ETV Bharat / entertainment

ಪ್ರೇಮಿಗಳ ದಿನಕ್ಕೆ ಉಡುಗೊರೆ ನೀಡಿದ 'ಡ್ರೀಮ್​ ಗರ್ಲ್​ 2' ಚಿತ್ರತಂಡ; ಏನಿದು ಪಠಾಣ್​ ಟ್ವಿಸ್ಟ್? - ಈಟಿವಿ ಭಾರತ್​ ಕನ್ನಡ

ಆಯುಷ್ಮಾನ್​ ಖುರಾನ್​ ಮತ್ತು ಅನನ್ಯಾ ಪಾಂಡೆ ನಟಿಸಿರುವ 'ಡ್ರೀಮ್​ ಗರ್ಲ್​​ 2' ಚಿತ್ರದ ಹಾಸ್ಯಭರಿತ ಟೀಸರ್​ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆ ಪಡೆದಿದೆ.

ಪ್ರೇಮಿಗಳ ದಿನಕ್ಕೆ ಉಡುಗೊರೆ ನೀಡಿದ 'ಡ್ರೀಮ್​ ಗರ್ಲ್​ 2' ಚಿತ್ರತಂಡ; ಏನಿದು ಪಠಾಣ್​ ಟ್ವಿಸ್ಟ್​​

author img

By

Published : Feb 14, 2023, 11:22 AM IST

ಮುಂಬೈ: ಪ್ರೇಮಿಗಳ ದಿನದ ಹಿನ್ನಲೆ ಆಯುಷ್ಮಾನ್​ ಖುರಾನ್​ ಮತ್ತು ಅನನ್ಯಾ ಪಾಂಡೆ ನಟನೆಯ 'ಡ್ರೀಮ್​​ ಗರ್ಲ್​ 2' ಚಿತ್ರದ ಟೀಸರ್​ ಅನ್ನು ಬಿಡುಗಡೆ ಮಾಡುವ ಮೂಲಕ ಸಿನಿ ತಂಡ ಅಭಿಮಾನಿಗಳಿಗೆ ಉಡುಗೊರೆ ನೀಡಿದೆ. ಈ ಟೀಸರ್​ನಲ್ಲಿ ಶಾರುಖ್​ ಖಾನ್​ 'ಪಠಾಣ್'​ ಲಿಂಕ್​ ನೀಡಿರುವುದು ವಿಶೇಷ. ಚಿತ್ರದಲ್ಲಿ ಪೂಜಾ ಪಾತ್ರ ನಿರ್ವಹಿಸಿರುವ ಅನನ್ಯಾಗೆ ಪಠಾಣ್​ ಹೆಸರಿನಲ್ಲಿ ಆಯುಷ್ಮಾನ್​ ಖುರಾನ್​ ಕರೆ ಮಾಡಿರುವ ಈ ಹಾಸ್ಯಭರಿತ ಟೀಸರ್​ ಅಭಿಮಾನಿಗಳನ್ನು ಸೆಳೆದಿದೆ.

ಸೋಮವಾರ ಅಂದರೆ, ಫೆ. 13ರ ಸಂಜೆ ಆಯುಷ್ಯಾನ್​ ಖುರಾನ್​ 'ಡ್ರೀಮ್​ ಗರ್ಲ್​ 2' ಟೀಸರ್​ ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲಂಕೃತಗೊಂಡು ಕುಳಿತಿರುವ ಪೂಜಾಗೆ ಕರೆ ಮಾಡುವ ಟೀಸರ್​ ಹೇಗೆ ಇರುವೆ, ಯಾವಾಗ ಬರುವೆ ಎಂದು ಶಾರುಖ್​ ಧ್ವನಿಯಲ್ಲಿ ಕೇಳಲಾಗುವುದು. ಚಿತ್ರ ಇದೆ ಜುಲೈ 7ಕ್ಕೆ ಬಿಡುಗಡೆಯಾಗಲಿರುವ ಹಿನ್ನೆಲೆ 7ನೇ ತಾರೀಖು ನಾನು ತಪ್ಪದೇ ಬರುತ್ತೇನೆ ಎಂದು ಪೂಜಾ ತಿಳಿಸುತ್ತಾಳೆ. ಇನ್ನು ಟೀಸರ್​ನಲ್ಲಿ ಪೂಜಾ ಮುಖವನ್ನು ಇನ್ನೂ ಬಹಿರಂಗ ಪಡಿಸಿಲ್ಲದಿರುವುದು ಮತ್ತೊಂದು ವಿಶೇಷ.

  • " class="align-text-top noRightClick twitterSection" data="">

ಈ ಹಾಸ್ಯಭರಿತ ಟೀಸರ್​ ಜನರ ಮೆಚ್ಚುಗೆ ಪಡೆದಿದೆ. ಇನ್ನು, ಈ ಟೀಸರ್​ಗೆ ಪ್ರತಿಕ್ರಿಯಿಸಿರುವ ಅನನ್ಯಾ, ನಾನು ಈ ಚಿತ್ರದ ಹಿರೋಯಿನ್​, ಯಾರಿದು ಡ್ರೀಮ್​ ಗರ್ಲ್​​ ಪೂಜಾ ಎಂದಿದ್ದಾರೆ.

