ETV Bharat / entertainment

ಸೋನಾಕ್ಷಿ, ಹುಮಾ ಅಭಿನಯದ 'ಡಬಲ್ ಎಕ್ಸ್‌ಎಲ್' ಟ್ರೈಲರ್ ಬಿಡುಗಡೆ

author img

By

Published : Oct 12, 2022, 7:10 PM IST

ಬಾಲಿವುಡ್​ನ ಬಹು ನಿರೀಕ್ಷಿತ ಡಬಲ್ ಎಕ್ಸ್‌ಎಲ್ ಟ್ರೈಲರ್ ಬಿಡುಗಡೆ ಆಗಿದೆ.

Double XL trailer released
'ಡಬಲ್ ಎಕ್ಸ್‌ಎಲ್' ಟ್ರೈಲರ್ ಬಿಡುಗಡೆ

ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಖುರೇಷಿ ಅಭಿನಯದ ಬಹು ನಿರೀಕ್ಷಿತ ಡಬಲ್ ಎಕ್ಸ್‌ಎಲ್ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

ಸತಾರಾಮ್ ರಮಣಿ ನಿರ್ದೇಶನದ ಡಬಲ್ ಎಕ್ಸ್‌ಎಲ್ ಸಿನಿಮಾದಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಖುರೇಷಿ ಹೆಚ್ಚು ತೂಕ ಇರುವ ಹುಡುಗಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಸಮಾಜದಲ್ಲಿ ಅಧಿಕ ತೂಕ, ಅತೀ ದಪ್ಪ ಅಥವಾ ದುಂಡುಮುಖದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಮನೋರಂಜನಾತ್ಮಕ ಸಿನಿಮಾ ಮೂಡಿ ಬರುತ್ತಿದ್ದು, ನವೆಂಬರ್ 4ರಂದು ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್, ಇಂದು ಬಿಡುಗಡೆ ಆಗಿರುವ ಟ್ರೈಲರ್​ ಆಕರ್ಷಕವಾಗಿದೆ.

  • " class="align-text-top noRightClick twitterSection" data="">

ಸಮಾಜವು ಹೆಣ್ಣಿನ ಸೌಂದರ್ಯ, ದೇಹದ ತೂಕದ ಕುರಿತು ಹೇಗೆಲ್ಲಾ ಚರ್ಚೆ ನಡೆಸುತ್ತದೆ ಎಂಬುದನ್ನು ಹಾಸ್ಯಮಯವಾಗಿ ಹೇಳಲು ಈ ಚಿತ್ರ ಪ್ರಯತ್ನಿಸಿದೆ. ಜೊತೆಗೆ ಅಧಿಕ ತೂಕದ ಮಹಿಳೆಯರು ತಮ್ಮ ಗುರಿ ಹೇಗೆ ತಲುಪುತ್ತಾರೆ, ಕನಸನ್ನು ಹೇಗೆ ನನಸಾಗಿಸಿಕೊಳ್ಳುತ್ತಾರೆ, ಜೀವನದಲ್ಲಿ ಎದುರಿಸುವ ಸವಾಲುಗಳೇನು ಎಂಬ ಎಲ್ಲ ವಿಷಯಗಳನ್ನು ಚಿತ್ರ ಒಳಗೊಂಡಿದ್ದು, ಟೈಲರ್​ ಇದರ ಸಂಕ್ಷಿಪ್ತ ರೂಪವಾಗಿದೆ.

ಡಬಲ್ ಎಕ್ಸ್‌ಎಲ್ ಟ್ರೈಲರ್ ದೇಹದ ಸಕಾರಾತ್ಮಕತೆ ಬಗ್ಗೆ ಮಾತನಾಡುತ್ತದೆ. ಹುಮಾ ಮತ್ತು ಸೋನಾಕ್ಷಿ ಇಬ್ಬರೂ ಚಿತ್ರರಂಗದಲ್ಲಿ ತಮ್ಮ ಪ್ರಯಾಣದ ಸಮಯದಲ್ಲಿ ಅಧಿಕ ತೂಕದ ಕುರಿತ ಟೀಕೆಗಳನ್ನು ಎದುರಿಸಿದ್ದಾರೆ. ಈಗ ಈ ಇಬ್ಬರೂ ಡಬಲ್ ಎಕ್ಸ್‌ಎಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಚಿತ್ರದಲ್ಲಿ ಜಹೀರ್ ಇಕ್ಬಾಲ್, ಮಹತ್ ರಾಘವೇಂದ್ರ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಇನ್ನೂ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಶಿಖರ್ ಧವನ್ ಈ ಸಿನಿಮಾದಲ್ಲಿ ಧವನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ಗೆ ಎಂಟ್ರಿ ಕೊಡ್ತಿದ್ದಾರೆ ಶಿಖರ್​ ಧವನ್​.. ಗಬ್ಬರ್​ ಜೊತೆ ಹೆಜ್ಜೆ ಹಾಕಿದ ಆ ದಪ್ಪ ನಟಿ ಯಾರು!?

ಕಥೆಯನ್ನು ಮುದಸ್ಸರ್ ಅಜೀಜ್ ಬರೆದಿದ್ದಾರೆ ಮತ್ತು ಸತ್ರಮ್ ರಮಣಿ ನಿರ್ದೇಶಿಸಿದ್ದಾರೆ. ಟೀ ಸೀರಿಸ್, ವಕಾವೋ ಫಿಲ್ಮಸ್, ಎಲಿಮೆನ್​ 3 ಎಂಟರ್​ಟೈನ್​ಮೆಂಟ್​ ಈ ಚಿತ್ರವನ್ನು ನಿರ್ಮಿಸಿದೆ. ಡಬಲ್ ಎಕ್ಸ್‌ಎಲ್' ನವೆಂಬರ್ 4ರಂದು ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.