ETV Bharat / entertainment

ಬಾಲಿವುಡ್​​ನಲ್ಲಿ ದೃಶ್ಯಂ ಹವಾ.. 100 ಕೋಟಿ ಕ್ಲಬ್ ​ಸೇರಲಿದೆ ದೃಶ್ಯಂ 2 ಸಿನಿಮಾ! - ಸೌತ್ ಸೂಪರ್‌ಸ್ಟಾರ್ ಮೋಹನ್ ಲಾಲ್

ಅಭಿಷೇಕ್ ಪಾಠಕ್ ನಿರ್ದೇಶನದ 'ದೃಶ್ಯಂ-2' ಚಿತ್ರದ ಮೇಕಿಂಗ್ ಬಜೆಟ್ ಕೇವಲ 50 ಕೋಟಿ ರೂ. ಹೀಗಿರುವಾಗ ಮೊದಲ ವಾರದಲ್ಲೇ ಸಿನಿಮಾ ದುಪ್ಪಟ್ಟುಗಳಿಕೆ ಮಾಡಿ ದಾಖಲೆ ಬರೆದಿದೆ.

Drishyam 2 Box Office Collection: movie to enter 100 crore club on 7th day
100 ಕೋಟಿ ಕ್ಲಬ್​ನತ್ತ ಸೇರಲಿದೆ ದೃಶ್ಯಂ 2 ಸಿನಿಮಾ
author img

By

Published : Nov 24, 2022, 5:06 PM IST

ಹೈದರಾಬಾದ್: ನವೆಂಬರ್ 18 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದೃಶ್ಯಂ 2 ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದೆ. ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ದಕ್ಷಿಣ ನಟಿ ಶ್ರಿಯಾ ಸರನ್ ಅಭಿನಯದ 'ದೃಶ್ಯಂ-2' ಚಿತ್ರ ಏಳನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಮಿಂಚುತ್ತಲೇ ಇದೆ. ಕೇವಲ 6 ದಿನಗಳಲ್ಲಿ 90 ಕೋಟಿ ಗಡಿ ದಾಟಿದ್ದು, ಏಳನೇ ದಿನಕ್ಕೆ ಚಿತ್ರ 100 ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದ 'ದೃಶ್ಯಂ 2' ಕೇವಲ 6 ದಿನಗಳಲ್ಲಿ ಬರೋಬ್ಬರಿ 96.04 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿರುವುದು ನೋಡಿದರೆ ಚಿತ್ರ ಏಳನೇ ದಿನಕ್ಕೆ100 ಕೋಟಿ ಕ್ಲಬ್ ಸೇರುವುದು ಖಚಿತವಾಗಿದೆ.

ಅಭಿಷೇಕ್ ಪಾಠಕ್ ನಿರ್ದೇಶನದ 'ದೃಶ್ಯಂ-2' ಚಿತ್ರದ ಮೇಕಿಂಗ್ ಬಜೆಟ್ ಕೇವಲ 50 ಕೋಟಿ ರೂ. ಹೀಗಿರುವಾಗ ಮೊದಲ ವಾರದಲ್ಲೇ ಸಿನಿಮಾ ದುಪ್ಪಟ್ಟುಗಳಿಕೆ ಮಾಡಿ ದಾಖಲೆ ಬರೆದಿದೆ. ಚಿತ್ರವು ಮೊದಲ ದಿನ 15.38 ಕೋಟಿ, ಎರಡನೇ ದಿನ 21.59 ಕೋಟಿ, ಮೂರನೇ ದಿನ 27.17 ಕೋಟಿ, ನಾಲ್ಕನೇ ದಿನ 11.87 ಕೋಟಿ, ಐದನೇ ದಿನ 10.48 ಕೋಟಿ ವ್ಯಾಪಾರ ಮಾಡಿದೆ. 6ನೇ ದಿನವಾದ ನಿನ್ನೆ 9.55 ಕೋಟಿ ಬಾಚಿಕೊಂಡಿದೆ. ಇದೀಗ 7ನೇ ದಿನವಾದ ಇಂದು ಚಿತ್ರ 100 ಕೋಟಿ ಕ್ಲಬ್ ಸೇರಲಿದೆ.

ಚಿತ್ರದ ಕಥೆ ಏನು?: ಸರಣಿ ಕೊಲೆ ರಹಸ್ಯವನ್ನು ಆಧರಿಸಿದ 'ದೃಶ್ಯಂ' ಚಿತ್ರ ಕೊನೆಯವರೆಗೂ ಸಸ್ಪೆನ್ಸ್​ನಿಂದ ಕೂಡಿದ್ದು ಪ್ರೇಕ್ಷಕರಲ್ಲಿ ಥ್ರಿಲ್​ ಹುಟ್ಟಿಸಿದೆ. ಎರಡು ಹೆಣ್ಣು ಮಕ್ಕಳ ತಂದೆಯಾಗಿರುವ ಸರಳ ಕುಟುಂಬದ ವಿಜಯ್ ಸಲಗಾಂವ್ಕರ್ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದು, ದಕ್ಷಿಣದ ಸುಂದರ ನಟಿ ಶ್ರಿಯಾ ಸರಣ್ ಅಜಯ್ ಅವರ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟಿ ಟಬು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಮಲಯಾಳಂ ಭಾಷೆಯಲ್ಲಿ ತಯಾರಾಗಿದ್ದ 'ದೃಶ್ಯಂ' ಮತ್ತು 'ದೃಶ್ಯಂ 2' ನಲ್ಲಿ ಸೌತ್ ಸೂಪರ್‌ಸ್ಟಾರ್ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ತೆರೆ ಮೇಲೆ ಕಂಡಿದ್ದರು. ಇದೀಗ ಬಾಲಿವುಡ್​ ನ ಅದೇ ಹೆಸರಿನ ಮೂವಿಗಳು ಹಿಂದಿಗೆ ರಿಮೇಕ್ ಆಗಿದೆ.

ಇದನ್ನು ಓದಿ: ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಏರುಪೇರು.. ಅಭಿಮಾನಿಗಳಿಗೆ ಉಪ್ಪಿ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.