ETV Bharat / entertainment

ಜಗ್ಗೇಶ್​ ಜೊತೆ 'ತೋತಾಪುರಿ 2' ಸಿನಿಮಾದಲ್ಲಿ ಡಾಲಿ ಧನಂಜಯ್​ ಪಾತ್ರವೇನು ಗೊತ್ತಾ? - ಈಟಿವಿ ಭಾರತ ಕನ್ನಡ

'ತೋತಾಪುರಿ 2' ಸಿನಿಮಾದಲ್ಲಿ ಡಾಲಿ ಧನಂಜಯ್​ ಪಾತ್ರದ ಬಗ್ಗೆ ಕೆಲವು ಇಂಟ್ರಸ್ಟಿಂಗ್​ ವಿಚಾರಗಳನ್ನು ನಿರ್ಮಾಪಕ ಕೆ.ಎ.ಸುರೇಶ್​ ಹಂಚಿಕೊಂಡಿದ್ದಾರೆ.

dolly dhananjay
ಡಾಲಿ ಧನಂಜಯ್​
author img

By

Published : Aug 4, 2023, 4:23 PM IST

ನವರಸ ನಾಯಕ ಜಗ್ಗೇಶ್​ ನಟನೆಯ ಮುಂಬರುವ ಚಿತ್ರ 'ತೋತಾಪುರಿ 2'. ಇಡೀ ಜಗತ್ತೇ ಒಂದು ಮನೆ, ನಾವೆಲ್ಲಾ ಒಂದೇ ಸೂರಿನಡಿ ಬದುಕುತ್ತಿರುವವರು ಎಂಬ ಭಾವೈಕ್ಯತೆಯ ಸಂದೇಶ ಸಾರುವ, ಸ್ಟ್ರಾಂಗ್​ ಕಂಟೆಂಡ್​ ಒಳಗೊಂಡಿದ್ದ ತೋತಾಪುರಿ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಅದರ ಮುಂದುವರೆದ ಭಾಗ 'ತೋತಾಪುರಿ 2' ಹೆಸರಿನಲ್ಲಿ ಸಿದ್ಧಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ.

ಈಗಾಗಲೇ ಸಿನಿಮಾದ ಪೋಸ್ಟರ್​ ಮತ್ತು ಹಾಡು ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆದಿದೆ. ಚಿತ್ರದಲ್ಲಿ ಜಗ್ಗೇಶ್​ ಜೊತೆ ಡಾಲಿ ಧನಂಜಯ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನವರಸ ನಾಯಕ ಮತ್ತು ಡಾಲಿ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಯಾವಾಗಲೂ ಖಡಕ್​ ಪಾತ್ರಗಳನ್ನು ಆಯ್ದುಕೊಳ್ಳುವ ಡಾಲಿ ಇದೀಗ ಎರಡು ಭಾಗಗಳಲ್ಲಿ ಮೂಡಿ ಬಂದಿರುವ ರೊಮ್ಯಾಂಟಿಕ್​ ಕಾಮಿಡಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ತೋತಾಪುರಿ ಮೊದಲ ಭಾಗದ ಅಂತ್ಯದಲ್ಲಿ ಕಾಣಿಸಿಕೊಂಡು ಒಂದು ಸ್ಪೆಷಲ್ ಲುಕ್ ನೀಡಿದ್ದ ಧನಂಜಯ್ ಈ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಪಾತ್ರ ಚಿತ್ರದಲ್ಲಿ ಬಹಳ ವಿಶೇಷವಾಗಿ ಮೂಡಿಬಂದಿದೆ. ಆದರೆ ಅವರ ಗೆಟಪ್​, ಡೈಲಾಗ್​, ಎಷ್ಟು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬಿತ್ಯಾದಿ ವಿಚಾರಗಳ ಕುರಿತು ಚಿತ್ರತಂಡ ಈವರೆಗೆ ಮಾಹಿತಿ ನೀಡಿರಲಿಲ್ಲ. ಆದರೆ ಇದೀಗ 'ತೋತಾಪುರಿ 2' ಬಿಡುಗಡೆ ಹಂತಕ್ಕೆ ಬಂದಿದ್ದು, ಹೀಗಾಗಿ ಡಾಲಿ ಪಾತ್ರದ ಬಗ್ಗೆ ಕೆಲವು ಇಂಟ್ರಸ್ಟಿಂಗ್​ ವಿಚಾರಗಳನ್ನು ನಿರ್ಮಾಪಕ ಕೆ.ಎ.ಸುರೇಶ್​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ತೋತಾಪುರಿ 2 ಫಸ್ಟ್ ಲುಕ್​ ಅನಾವರಣ: ನವರಸನಾಯಕ ಜಗ್ಗೇಶ್ ಸಿನಿಮಾದಲ್ಲಿ ಡಾಲಿ ಧನಂಜಯ್ ಮಿಂಚು

