ETV Bharat / entertainment

'ಡಬಲ್ ಎಕ್ಸ್ಎಲ್' ರಿಲೀಸ್​: ದೇಹ ತೂಕ ಹೆಚ್ಚಿದ್ದಕ್ಕೆ ಪಾತ್ರ ಕಳೆದುಕೊಂಡಿದ್ದರಂತೆ ಹುಮಾ ಖುರೇಷಿ

author img

By

Published : Nov 4, 2022, 2:23 PM IST

ನಟಿ ಹುಮಾ ಖುರೇಷಿ ಅಭಿನಯದ 'ಡಬಲ್ ಎಕ್ಸ್‌ಎಲ್' ಚಿತ್ರ ಇಂದು ಬಿಡುಗಡೆಯಾಗಿದೆ.

huma-qureshi
ಹುಮಾ ಖುರೇಷಿ

ನವದೆಹಲಿ: ಸಮಾಜದಲ್ಲಿ ಅಂದ ಚಂದಕ್ಕೆ ಮೌಲ್ಯ ಜಾಸ್ತಿ. ದೇಹದ ಆಕಾರ, ತೂಕ ಅತಿಯಾಗಿದ್ದರೆ ಹೀಯಾಳಿಸುವವರು ಎಲ್ಲೆಂದರಲ್ಲಿ ಇರುತ್ತಾರೆ. ಅತಿಯಾದ ದೇಹದ ತೂಕ, ಆಕಾರದಿಂದಾಗಿ ಸಾಮಾನ್ಯ ಜನರಲ್ಲದೆ ಸಿನಿಮಾ ರಂಗದ ನಟ ನಟಿಯರು ನಿಂದನೆಯ ಜೊತೆ ಮಾನಸಿಕ ಖಿನ್ನತೆಗೂ ಒಳಗಾದ ಅನೇಕರು ಇದ್ದಾರೆ. ಇದೀಗ ಅದೇ ವಿಷಯದ ಆಧಾರದ ಮೇಲೆ ದೇಹದ ಸ್ವಯಂ ಪ್ರೀತಿ ಮತ್ತು ಸಕಾರಾತ್ಮಕತೆಯ 'ಡಬಲ್ ಎಕ್ಸ್ಎಲ್ ' ಎಂಬ ಹೊಸ ಚಲನಚಿತ್ರದ ಬಿಡುಗಡೆಯಾಗಿದೆ.

ಮುದಸ್ಸರ್ ಅಜೀಜ್ ಅವರು ಲಾಕ್ ಡೌನ್ ನಂತರ ದೇಹದ ತೂಕ ಹೆಚ್ಚಾಗಿದ್ದರ ಕುರಿತು ನಟ ನಟಿಯರು ನೀಡುತ್ತಿದ್ದ ಮಾಹಿತಿ ಆಧರಿಸಿ ಕಥೆ ಬರೆದಿದ್ದಾರೆ. ಈ ಚಲನಚಿತ್ರವು ನಾನು, ನನ್ನ ಕುಟುಂಬದವರು ಹಾಗೂ ಸ್ನೇಹಿತರು ನನ್ನ ಲಿವಿಂಗ್ ಕೊಣೆಯಲ್ಲಿ ಮಾಡುವ ಮೋಜಿನ ಸಂಭಾಷಣೆಯೊಂದಿಗೆ ಪ್ರಾರಂಭವಾಗುತ್ತದೆ. ನಿರ್ದೇಶಕ ಸತ್ರಮ್ ರಮಣಿ ಅವರು 'ಡಬಲ್ ಎಕ್ಸ್‌ಎಲ್' ಗಾಗಿ ತೂಕ ಹೆಚ್ಚಿಸಲು ಕೇಳಿಕೊಂಡರು. ಹೀಗಾಗಿ ಚಿತ್ರೀಕರಣದ ಬಿಡುವಿನ ವೇಳೆ ಬರೀ ಪೀಜ್ಜಾ ತಿನ್ನಿ ,ಬರ್ಗರ್ ತಿನ್ನಿ ಎಂಬುದೇ ಆಗಿತ್ತು ಎಂದು 36 ವರ್ಷದ ನಟಿ ಹುಮಾ ಖುರೇಷಿ ಬಹಿರಂಗಪಡಿಸಿದರು.

2012 ರಲ್ಲಿ 'ಗ್ಯಾಂಗ್ಸ್ ಆಫ್ ವಾಸೇಪುರ್' ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ಈ ಹಿಂದೆ ತನ್ನ ತೂಕದ ಕಾರಣದಿಂದ ಅನೇಕ ಪಾತ್ರಗಳಿಗೆ ತಿರಸ್ಕಾರವಾಗಿದ್ದೆ. ಈ ಚಿತ್ರದಲ್ಲಿ ನೋಟ, ಗಾತ್ರ ಅಥವಾ ಬಣ್ಣದಿಂದ ನಿರಾಶೆಗೊಂಡ ಪ್ರತಿಯೊಬ್ಬ ಮಹಿಳೆಯೊಂದಿಗೆ ನಾನು ಅನುರಣಿಸುತ್ತೇನೆ. ತನ್ನ ಈ ಚಿತ್ರ ಸಮಾಜದ ಮನಸ್ಥಿತಿಯನ್ನು ಬದಲಾಯಿಸುತ್ತದೆ, ನಾನು ಅತಿಯಾದ ತೂಕದ ಕಾರಣ ದೇಹ ನಿಂದನೆಗೆ ಒಳಗಾಗಿದ್ದೆ ಮತ್ತು ಇದೇ ಕಾರಣಕ್ಕೆ ಚಿತ್ರರಂಗ ನನಗೆ ಪಾತ್ರಗಳನ್ನು ಕೊಡಲು ನಿರಾಕರಿಸಿತ್ತು ಎಂದು ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡರು.

'ಡಬಲ್ ಎಕ್ಸ್‌ಎಲ್' ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್ ಮತ್ತು ಮಹತ್ ರಾಘವೇಂದ್ರ ಸೇರಿದಂತೆ ಅನೇಕ ನಟ ನಟಿಯರು ಬಣ್ಣ ಹಚ್ಚಿದ್ದು, ಇಂದು ಸಿನಿಮಾ ಬಿಡುಗಡೆಯಾಗಿದೆ.

ಇದನ್ನೂ ಓದಿ: ಮುಂಬೈಯಲ್ಲಿ ದೇಸಿ ಗರ್ಲ್ ಬಿನ್ನಾಣ: 3 ವರ್ಷದ ಬಳಿಕ ಪ್ರಿಯಾಂಕ ಆಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.