಮಗಳನ್ನು ತೋರಿಸಲಾಗಿದೆ. ಮಾದಕ ವ್ಯಸನದಿಂದ ಮುಕ್ತಿ ಹೊಂದುವ ಸಂದೇಶವನ್ನು ಈ ಚಿತ್ರದ ಮೂಲಕ ನೀಡುತ್ತಿದ್ದೇವೆ" ಎಂದರು.

ಕಾಶ್ಮೀರಿ ಕಲಾವಿದರು ಮಾತ್ರ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಹೊಸಬರಾದ ಮತೀನ ರಜಪೂತ್ ಮತ್ತು ಅಹ್ಮದ್ ಶಹಾಬ್ ಪ್ರಮುಖ ಪಾತ್ರದಲ್ಲಿದ್ದಾರೆ. ಮೊದಲ ಬಾರಿಗೆ ಕಾಶ್ಮೀರಿ ಗಾಯಕ ಅಶ್ಫಾಕ್ ಕಾವಾ ಹಾಡುಗಳು ಈ ಚಿತ್ರಕ್ಕಿದೆ.

ಇದನ್ನೂ ಓದಿ: 10 ವರ್ಷದ ಬಳಿಕ ಸೂಪರ್​ ಹಿಟ್​ ಸಿನಿಮಾದ ಸೀಕ್ವೆಲ್​​: ಮತ್ತೆ ಪ್ರೀತಿಯಲ್ಲಿ ದೀಪಿಕಾ-ರಣ್​ಬೀರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.