ಬಾಲಾಜಿ ಟೆಲಿಫಿಲ್ಮ್ಸ್​ ಈ ಚಿತ್ರವನ್ನು ನಿರ್ಮಾಣ ಮಾಡಿದೆ. 2019ರಲ್ಲಿ ತೆರೆಕಂಡ 'ಡ್ರೀಮ್​ ಗರ್ಲ್' ಚಿತ್ರ ಸಿಕ್ಕಾಪಟ್ಟೆ ಯಶಸ್ಸು ಕಂಡಿತು. ಇದೀಗ 'ಡ್ರೀಮ್​ ಗರ್ಲ್​​ 2' ತೆರೆಗೆ ಬರಲು ಸಜ್ಜಾಗಿದ್ದು, ಟೀಸರ್​ನಲ್ಲಿ ತಿಳಿಸಿದಂತೆ ಜುಲೈ 7ಕ್ಕೆ ಚಿತ್ರ ಥಿಯೇಟರ್​​ನಲ್ಲಿ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಆಯುಷ್ಮಾನ್ ಖುರಾನ್​, ಅನನ್ಯ ಪಾಂಡೆ ಜೊತೆಗೆ ಪರೇಶ್ ರಾವಲ್, ರಾಜ್ಪಾಲ್ ಯಾದವ್, ಅಸ್ರಾನಿ, ವಿಜಯ್ ರಾಜ್, ಅನ್ನು ಕಪೂರ್, ಸೀಮಾ ಪಹ್ವಾ, ಮನೋಜ್ ಜೋಶಿ, ಅಭಿಷೇಕ್ ಬ್ಯಾನರ್ಜಿ ಮತ್ತು ಮಂಜೋತ್ ಸಿಂಗ್ ನಟಿಸಲಿದ್ದಾರೆ. ಚಿತ್ರವನ್ನು ರಾಜ್ ಶಾಂಡಿಲ್ಯ ನಿರ್ದೇಶಿಸಿದ್ದಾರೆ. ಏಕತಾ ಆರ್ ಕಪೂರ್ ನಿರ್ಮಿಸಿದ್ದಾರೆ. ಡ್ರೀಮ್​ ಗರ್ಲ್​ ಮೊದಲ ಭಾಗಕ್ಕಿಂತ ಈ ಚಿತ್ರ ಮತ್ತಷ್ಟು ಮನರಂಜನೆ ಜೊತೆ ಹಾಸ್ಯದ ರಸದೌತಣ ನೀಡಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಮೊದಲು 'ಡ್ರೀಮ್ ಗರ್ಲ್ 2;' ಅನ್ನು ಜೂನ್ 23 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿಯವರ 'ಸತ್ಯ ಪ್ರೇಮ್ ಕಿ ಕಥಾ' ಜೂನ್ 29 ರಂದು ಬಿಡುಗಡೆಯಾಗಲಿರುವ ಹಿನ್ನೆಲೆ, ಈ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲಾಗಿದ್ದು, ಜುಲೈ 7ಕ್ಕೆ ಬಿಡುಗಡೆಯಾಗುವುದು ಪಕ್ಕಾ ಎನ್ನುತ್ತಿದೆ ಚಿತ್ರತಂಡ.

ಇನ್ನು, ಈ ಚಿತ್ರದ ಬಗ್ಗೆ ಈ ಹಿಂದೆ ಮಾತನಾಡಿದ್ದ ಆಯುಷ್ಮಾನ್​ ಖುರಾನ್​, ಬಾಲಾಜಿ ಮೋಷನ್ ಪಿಕ್ಚರ್ಸ್‌ನೊಂದಿಗಿನ ಇದು ನನ್ನ ಎರಡನೇ ಪ್ರಾಜೆಕ್ಟ್​ ಆಗಿದೆ. ಚಿತ್ರದಲ್ಲಿ ರಾಜ್​ ಪಾತ್ರ ನಿರ್ವಹಿಸುತ್ತಿದ್ದು, ಈ ಪಾತ್ರ ನಿರ್ವಹಣೆಗೆ ಸಿಕ್ಕಾಪಟ್ಟೆ ಉತ್ಸುಕನಾಗಿದ್ದು, ಅನನ್ಯಾ ಪಾಂಡೆ ಈ ಚಿತ್ರದಲ್ಲಿ ನನಗೆ ಜೋಡಿಯಾಗಿದ್ದಾರೆ. ನಮ್ಮ ಇಬ್ಬರ ನಡುವೆ ಕೆಮಿಸ್ಟ್ರಿ ಚೆನ್ನಾಗಿ ಮೂಡಿ ಬಂದಿದೆ ಎಂದಿದ್ದರು.

ಇದನ್ನೂ ಓದಿ: 'ಪಠಾಣ್​' 19 ದಿನದಲ್ಲಿ 946 ಕೋಟಿ ಕಲೆಕ್ಷನ್​.. ಪಾರ್ಟ್​ 2 ಬರಲಿದೆಯಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.