ಚಿತ್ರದಲ್ಲಿ ನಾರಾಯಣ ಪಿಳ್ಳೈ ಎಂಬ ಪಾತ್ರವನ್ನು ನಿರ್ವಹಿಸುತ್ತಿರುವ ಡಾಲಿ ಧನಂಜಯ್​ ಬೃಹತ್​ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಲೈಫ್​ಸ್ಟೈಲ್​, ಲವ್​ಸ್ಟೋರಿ ಸೇರಿದಂತೆ ಇನ್ನಿತರ ವಿಷಯಗಳನ್ನು 'ತೋತಾಪುರಿ 2' ಚಿತ್ರದಲ್ಲಿ ತೆರೆದಿಡುವ ಪ್ರಯತ್ನವಾಗಿದೆಯಂತೆ. ಇತ್ತೀಚೆಗಷ್ಟೇ ಡಾಲಿ ಹಾಗೂ ಸುಮನ್​ ರಂಗನಾಥ್​ ಕಾಣಿಸಿಕೊಂಡಿರುವ 'ಮೊದಲ ಮಳೆ' ಹಾಡು ಬಿಡುಗಡೆಯಾಗಿತ್ತು. ಇದೀಗ 'ಲಾಂಗ್​ ಡ್ರೈವ್​ ಹೋಗೋಣ' ಎಂಬ ಹಾಡು ಕೂಡ ಬಿಡುಗಡೆಯಾಗಿದೆ.

ಚಿತ್ರದಲ್ಲಿ ಡಾಲಿ ಮೂರ್ನಾಲ್ಕು ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಶೇಡ್​ ಕೂಡ ಇರಲಿದೆ ಎಂಬುದು ಸದ್ಯದ ಮಾಹಿತಿ. ಈವರೆಗೂ ಕಾಣಿಸಿಕೊಂಡಿರದ ಸ್ಟೈಲ್​, ಮಾತಿನ ಲಹರಿ 'ತೋತಾಪುರಿ 2' ಮೂಲಕ ಅನಾವರಣ ಮಾಡಲು ಚಿತ್ರತಂಡ ಸಜ್ಜಾಗಿದೆ. ಬಿಡುಗಡೆಗೂ ಮುನ್ನ ಡಾಲಿ ಧನಂಜಯ್​ ಗೆಟಪ್​ಗಳನ್ನು ಹರಿಬಿಟ್ಟಿರುವ ಚಿತ್ರತಂಡ ಸಿನಿಮಾ ಮೇಲೆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಮೈಸೂರು, ಕೂರ್ಗ್, ಕೇರಳ ಸೇರಿದಂತೆ ರಮಣೀಯ ಸ್ಥಳಗಳಲ್ಲಿ ಡಾಲಿ ಮತ್ತು ಸುಮನ್​ ರಂಗನಾಥ್ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.

ಚಿತ್ರತಂಡ: ತೋತಾಪುರಿ 2 ಸಿನಿಮಾದಲ್ಲಿ ಡಾಲಿ ಧನಂಜಯ್​ ಜೋಡಿಯಾಗಿ ಸುಮನ್​ ರಂಗನಾಥ್ ನಟಿಸಿದ್ದಾರೆ. ಇವರಲ್ಲದೇ, ಜಗ್ಗೇಶ್​, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್​, ಹೇಮಾದತ್​ ಸೇರಿದಂತೆ ಅನೇಕರು ನಟಿಸಿದ್ದಾರೆ. ವಿಜಯ ಪ್ರಸಾದ್​ ನಿರ್ದೇಶನವಿರುವ ಈ ಚಿತ್ರವನ್ನು, ಕೆ.ಎ ಸುರೇಶ್​ ನಿರ್ಮಾಣ ಮಾಡಿದ್ದಾರೆ. ಚಿತ್ರವು ಆಗಸ್ಟ್​ 11 ರಂದು ತೆರೆ ಕಾಣಲಿದೆ.

ಇದನ್ನೂ ಓದಿ: Jaggesh: ರಜನಿ 'ಜೈಲರ್​' ಜೊತೆ ಜಗ್ಗೇಶ್​ 'ತೋತಾಪುರಿ 2' ಸಿನಿಮಾ ಬಿಡುಗಡೆ; ಯಾವಾಗ ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.